
ಅರಾರಿಯಾ (ಬಿಹಾರ): ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬುಧವಾರ ಮುಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶದಿಂದ ಸುಮಾರು 16 ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಅರಾರಿಯಾದ ಪಲಾಸಿ ಬ್ಲಾಕ್‌ನ ಪಿಪ್ರಾ ಬಜಾರ್‌ನಲ್ಲಿ ತಾಜಿಯಾವನ್ನು ಹೊರತೆಗೆಯುವಾಗ ಮೆರವಣಿಗೆಯಲ್ಲಿ ಲೈವ್ ತಂತಿಯ ಸ್ಪರ್ಶಕ್ಕೆ ಈ ಘಟನೆ ನಡೆದಿದೆ. ಗ್ರಾಮಸ್ಥರು ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪಲಾಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತೀವ್ರ ಸುಟ್ಟಗಾಯಗಳಾಗಿರುವ ಎಂಟು ಜನರನ್ನು ವೈದ್ಯರು ಪ್ರಥಮ ಚಿಕಿತ್ಸೆಯ ನಂತರ ಅರಾರಿಯಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಘಟನೆಯ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಸಿವಿಲ್ ಸರ್ಜನ್ ಡಾ.ಕೆ.ಕೆ.ಕಶ್ಯಪ್ ತಿಳಿಸಿದ್ದಾರೆ. ಪಲಾಸಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವೂ ಉತ್ತಮವಾಗಿದೆ ಎಂದು ಅವರು ಹೇಳಿದರು. ಘಟನೆಯಿಂದ ಜನರು ಗಾಬರಿಯಿಂದ ಓಡಲು ಆರಂಭಿಸಿದ್ದರಿಂದ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು.
ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.”ಲೈವ್ ವೈರ್ ಸಂಪರ್ಕಕ್ಕೆ ಬಂದ ನಂತರ ಸುಮಾರು 16 ಮಂದಿ ಗಾಯಗೊಂಡಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಾಜಿಯಾವನ್ನು ನಿಗದಿತ ಮಾರ್ಗದಲ್ಲಿ ಹೊರತೆಗೆಯಲಾಗಿಲ್ಲ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸದರ್ ಎಸ್‌ಡಿಒ ಅನಿಕೇತ್ ಕುಮಾರ್ ತಿಳಿಸಿದ್ದಾರೆ.




