ಪಶ್ಚಿಮ ಬಂಗಾಳದ(West Bengal) ಕರಾವಳಿಗೆ ಅಪ್ಪಳಿಸಿರೋ ರೆಮಲ್(Remel) ಚಂಡಮಾರುತ ಅಪಾರ ಹಾನಿ ಉಂಟು ಮಾಡ್ತಿದೆ. ಸಾವು- ನೋವಿಗೂ ಕಾರಣವಾಗ್ತಿದ್ದು, ಪಶ್ಚಿಮ ಬಂಗಾಳದಲ್ಲಿ 6 ಹಾಗೂ ಬಾಂಗ್ಲಾದೇಶದಲ್ಲಿ(Bangladesh) 10 ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ಈಶಾನ್ಯ ರಾಜ್ಯಗಳನ್ನ ಹಾದು ಸೈಕ್ಲೋನ್ ಹೋಗಲಿದೆ.
ಹೀಗಾಗಿ ಮುಂದಿನ 24 ಗಂಟೆಯಲ್ಲಿ ಅಸ್ಸಾಂನ 11 ಜಿಲ್ಲೆಗಳು ಸೇರಿದಂತೆ ಈಶಾನ್ಯದ ರಾಜ್ಯಗಳಲ್ಲಿ(State) ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.ರೆಮಲ್ ಚಂಡಮಾರುತದ(Storms) ಪ್ರಭಾವದಿಂದ ತ್ರಿಪುರಾದಲ್ಲಿ ಭಾರೀ ಮಳೆ(Heavy Rain), 11 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ರೈಲು(Train) ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 42 ಟ್ರೈನ್‌ಗಳ ಪ್ರಯಾಣ ಕ್ಯಾನ್ಸಲ್(Cancel) ಮಾಡಲಾಗಿದೆ.










