ಈ ಹಿಂದೆ ಬಿಹಾರ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಲಾಲು ಪ್ರಸಾದ್ ಯಾದವ್ ವಿರುದ್ದ ಕೇಳಿ ಬಂದಿದ್ದ ಬಹುಕೋಟಿ ಮೇವು ಹಗರಣ (Doranda Treasury) ಪ್ರಕರಣದಲ್ಲಿ ಲಾಲು ಪ್ರಸಾದ್ ಯದವ್ಗೆ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಹಾಗೂ 60 ಲಕ್ಷ ರೂಪಾಯಿ ದಂಡವನ್ನುವಿಧಿಸಿದೆ.
ಜನವರಿ 29ರಂದು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಫೆಬ್ರವರಿ 18ರಂದು ಲಾಲು ದೋಷಿ ಎಂದು ತೀರ್ಪು ನೀಡಿತ್ತು. ಈ ಹಿಂದೆ ಲಾಲು ಪ್ರಸಾದ್ ಯಾದವ್ ಬಹುಕೋಟಿ ಮೇವು ಹಗರಣದಲ್ಲಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.


