ಉತ್ತರಪ್ರದೇಶದ ಆಗ್ರಾದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕನ ಮನೆಯನ್ನು ಗುಂಪೊಂದು ಸುಟ್ಟು ಹಾಕಿದೆ.
ಈ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿಗಳು ಹೆಚ್ಚು ಪ್ರಸಿದ್ದಿಯಿಲ್ಲದ ಹಿಂದೂ ಸಂಘಟನೆಯ ಸದಸ್ಯರು ಯುವಕನ ಮನೆಯನ್ನು ಸುಟ್ಟು ಹಾಕಿದೆ ಮತ್ತು ಆತನ ಸಂಬಂಧಿಕರ ಮನೆಗಳನ್ನು ಹಾನಿಗೊಳಿಸಿ ಅವರುಗಳಿಗೆ ವ್ಯಾಪಾರ ನಡೆಸದಂತೆ ಬೆದರಿಕೆ ಹಾಕಿದೆ ಎಂದು ಹೇಳಿದ್ದಾರೆ.
ಪೊಲೀಸ್ ಮೂಲಗಳು ಹೇಳುವ ಪ್ರಕಾರ ಕೆಲವು ದಿನಗಳ ಹಿಂದೆ ರುಂಕಟಾ ಪ್ರದೇಶದಲ್ಲಿ ಜಿಮ್ ನಡೆಸುತ್ತಿದ್ದ ಸಾಜಿದ್ ಎಂಬ ವ್ಯಕ್ತಿಯೊಂದಿಗೆ ಹಿಂದೂ ಯುವತಿ ಒಡಿ ಹೋಗಿದ್ದಳು. ನಂತರ ಸಾಜಿದ್ ಹಿಂದೂ ಧರ್ಮಕ್ಕೆ ಮತಾಂತರಗೊಂಡು ದೆಹಲಿಯಲ್ಲಿ ಯುವತಿಯನ್ನು ವಿವಾಹವಾಗಿದ್ದಾನೆ. ದಂಪತಿಗಳು ತಮ್ಮ ವಿವಾಹದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಯುವತಿ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು ತಾನು ವಯಸ್ಕರಳಾಗಿದ್ದು ತಾನು ಸ್ವ ಇಚ್ಚೆಯಿಂದ ಸಾಜಿದ್ನನ್ನು ವಿವಾಹವಾಗಿರುವುದಾಗಿ ಹೇಳಿದ್ದಾಳೆ. ಸಾಜಿದ್ ಹಿಂದೂ ಧರ್ಮಕ್ಕೆ ಮತಂತಾರವಾದ ನಂತರ ತನ್ನ ಹೆಸರನ್ನು ಸಾಹಿಲ್ ಎಂದು ಬದಲಿಸಿಕೊಂಡಿದ್ದಾನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.

ತಡನಂತರ ಯುವತಿಯ ಪೋಷಕರು ಮಗಳು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ ನಂತರ ಪೊಲೀಸರು ಯುವತಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಕೋಪಗೊಂಡ ಧರಂ ಜಾಗರಣ ಸಮನ್ವಯ ಸಂಘದ ಸದಸ್ಯರು ಸಾಜಿದ್ ಹಾಗೂ ಆತನ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿ ಮನೆಗೆ ಬಂಕಿ ಹಚ್ಚಿದ್ದಾರೆ.
ಘಟನೆಯ ನಂತರ ಒಟ್ಟು 8 ಜನರ ವಿರುದ್ದ ಪ್ರಕರಣವನ್ನ ದಾಕಲಿಸಲಾಗಿದು ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ. ಬೇಜವಾಬ್ದಾರಿ ಆರೋಪದ ಮೇಲೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.






