ಹಲಾಲ್ ಕಟ್, ಅಝಾನ್ ಹೀಗೆ ಸಾಲು ಸಾಲು ವಿವಾವದಗಳ ಬಳಿಕ ಇದೀಗ ಹಿಂದೂ ಪರ ಸಂಘಟನೆಗಳು ಕಣ್ಣು ಕ್ರೈಸ್ತ ಶಾಲೆಯೊಂದರ ಮೇಲೆ ಬಿದ್ದಿದೆ. ನಗರದ ಪಾಟರಿ ಟೌನ್ ನಲ್ಲಿರುವ ಕ್ಲಾರೆನ್ಸ್ ಶಾಲೆ ವಿರುದ್ಧ ಹಿಂದೂ ಪರ ಸಂಘಟನೆಗಳು ಕೊತಕೊತ ಕುದಿದು ನಿಂತಿದೆ. ಶಾಲೆ ಮೇಲೆ ಬೈಬಲ್ ಕಡ್ಡಾಯ ಮಾಡಿರುವ ಆರೋಪ ಈಗ ಕೇಳಿ ಬಂದಿದೆ.
ಕ್ಲಾರೆನ್ಸ್ ಹೈ ಸ್ಕೂಲ್ ವಿರುದ್ಧ ಹಿಂದೂಪರ ಸಂಘಟನೆ ಆಕ್ರೋಶ
ಈಗಾಗಲೇ ರಾಜ್ಯ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗಿದೆ. ಇದರ ನಡುವೆ ಇದೀಗ ಕ್ರೈಸ್ತ ಶಾಲೆಯಲ್ಲಿ ಕ್ರೈಸ್ತರಲ್ಲದೆ ಇತರೆ ಧರ್ಮದ ಮಕ್ಕಳಿಗೂ ಒತ್ತಾಯ ಪೂರ್ವಕವಾಗಿ ಬೈಬಲ್ ಓದಿಸಲಾಗುತ್ತಿದೆ ಎಂದು ಹಿಂದೂ ಜನ ಜಾಗೃತಿ ವೇದಿಕೆ ಮುಖಂಡರು ಆರೋಪಿಸುತ್ತಿದ್ದಾರೆ. ಹೌದು, ನಗರದ ಪಾಟರಿ ಟೌನ್ ನಲ್ಲಿರುವ ಕ್ಲಾರೆನ್ಸ್ ಹೈ ಸ್ಕೂಲ್ ನ ಪಠ್ಯಕ್ರಮದಲ್ಲಿ ಬೈಬಲ್ ಕಡ್ಡಾಯ ಮಾಡಲಾಗಿದ್ದು, ಹಿಂದೂ ಮಕ್ಕಳಿಗೆ ಒತ್ತಾಯದಿಂದ ಬೈಬಲ್ ಓದುವಂತೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಈ ಶಾಲೆಯ ವೆಬ್ ಸೈನ್ ಬ್ರೌಶರ್ ನಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಕ್ರಮ ತೆಗೆದುಕೊಳ್ಳಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಕ್ರೈಸ್ತಯೇತರ ಮಕ್ಕಳಿಗೆ ಬೈಬಲ್ ಶಿಕ್ಷಣವನ್ನು ಕಡ್ಡಾಯ ಮಾಡಿರುವುದಕ್ಕೆ ಕಿಡಿ !
ಬೈಬಲ್ ಶಿಕ್ಷಣವನ್ನು ಕ್ರೈಸ್ತಯೇತರ ಮಕ್ಕಳಿಗೆ ಕಡ್ಡಾಯ ಮಾಡಿರುವುದು ಈ ಶಾಲೆಯ Declaration ನಲ್ಲಿ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಕ್ರೈಸ್ತಯೇತರ ವಿದ್ಯಾರ್ಥಿಗಳ ಮೇಲೆ ಬೈಬಲ್ ಧಾರ್ಮಿಕ ಗ್ರಂಥವನ್ನು ಬಲವಂತವಾಗಿ ಹೇರಳಾಗಿದೆ ಎಂಬ ಆರೋಪ ಸದ್ಯದ್ದು. ಈ ಮೂಲಕ ಈ ಶಿಕ್ಷಣ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ಮತ್ತು ಸಂವಿಧಾನದ ಕಲಂ 25ನ್ನು ಉಲ್ಲಂಘಿಸಲಾಗಿದೆ. ಮಕ್ಕಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ಆಘಾತವಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಸಿಲಬಸ್‌ನಲ್ಲಿ ಬೈಬಲ್ ಇದ್ದರೆ ಕ್ರಮ : ಶಿಕ್ಷಣ ಸಚಿವ !
ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸಿಲೆಬಸ್ ನಲ್ಲಿ ಬೈಬಲ್ ಸೇರಿಸುವ ಹಾಗಿಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳು ಜೊತೆ ಚೆರ್ಚಿಸಿ ಮಾಡ್ತೇನೆ. ಅದು ಏನಂತ ನೋಡಿ ಕ್ರಮಕ್ಕೆ ಮುಂದಾಗ್ತೇನೆ. ಪಠ್ಯಕ್ರಮದಲ್ಲಿ ಬೈಬಲ್ ಓದು ಸೇರಿಸುವ ಹಾಗಿಲ್ಲ.ಯೇಸು ಜೀವನ ಚರಿತ್ರೆ ಹೇಳಿಕೊಡುವುದು ತಪ್ಪಲ್ಲ. ಆದರೆ ಸಿಲೆಬಸ್ ನಲ್ಲೇ ಬೈಬಲ್ ಸೇರಿಸಿಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕ್ಲಾರೆನ್ಸ್ ಹೈ ಸ್ಕೂಲ್ ಆಡಳಿತ ಮಂಡಳಿ ನಿರಾಕರಿಸಿದೆ. ಶಾಲೆಯ ವೆಬ್ ಸೈಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿರುವುದು ಮಾತ್ರ ನಿಜ. ಆದರೆ ಪಠ್ಯಕ್ರಮದಲ್ಲಿ ಬೈಬಲ್ ಬೋಧನೆಯಾಗುತ್ತಿದೆಯಾ ಎಂಬ ಅನುಮಾನ ಸದ್ಯದ್ದು. ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡ ಬಳಿಕ ಇದರ ನಿಜಾಂಶ ತಿಳಿಯಲಿದೆ.












