ಆಧಾರ್ ಕಾರ್ಡ್ ನಮ್ಮ ಪ್ರಮುಖ ಡಿಜಿಟಲ್ ಗುರುತು. ಆದರೆ ಇದೇ ಆಧಾರ್ ಕಾರ್ಡ್ ಬಳಸಿಕೊಂಡು ಕೆಲವು ಕಡೆಗಳಲ್ಲಿ ಮೋಸಗಳು ನಡೆಯುತ್ತಿದೆ. ಸತ್ತವರ ಆಧಾರ್ ಕಾರ್ಡ್ ಬಳಸಿ ಸತ್ತವರ ಹೆಸರಿನಲ್ಲಿ ಸರ್ಕಾರದ ಹಣ ಮತ್ತು ಸವಲತ್ತುಗಳು ಪಡೆಯುತ್ತಿದ್ದಾರೆ. ಇದನ್ನು ತಡೆಯಲು ಈಗ ಕೇಂದ್ರ ಸರ್ಕಾರ ಒಂದು ಯೋಜನೆ ಆರಂಭಿಸಿದೆ.ಕೇಂದ್ರ ಸರ್ಕಾರದ ಈ ಆಧಾರ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಪ್ರಾರಂಭವಾಗಿದೆ.

ಪ್ರಸ್ತುತ ಭಾರತದಲ್ಲಿ ಸುಮಾರು 134 ಕೋಟಿ ಜನರು ಸಕ್ರಿಯ ಆಧಾರ್ ಕಾರ್ಡ್ ಹೊಂದಿದ್ದು,ಈಗಾಗಲೇ ಸುಮಾರು 2.5 ಕೋಟಿಗೂ ಹೆಚ್ಚು ಮೃತ ವ್ಯಕ್ತಿಗಳ ಆಧಾರ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಕೇವಲ ಕಾರ್ಡ್ ರದ್ದು ಮಾಡುವುದು ಮಾತ್ರವಲ್ಲದೆ, ಇನ್ಮುಂದೆ ಆಧಾರ್ ದೃಢೀಕರಣ ಮಾಡುವಾಗ ಹೆಚ್ಚಿನ ಭದ್ರತೆಯನ್ನು ತರಲಾಗಿದೆ

ಸರ್ಕಾರವು ಈಗ ಮರಣ ನೋಂದಣಿ ಕಚೇರಿಗಳ ಜೊತೆಗೆ ಆಧಾರ್ ಡೇಟಾವನ್ನು ಲಿಂಕ್ ಮಾಡಲು ಯೋಜಿಸುತ್ತಿದೆ. ಇದರಿಂದ ವ್ಯಕ್ತಿ ಮೃತಪಟ್ಟ ತಕ್ಷಣ ಅವರ ಆಧಾರ್ ಮಾಹಿತಿ ಅಪ್ಡೇಟ್ ಆಗಲು ಅನುಕೂಲವಾಗುತ್ತದೆ.ನಿಮ್ಮ ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ, ಅವರ ಆಧಾರ್ ಕಾರ್ಡ್ ಅನ್ನು ರದ್ದುಗೊಳಿಸಬೇಕು ಇಲ್ಲದಿದ್ದರೆ ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಮೋಸ ನಡೆಯುವ ಸಾಧ್ಯತೆಗಳಿವೆ.






