ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಸಂಚಾರ ನಿಯಮ ಉಲ್ಲಂಘನೆಯ (Traffic rules violation) ದಂಡ ಬರಬೇಕಿರುವುದು ಹಾಗೆ ಬಾಕಿ ಉಳಿದಿದ್ದು, ಇದೀಗ ಈ ದಂಡ ವಸೂಲಿ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.

ಬರೊಬ್ಬರಿ 1538 ಕೋಟಿ ರೂಪಾಯಿ ದಂಡದ ಮೊತ್ತವನ್ನು ಬೆಂಗಳೂರಿಗರು (Bangalore) ಪಾವತಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೆ. ಹೆಲ್ಮೆಟ್ ಧರಿಸದೆ ಸಂಚಾರ(No helmet), ನೋ ಪಾರ್ಕಿಂಗ್ ನಲ್ಲಿ (No parking) ವಾಹನ ನಿಲ್ಲಿಸವುದು, ಥ್ರಿಬಲ್ ರೈಡಿಂಗ್ (Triple riding), ಸಿಗ್ನಲ್ ಜಂಪ್ (Signal jump) ಹೀಗೆ ಸಾವಿರಾರು ಕೋಟಿ ರೂಪಾಯಿ ದಂಡ ಹಾಕಲಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿ 73 ರೀತಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿದ್ದ ದಂಡ ಹಾಗೆ ಬಾಕಿ ಉಳಿದಿದ್ದು, ಕಳೆದ 5 ವರ್ಷದಲ್ಲಿ 4 ಕೋಟಿ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿತ್ತು. ಈ ವರೆಗೂ ಒಂದು ಕೋಟಿ 19 ಲಕ್ಷ ಪ್ರಕರಣಗಳ ದಂಡ ವಸೂಲಿ ಮಾಡಲಾಗಿದೆ. ಸುಮಾರು 594 ಕೋಟಿ ಹಣ ಪಾವತಿಯಾಗಿದೆ, ಇನ್ನೂ 1548 ಕೋಟಿ ದಂಡ ಬಾಕಿಯಿದೆ ಎನ್ನಲಾಗಿದೆ. ಹೀಗಾಗಿ ಸಂಚಾರ ನಿಯಮ ಪಾಲಿಸಿ, ಬಾಕಿ ಮೊತ್ತ ಕಟ್ಟುವಂತೆ ಪೊಲೀಸರ ಮನವಿ ಮಾಡಿದ್ದಾರೆ.

ಜನರಿಗೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಈ ರೀತಿ ಮನವಿ ಮಾಡಿದ್ದಾರೆ.ಮೂರು ರೀತಿಯಲ್ಲಿ ಜನ ಟ್ರಾಫಿಕ್ ಫೈನ್ ಪಾವತಿ ಮಾಡಲು ಅವಾಕಶವಿದೆ. ಒಂದು ಬೆಂಗಳೂರು ಸಂಚಾರಿ ಪೊಲೀಸರ ಅಧಿಕೃತ ವೆಬ್ ಸೈಟ್ BCP.GOV.IN ಗೆ ಹೋಗಿ ಪಾವತಿಸಬಹುದು. ಎರಡನಿಯದಾಗಿ, ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ ಮೂಲಕ ಪಾವತಿಸಬಹುದು. ಮೂರು ನೇರ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಾಕಿ ದಂಡ ಪಾವತಿಸಬಹುದು.





