ಹಿಜಾಬ್ ಸಂಗತಿ ವಿವಾದವಾಗುವ ಮೊದಲೇ ಎರಡೂ ರಾಷ್ಟ್ರೀಯ ಪಕ್ಷಗಳು ಎಚ್ಚೆತ್ತುಕೊಂಡು ನಿಭಾಯಿಸುವ ಮೂಲಕ ಸಮಸ್ಯೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯವಾಗಿ ಹಲವಾರು ಬೆಳವಣಿಗೆಗಳು ನಡೆದಿವೆ. ನ್ಯಾಯಾಲಯವು ಅಂತಿಮವಾಗಿ ಏನು ನಿರ್ಧರಿಸುತ್ತದೆ ಎಂಬುದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನು ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯಿಸುವುದಿಲ್ಲ,’’ ಎಂದಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪುತ್ರ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆಯ ಇದೆ ಪ್ರಶನೆಗೆ ಪ್ರತಿಕ್ರಿಯಿಸಿ, “ಅವರು ರಾಮನಗರ ಅಥವಾ ಚನ್ನಪಟ್ಟಣದಿಂದ ಏಕೆ ಹೊರಬರಬೇಕು. ಚನ್ನಪಟ್ಟಣದಿಂದ ಸ್ಪರ್ಧಿಸಿ ಸಿಎಂ ಕೂಡ ಆಗಿದ್ದರು. ಅವರು ಮತ್ತೆ ಅಲ್ಲಿಂದ ಸ್ಪರ್ಧಿಸಬೇಕು ಎಂಬುದು ನನ್ನ ಆಸೆ. ಅಂತಿಮವಾಗಿ ಅವರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ದೇವರು ನಿರ್ಧರಿಸುತ್ತಾನೆ ಎಂದು ತಿಳಿಸಿದ್ದಾರೆ.

ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ ಗೌಡರು, “ಅವರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಚಲನಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಅಂತಿಮವಾಗಿ ಕುಮಾರಸ್ವಾಮಿ ಅವರು ಸಿನಿಮಾದಲ್ಲಿ ಉಳಿಯಬೇಕೋ ಅಥವಾ ರಾಜಕೀಯದಲ್ಲಿ ಇರಬೇಕೋ ಎಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ,’’ ಎಂದಿದ್ದಾರೆ.
ಮಾಜಿ ಸಚಿವ ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರ ಪ್ರಸ್ತಾಪಿಸಿದ ದೇವೇಗೌಡರು, “ರಾಜ್ಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬಂದಾಗ ಅವರನ್ನೂ ಪರಿಗಣಿಸುತ್ತೇವೆ. ಪ್ರಸ್ತುತ ಆರು ಬಾರಿ ಶಾಸಕರಾಗಿರುವ ರಾಜ್ಯಾಧ್ಯಕ್ಷರಿದ್ದಾರೆ. ನಾಳೆ ಬೆಳಗ್ಗೆ ಕೆಳಗಿಳಿಯುವಂತೆ ಕೇಳಬಹುದೇ?’’ ಎಂದು ಪ್ರಶ್ನಿಸಿದ್ದಾರೆ.

ಬಹಿರಂಗವಾಗಿ ಪಕ್ಷದಿಂದ ಹೊರಬರಲು ಬಯಸುತ್ತಿರುವ ಕೆಲವು ನಾಯಕರ ನಿರ್ಗಮನದ ಬಗ್ಗೆ ಕೇಳಿದಾಗ, ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೇವಲ 123 ಸೀಟುಗಳು ನಮ್ಮ ಗುರಿ ಎಂದು ವಿವರಿಸಿದ್ದಾರೆ.






