ನಮ್ಮನ್ನು ಆಳುವ ಸರ್ಕಾರಗಳು ಕಾರ್ಯಾಂಗವು ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡಬೇಕೆಂದು ಬಯಸುತ್ತಾರೆ. ರಾಜಕಾರಣಿಗಳು ನಮ್ಮ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಕೆಲಸ ಆರಂಬಿಸಿರುತ್ತಾರಾದರೂ ಅದೇ ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಅದಿಕಾರಿಗಳಿಗೆ ಒತ್ತಡ ಹೇರಿ ತಮ್ಮ ಇಚ್ಚೆಯಂತೆ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಅದರಲ್ಲೂ ದೇಶದ ಬಹುತೇಕ ಪೋಲೀಸ್ ಅಧಿಕಾರಿಗಳಿಗೆ ರಾಜಕಾರಣಿಗಳ ಒತ್ತಡ ಎನ್ನೋದು ಹೊಸತೇನಲ್ಲ. ಕರ್ನಾಟಕ ಬ್ಯಾಚ್ ನ ದಿಟ್ಟ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಿ ರೂಪಾ ಅವರ ವೃತ್ತಿ ಜೀವನ ತುಂಬಾ ಸಾಹಸಮಯವಾಗಿದೆ. ಕಳೆದ 20 ವರ್ಷಗಳಲ್ಲಿ ಇವರು 40 ಕ್ಕೂ ಹೆಚ್ಚು
ಬಾರಿ ವರ್ಗಾವಣೆಗೊಂಡಿದ್ದಾರೆ. ನಮ್ಮ ದೇಶದ ಬಹುತೇಕ ಪ್ರಾಮಾಣಿಕ ಅಧಿಕಾರಿಗಳಿಗೆ ಕ್ಕ್ಷಿಪ್ರ ವರ್ಗಾವಣೆ ಹೊಸತೇನಲ್ಲ.
ಬಹು-ಕೋಟಿ ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ನ ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಹಿರಿಯ
ಐಪಿಎಸ್ ಅಧಿಕಾರಿ ಹೇಮಂತ್ ನಿಂಬಲ್ಕರ್ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದ ಕೆಲ ದಿನಗಳ ನಂತರ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ರೂಪಾ ಅವರು ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ರಾಜ್ಯದಲ್ಲಿ ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯೂ ಆಗಿದ್ದರು. ವರ್ಗಾವಣೆಗಳು ಸರ್ಕಾರಿ ಕೆಲಸದ ಭಾಗವಾಗಿದೆ ಎಂದು ಅವರು ವರ್ಗಾವಣೆಯಾದ ಗಂಟೆಗಳ ನಂತರ ಟ್ವೀಟ್ ಮಾಡಿದ್ದಾರಲ್ಲದೆ ತಮ್ಮ ವೃತ್ತಿಜೀವನದ ವರ್ಷಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಬಾರಿ ನನ್ನನ್ನು ವರ್ಗಾಯಿಸಲಾಗಿದೆ ಎಂದೂ ಹೇಳಿಕೊಂಡಿದ್ದಾರೆ. ಈ ಕುರಿತು ಮಾಧ್ಯಮವೊಂದರ ಜತೆ ಮಾತನಾಡಿದ ಅವರು ಇತರರು ಮಾತನಾಡದಿದ್ದಾಗ ಶಿಳ್ಳೆ ಹೊಡೆಯುವುದು ಕೆಲವೊಮ್ಮೆ ನಿರಾಶಾದಾಯಕವಾಗಬಹುದು, ಅದು ಈಗ ಅವರ ವ್ಯಕ್ತಿತ್ವದ ಒಂದು ಭಾಗವಾಗಿದೆ. ತಪ್ಪುಗಳನ್ನು ಮಾಡದಿರುವುದು ನನ್ನ ವ್ಯಕ್ತಿತ್ವದ ಒಂದು ಭಾಗ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಸ್ವಭಾವ ಎಂದರು. ಅನೇಕ ಅಧಿಕಾರಿಗಳು ಕೇವಲ ಮನಸ್ಸಿನ ಶಾಂತಿಯನ್ನು ಬಯಸುತ್ತಾರೆ, ಆದ್ದರಿಂದ ಅವರು ಪ್ರಬಲ ಮತ್ತು ಶಕ್ತಿಯುತರ ಕೋಪವನ್ನು ಆಹ್ವಾನಿಸಬಹುದಾದ ಸಮಸ್ಯೆಯನ್ನು ಬಗೆಹರಿಸುವುದನ್ನು ತಪ್ಪಿಸುತ್ತಾರೆ ಆದರೆ ನನ್ನ ಪ್ರಕಾರ, ನಾನು ನನ್ನ ಕರ್ತವ್ಯ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿರುವಾಗ ಅದಕ್ಕೆ ಅಡ್ಡಿ ಬರುವ ಯಾವುದೇ ಅವ್ಯವಸ್ಥೆ ಮತ್ತು ಸಂಘರ್ಷಕ್ಕೆ ಹಿಂಜರಿಯುವುದಿಲ್ಲ ಖಡಕ್ ಆಗಿ ಹೇಳಿದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೂರು ವರ್ಷಗಳ ಹಿಂದೆ, ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಹಾಯಕಿ ಶಶಿಕಲಾ ಘೋಷಿತ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾಗ ಅಧಿಕಾರಿಗಳೊಂದಿಗೆ ಹೊಂದಾಣಿಕೆ
ಮಾಡಿಕೊಂಡು ಉತ್ತಮ ಸೇವೆ ಪಡೆಯುತಿದ್ದರು. ಈ ಪ್ರಕರಣದಲ್ಲಿ ಸ್ವತಃ ಬಂದೀಖಾನೆ
ಇಲಾಖೆಯ ಎಡಿಜಿಪಿ ಅವರ ಮೇಲೆ ಆರೋಪವಿತ್ತು. ಇದನ್ನು ಆರೋಪಿಸಿದ್ದಕ್ಕಾಗಿ ರೂಪಾ ಅವರ ಮೇಲೆ 20 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. 2011 ರಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಭದ್ರತೆಗಾಗಿ ಅವರು ಬಳಸುತ್ತಿದ್ದ ಹಲವಾರು ಪೊಲೀಸ್ ವಾಹನಗಳ ಅನುಮತಿ ಇಲ್ಲದ ಬಳಕೆಯನ್ನು ನಿಲ್ಲಿಸಿದರು.
ಗದಗ್ ನ ಎಂಎಲ್ಸಿ ಒಬ್ಬರು ರೂಪ ಅವರ ವಿರುದ್ದ ಹಕ್ಕು ಚ್ಯುತಿ ಸೂಚನೆ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ಕರ್ನಾಟಕ ಕೌನ್ಸಿಲ್ ಸ್ಪೀಕರ್ ಮುಂದೆ ಹಾಜರಾಗಲು ಕರೆಸಲಾಯಿತು. ಸದರಿ ಎಂಎಲ್ಸಿ ಅವರು ಗಲಭೆಗಳನ್ನು ಪ್ರಚೋದಿಸಿದರು ಎಂಬ ಕಾರಣಕ್ಕೆ 2006 ರಲ್ಲಿ ರೂಪ ಅವರು ಅವರನ್ನು ಬಂಧಿಸಿದ್ದರು. ನನ್ನ ಕರ್ತವ್ಯ ಎಂದಿಗೂ ವೈಯಕ್ತಿಕ ಹಿತಾಸಕ್ತಿ ಹೊಂದಿಲ್ಲ. ಕೆಲವರು ನಾನು ಮುಂದೆ ರಾಜಕೀಯಕ್ಕೆ ಸೇರುತ್ತೇನೆ ಎಂದು ಕೆಲವರು ಹೇಳುತಿದ್ದಾರೆ ಆದರೆ ಪೋಲೀಸ್ ಸೇವೆ ನಾನು ಆಯ್ಕೆ ಮಾಡಿಕೊಂಡಿರುವ ಸೇವೆ ಆಗಿದ್ದು ಅದರಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ನನ್ನ ಕ್ರಮಗಳನ್ನು ಪ್ರಚಾರಕ್ಕಾಗಿ ಎಂದು ಕೆಲವರು ಹೇಳುತ್ತಿದ್ದಾರೆ ಆದರೆ ಅಗ್ಗದ ಪ್ರಚಾರಕ್ಕಾಗಿ ಇಷ್ಟೊಂದು ಕಟ್ಟುನಿಟ್ಟಿನ ಕ್ರಮಗಳ ಅವಶ್ಯಕತೆ ಇರುವುದಿಲ್ಲ ಎಂದೂ ಅವರು ಹೇಳಿದರು. 2000 ಬ್ಯಾಚಿನ ಐಪಿಎಸ್ ಅಧಿಕಾರಿ ರೂಪ ಅವರಿಗೆ 2016 ಮತ್ತು 2017 ರಲ್ಲಿ ಎರಡು ಬಾರಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಕೂಡ ನೀಡಲಾಗಿದೆ.
Also Read: ರೂಪಾ, ನಿಂಬಾಲ್ಕರ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ವರ್ಗಾವಣೆ
2018 ರಲ್ಲಿ ಸಂವಾದವೊಂದರಲ್ಲಿ ಮಾತನಾಡಿದ ರೂಪ ಅವರು ಅಧಿಕಾರಿಗಳು ಸದಾ ರಾಜಕಾರಣಿಗಳ ವರ್ಗಾವಣೆ ಎಂಬ ಭಯದ ನೆರಳಿನಲ್ಲಿಯೇ ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೆ ನಮ್ಮ ದೇಶದ ಕಾರ್ಯಾಂಗದ ಅಧಿಕಾರಿಗಳು ಎಂದು ವರ್ಗಾವಣೆ ಎಂಬ ಭಯದಿಂದ ಹೊರಬರುತ್ತಾರೋ ಅಂದು ನಾವು ವಿಶ್ವದಲ್ಲೇ ಅತ್ಯುತ್ತಮ ಕಾರ್ಯಾಂಗವನ್ನು ಹೊಂದುತ್ತೇವೆ ಎನ್ನುತ್ತಾರೆ. ಇಡೀ ಅಧಿಕಾರಶಾಹಿಗೆ ಪಾಠ ಕಲಿಸಲು ರಾಜಕಾರಣಿಗಳು ಅಧಿಕಾರಿಗಳನ್ನು ವರ್ಗಾಯಿಸುತ್ತಾರೆ, ಆದರೆ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸಂಸದರು ಮತ್ತು ಶಾಸಕರು ತಮ್ಮ ಅಧಿಕಾರವನ್ನು ಪಡೆಯುವ ಅದೇ ಸಂವಿಧಾನದಿಂದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ತಮ್ಮ ಅಧಿಕಾರವನ್ನು ಪಡೆಯುತ್ತಾರೆ ಎಂಬುದನ್ನು ಅವರು
ನೆನಪಿನಲ್ಲಿಡಬೇಕು ಎಂದು ಅವರು ಹೇಳುತ್ತಾರೆ. ಯಾವುದೇ ಹುದ್ದೆ ಆದರೂ ನನಗೆ
ಅಸಮಾಧಾನವಿರುವುದಿಲ್ಲ ಎನ್ನುತ್ತಾರೆ ರೂಪ ಅವರು.
ಅವರು 2000 ನೇ ಇಸವಿಯಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 43 ನೇ ರ್ಯಾಂಕ್
ಪಡೆದಿದ್ದರು. ಅವರು ಭರತನಾಟ್ಯದಲ್ಲೂ ತರಬೇತಿ ಪಡೆದಿದ್ದಾರೆ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಅವರು 2019 ರಲ್ಲಿ ಕನ್ನಡ ಚಲನ ಚಿತ್ರಕ್ಕಾಗಿ ಗೀತೆಯೊಂದನ್ನೂ ಸಹ ಹಾಡಿದ್ದಾರೆ. ನನ್ನ ಪ್ರೇರಣೆ ಮತ್ತು ಆದರ್ಶವಾದವು ಹಾಗೇ ಇದೆ, ನಾನು ಎಂದಿಗೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ವರ್ಗಾವಣೆಯನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳು ಮೌನವಾಗಿರುವುದು ವ್ಯವಸ್ಥೆಗೆ ಮಾಡುವ ಅನ್ಯಾಯವಾಗಿದೆ ಎಂದು ರೂಪಾ ಹೇಳಿದರು. ಅವರು ಭಾರತದಲ್ಲಿ ವಿವಿಐಪಿ
ಸಂಸ್ಕೃತಿಯ ವಿರುದ್ಧ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ನಾನು ಇಲ್ಲಿಯೇ ಇರುತ್ತೇನೆ, ಮತ್ತು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಅಥವಾ
ಬದಲಾಗುವುದಿಲ್ಲ. ಹಲವಾರು ಜನರಿಗೆ ಸಾಧ್ಯವಾಗದ ರೀತಿಯಲ್ಲಿ ನಾನು ವರ್ತಿಸಬಲ್ಲೆ ಎಂಬುದು ದೇವರ ಕೊಡುಗೆಯಾಗಿದೆ ಎಂದೂ ಅವರು ಹೇಳಿದರು.
ಇದು ಬರೇ ರೂಪ ಅವರ ಕಥೆಯಲ್ಲ, ಪ್ರಾಮಾಣಿಕವಾಗಿ ದುಡಿಯುತ್ತಿರುವ ದೇಶದ ಸಾವಿರಾರು ಅಧಿಕಾರಿಗಳು ಇಂದಿಗೂ ಕಿರುಕುಳ ಮತ್ತು ಸಮಸ್ಯೆಯ ಒತ್ತಡದಲ್ಲಿ ಬದುಕುತಿದ್ದಾರೆ. ಜನರೇ ಇಂತ ಪ್ರಾಮಾಣಿಕರ ಬೆಂಬಲಕ್ಕೆ ನಿಂತಾಗಲೇ ವ್ಯವಸ್ಥೆ ಉತ್ತಮಗೊಳ್ಳುತ್ತದೆ.