ನಿಷೇಧಿತ ಡ್ರಗ್ಸ್ ಅಂಶವಿದೆ ಎಂಬ ಕಾರಣಕ್ಕೆ ನಿಷೇಧಿಸಲಾಗಿದ್ದ ಕಾಫ್ ಸಿರಪ್ ನ 8640 ಬಾಟಲ್ ಗಳನ್ನು ಮಹಾರಾಷ್ಟ್ರದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ.
ನಿಷೇಧಿತ ಔಷಧ ಸಾಗಿಸುತ್ತಿರುವ ಬಗ್ಗೆ ದೊರೆತ ಸುಳಿವು ಆಧರಿಸಿ ಎನ್ ಸಿಬಿ ಥಾಣೆಯ ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ಬಿವಾಂಡಿ ಬಳಿ ಕಾರನ್ನು ತಪಾಸಣೆ ನಡೆಸಿ ನಿಷೇಧಿತ ಕಾಫ್ ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಳ್ಳಲಾದ ಕಾಫ್ ಸಿರಪ್ 60 ಬಾಕ್ಸ್ ಗಳಲ್ಲಿ 864 ಕೆಜಿ ತೂಕದ್ದಾಗಿದೆ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಪೊಲೀಸರು ಚೇಸ್ ಮಾಡಿದಾಗ ಆರೋಪಿಗಳು ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಇದರಿಂದ ಅಧಿಕಾರಿಗಳು ಮತ್ತೆರಡು ಬೈಕ್ ಗಳಲ್ಲಿ ಚೇಸ್ ಮಾಡಿ ಸಿನಿಮಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.






