ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಏನೆಲ್ಲಾ ಅನಾಹುತ ಸಂಭವಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೂ ಕೂಡಾ ಪಾಲಿಕೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಆದರೆ ಈ ಬಾರಿ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಅಂದರೆ, ಮತ್ತೊಮ್ಮೆ ದುರಂತಕ್ಕೆ ಮುನ್ನುಡಿ ಆಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.
ಈ ಮುಂಗಾರಿಗೂ ಮರಗಳಿಗೂ ಏನ್ ಸಂಬಂಧ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಈ ಮಾನ್ಸೂನ್‌ನಲ್ಲಿ ಮರದ ಕೊಂಬೆಗಳು ಬೀಳುವುದರ ಸಂಖ್ಯೆ ಹೆಚ್ಚಾಗಲಿದೆ ಅಂತ ಹವಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಪ್ರೀ ಮಾನ್ಸೂನ್‌ನಲ್ಲಿ ಗಾಳಿಯ ವೇಗ ಹೆಚ್ಚೋದ್ರಿಂದ ಮರಗಳು ಬೀಳುತ್ತವೆ. ಪ್ರತಿ ಪ್ರೀ ಮಾನ್ಸೂನ್‌ಗೂ ಗಾಳಿ ಹೆಚ್ಚು ವೇಗದಲ್ಲಿ ಬೀಸಲಿದ್ದು, 30 ರಿಂದ 40 kmph ವೇಗದಲ್ಲಿ ಬೀಸಲಿದೆ. ಇದರಿಂದ ಥಂಡರ್ ಕ್ಲೌಡ್‌ನಿಂದ ಗಾಳಿ ಕೆಳಗೆ ಬರಲಿದೆ. ಈ ಎಲ್ಲಾ ಕಾರಣದಿಂದ ಮರಗಳು, ಇದರ ರೆಂಬೆ, ಕೊಂಬೆಗಳು ಬೀಳುವ ಸಾಧ್ಯತೆ ಕೂಡಾ ಇರಲಿದೆ ಎಂದು ಹವಮನಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ ಈ ಬಾರಿ ಬೇಸಿಗೆಯ ಬೇಗೆ ಹೆಚ್ಚಾಗಿರುವುದರಿಂದ ಗುಡುಗು ಮಿಂಚು ಸಹಿತ ಮಳೆ ಬೀಳುತ್ತಿದೆ. ಮಿಂಚು ಹೆಚ್ಚಾದರೆ ಮರಕ್ಕೆ ಬೆಂಕಿ ಬೀಳೋ ಸಂಭವ ಕೂಡ ಇರಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಮಿಂಚು ಸಹಿತ ಮಳೆ ಬಂದು ಹಲವೆಡೆ ಅನಾಹುತಗಳು ಸಂಭವಿಸಿದೆ. ಮಿಂಚು ಬರುವ ವೇಳೆ ಗಿಡಗಳು ಕೆಳಗೆ ಬಿದ್ದರೆ ಲೈಟಿಂಗ್ ಸ್ಕ್ರೈಕ್ ಆಗುವ ಸಂಭವ ಕೂಡಾ ಇರುತ್ತೆ. ಇದರಿಂದ ಬಹಳ ಜಾಗೃತವಾಗಿರಬೇಕು ಮರಗಳ ಹತ್ತಿರ ಜನರು ನಿಲ್ಲಬಾರದು, ಸಂಜೆ ಮೇಲೆ ಆದಷ್ಟು ಹೊರಗೆ ಬರುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ನಗರದಲ್ಲಿ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳುತ್ತಿವೆ. ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಮರದ ಕೊಂಬೆಗಳು ಹಾಗೂ ಮರಗಳು ಬಿದ್ದಿವೆ. ಆದಷ್ಟು ಬೇಗ ಪಾಲಿಕೆ ವಯಸ್ಸಾಗಿರುವ ಮರಗಳ ಸರ್ವೇ ಮಾಡಬೇಕು. ಒಣಮರಗಳ ಕೊಂಬೆಗಳನ್ನು ಕತ್ತರಿಸಬೇಕು. ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಜಾಗೃತವಾಗಿ ಕಟ್ ಮಾಡಬೇಕು. ಮರಗಳ ಬಗ್ಗೆ ಹೆಚ್ಚು ಗಮನ ಹರಿಸದೆ ಹೋದ್ರೆ ಇದರಿಂದ ಬೆಂಗಳೂರಿಗೆ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆ ಆಗಲಿದೆ. ಪಾಲಿಕೆಯಿಂದ ಪ್ರತಿ ಮಳೆಗಾಲದ ಸಂದರ್ಭದಲ್ಲೂ ಹೆಚ್ಚು ಮುಂಜಾಗ್ರತಾ ಕ್ರಮ ತಗೊಳ್ಳುವ ಭರವಸೆ ನೀಡಲಾಗುತ್ತೆ. ಆದರೆ ಪ್ರತಿ ಬಾರಿಯೂ ಮಳೆಗೆ ಆಗುವ ಅನಾಹುತಗಳಿಂದ ಬೆಂಗಳೂರಿಗೆ ಮುಕ್ತಿಯಿಲ್ಲ. ಹೀಗಾಗಿ ಈ ಬಾರಿಯ ಮುಂಗಾರಿಗಾದರೂ ಅನಾಹುತ ಸಂಭವಿಸುವ ಮುನ್ನ ಪಾಲಿಕೆ ಎಚ್ಚರಿಕೆ ವಹಿಸಬೇಕಿದೆ.






