• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜನವರಿಯಲ್ಲಿ 249 ಮಕ್ಕಳು ಕಾಣೆ: ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ ಎಂದ ಎಚ್’ಡಿಕೆ

ಪ್ರತಿಧ್ವನಿ by ಪ್ರತಿಧ್ವನಿ
February 24, 2023
in Top Story, ಇದೀಗ
0
ಜನವರಿಯಲ್ಲಿ 249 ಮಕ್ಕಳು ಕಾಣೆ: ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ ಎಂದ ಎಚ್’ಡಿಕೆ
Share on WhatsAppShare on FacebookShare on Telegram

ಬೆಂಗಳೂರು: ಇದೇ ವರ್ಷದ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು‌ 249 ಮಕ್ಕಳು ಕಾಣೆಯಾಗಿದ್ದಾರೆ. ತಿಂಗಳೊಂದರಲ್ಲೆ ಈ ಮಟ್ಟಿಗೆ ಮಕ್ಕಳು ಕಾಣೆಯಾಗುತ್ತಿರುವುದಕ್ಕೆ ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ಈ ಕುರಿತು ಇಂದು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಂಡಿರುವ ಕುಸಿತದ ಸಂಕೇತವಿದಲ್ಲವೆ  ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರarವ ಮಕ್ಕಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಂಡಿರುವ ಕುಸಿತದ ಸಂಕೇತವಿದಲ್ಲವೆ, ಗೃಹ ಸಚಿವ @JnanendraAraga ಅವರೆ?1/5 pic.twitter.com/1CHfJGaGKr

— Janata Dal Secular (@JanataDal_S) February 24, 2023

2018ರಿಂದ 2022ರ ಅಂತ್ಯದವರೆಗೆ 9,223 ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಗೃಹ ಸಚಿವರೇ ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಬಹಿರಂಗಪಡಿಸಿದ್ದಾರೆ. ನಾಪತ್ತು ತಡೆಗೆ ಹಲವು ಕ್ರಮಗಳಿದ್ದರೂ, ಈ ಪ್ರಮಾಣದಲ್ಲಿ ಮಕ್ಕಳು ನಾಪತ್ತೆಯಾಗಿರುವುದು ನಮ್ಮೀಡಿ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಕಿಡಿ ಕಾರಿದ್ದಾರೆ.

ಆರಗ ಜ್ಞಾನೇಂದ್ರ ಅವರೆ, ನೀವು ಈ ರಾಜ್ಯ ಕಂಡ ಅತ್ಯಂತ ದುರ್ಬಲ‌ ಗೃಹ ಸಚಿವ ಎಂಬ ಕುಖ್ಯಾತಿಗೆ ಸಾಕ್ಷಿಯಾಗಿ ಈ ಬೆಳವಣಿಗೆಯು ಗಣನೆಗೆ ಬರುತ್ತದೆ.  ಕಾಣೆಯಾದವರಲ್ಲಿ ಬಾಲಕಿಯರ ಪ್ರಮಾಣವೆ ಹೆಚ್ಚಿದೆ. 69% ಬಾಲಕಿಯರು, 30.25% ಬಾಲಕರು ಕಾಣೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಕಾಣೆಯಾದವರಲ್ಲಿ ಇನ್ನೂ 11.5 ರಷ್ಟು ಪ್ರಮಾಣದ ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳ ಸ್ಥಿತಿ-ಗತಿ ಏನು? ಕಳ್ಳಸಾಗಣೆ ತಡೆ ಘಟಕಗಳು ಮಂಪರಿನಲ್ಲಿವೆಯೆ? ಎಂದು ಕಿಡಿಕಾರಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 4,180 ಮಕ್ಕಳು ನಾಪತ್ತೆಯಾಗಿದ್ದಾರೆ ಇಲ್ಲವಾ ಅಪಹರಣಕ್ಕೆ ಒಳಗಾಗಿದ್ದಾರೆ.‌ ಇದು ಒಟ್ಟು ಪ್ರಕರಣಗಳ 45.3 ರಷ್ಟಾಗುತ್ತದೆ. ವಿಶ್ವದ ಸಿಲಿಕಾನ್ ನಗರದಲ್ಲೇ ಈ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಷಯ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆಡಳಿತದ ಮೇಲೆ ಹಿಡಿತವಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

Tags: Araga JnanendraBJP GovernmentH D KumaraswamyJDS Karnataka
Previous Post

SOUTH INDIAN HERO | ಈ ಸಿನಿಮಾದಿಂದ ನನಗೆ ಒಂದು ಪೆಟ್ ನೇಮ್ ಬಂದಿದೆ ತುಂಬಾ ಖುಷಿಯಾಗ್ತಿದೆ..! #PRATIDHVANI

Next Post

ಆಸ್ತಿ ವಿಚಾರಕ್ಕೆ ಕಲಹ: ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರ ಹತ್ಯೆ

Related Posts

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !
Top Story

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

by ಪ್ರತಿಧ್ವನಿ
May 15, 2026
0

ಬೆಂಗಳೂರು : ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

Read moreDetails
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ

May 15, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
Next Post
ಆಸ್ತಿ ವಿಚಾರಕ್ಕೆ ಕಲಹ: ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರ ಹತ್ಯೆ

ಆಸ್ತಿ ವಿಚಾರಕ್ಕೆ ಕಲಹ: ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರ ಹತ್ಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada