ಇತ್ತೀಚೆಗೆ ಚಲಾವಣೆಗೆ ಬಂದ 10 ರೂಪಾಯಿ ನಾಣ್ಯಗಳ (10rs coin) ಬಗ್ಗೆ ಜನ ಸಾಮಾನ್ಯರಲ್ಲಿ ಸಾಕಷ್ಟು ಗೊಂದಲಗಳಿವೆ. ಈ ನಾಣ್ಯಗಳಿಗೆ ಮಾನ್ಯತೆ ಇದ್ಯಾ. ಇದನ್ನು ಸ್ವೀಕರಿಸಬಹುದಾ ಎಂಬ ಪ್ರಶ್ನೆಗಳಿವೆ. ಆದ್ರೆ ಹೀಗೆ 10 ರೂ ನಾಣ್ಯಗಳನ್ನು ನಿರಾಕರಿಸುವುದು ಅಪರಾಧಕ್ಕೆ ಸಮಾನವಾಗಿದೆ.
ಹೀಗಂತ ಇಂಡಿಯನ್ ಬ್ಯಾಂಕ್‌ನ (Indian bank) ಅಧಿಕಾರಿಗಳು ತಿಳಿಸಿದ್ದಾರೆ. 10 ರೂಪಾಯಿ ನಾಣ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಇಂಡಿಯನ್ ಬ್ಯಾಂಕ್ ಅಭಿಯಾನ ಕೈಗೊಂಡಿದೆ. ಇಂಡಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜೇಶ್ವರ್ ರೆಡ್ಡಿ ಈ ಬಗ್ಗೆ ಮಾತನಾಡಿದ್ದಾರೆ.
ಈ ನಾಣ್ಯಗಳು ಕಾನೂನು ಬದ್ಧವಾಗಿವೆ. ದೈನಂದಿನ ವಹಿವಾಟಿಗೆ ಬಳಸಬಹುದು. ಈ ಚಲಾವಣೆಯನ್ನು ವ್ಯಾಪಾರ ವಹಿವಾಟುಗಳಿಗೆ ಬಳಸಿಕೊಳ್ಳಲು ಆರ್‌ಬಿಐ (RBI) ಆದೇಶದಂತೆ ಇಂಡಿಯನ್ ಬ್ಯಾಂಕ್ ಜಾಗೃತಿ ಮೂಡಿಸುತ್ತಿದೆ ಎಂದಿದ್ದಾರೆ.