ಸೇನಾ ಬಸ್ ಕಣಿವೆಗೆ ಉರುಳಿದ ಪರಿಣಾಮ 16 ಯೋಧರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಸಿಕ್ಕಿಂನ ಝೆವಾದಲ್ಲಿ ನಡೆದಿದೆ.
ಚಟ್ಟೆನ್‌ನಿಂದ ಥಂಗು ಪ್ರದೇಶದಕ್ಕೆ ಮೂರು ಸೇನಾ ವಾಹನಗಳು ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟೆಕ್‌ನಿಂದ 15 ಕಿಲೋಮೀಟರ್ ದೂರ ಇರುವ ಲಾಚೆನ್‌ನ ಝೆವಾ ಬಳಿ ಬೆಳ್ಳಗ್ಗೆ 8 ಘಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು ಹೆಲಿಕಾಪ್ಟರ್ ಮೂಲಕ ಮೃತದೇಹಗಳನ್ನ ಹೊರ ತೆಗೆಯಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.