ನಾಳೆಯಿಂದ ದೇಶದಾದ್ಯಂತ ರೈಲು ಸೇವೆ ಆರಂಭಗೊಳ್ಳಲಿದೆ. ಕಳೆದ 54 ದಿನಗಳ ಕಾಲ ಸಂಪೂರ್ಣವಾಗಿ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ಮೂರನೇ ಹಂತ ಜಾರಿಯಲ್ಲಿದ್ದರೂ ಕೂಡ ಅಲ್ಪ ಮಟ್ಟಿಗೆ ಸಡಿಲಿಕೆ ನೀಡಲಾಗಿದೆ. ಈ ಹಿನ್ನೆಲೆ ರೈಲು ಸೇವೆಯನ್ನು ಸರ್ಕಾರ ಪುನರಾರಂಭಿಸಿದೆ. ಆದರೆ ಇದೇ ವೇಳೆ ಕೇಂದ್ರ ರೈಲ್ವೇ ಇಲಾಖೆ ಕೆಲವು ಷರತ್ತುಗಳನ್ನು ಪ್ರಯಾಣಿಕರಿಗೆ ವಿಧಿಸಿದೆ. ಅವು ಕೆಳಗಿನಂತಿವೆ.
ರೈಲ್ವೇ ಇಲಾಖೆ ಬಿಡುಗಡೆಗೊಳಿಸಿದ ನಿಯಮಗಳು :
– ಎಲ್ಲಾ ರೈಲುಗಳು ನವ ದೆಹಲಿಯಿಂದ ಹೊರಟು ದೇಶದ ಪ್ರಮುಖ 15 ನಗರಗಳಿಗೆ ತಲುಪಲಿದೆ. (ದಿಬ್ರುಘಾ, ಅಗರ್ತಲ, ಹೌರ, ಪಾಟ್ನ, ಬಿಸ್ಲಾಪುರ್, ರಾಂಚಿ, ಭುಬನೇಶ್ವರ್, ಸಿಖಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾವ್ನ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತಾವಿ)
– ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗಿರುವುದಿಲ್ಲ.
– ರೈಲುಗಳಿಗೆ ಸಾಮಾನ್ಯ ಬೋಗಿಗಳಿರುವುದಿಲ್ಲ.
– ಎಲ್ಲಾ ರೈಲು ಬೋಗಿಗಳು ಕೂಡ ಹವಾನಿಯಂತ್ರಿತವಾಗಿರುತ್ತದೆ ಮತ್ತು ನಿಯಮಿತ ನಿಲ್ದಾಣದಲ್ಲಷ್ಟೇ ನಿಲುಗಡೆ ಇದೆ.
– ಪ್ರಯಾಣಿಕರಿಗಷ್ಟೇ ನಿಲ್ದಾಣದೊಳಕ್ಕೆ ಪ್ರವೇಶ.
– ಪ್ರಯಾಣಿಕರು ಖಡ್ಡಾಯವಾಗಿ ಮುಖಕವಚ (ಮಾಸ್ಕ್) ಧರಿಸಬೇಕು. ಹತ್ತುವ ಮತ್ತು ಇಳಿಯುವ ನಿಲ್ದಾಣದಲ್ಲಿ ಹಾಗೂ ಕೋಚ್‌ಗಳಲ್ಲಿ ಸ್ಯಾನಿಟೈಸರ್ ನೀಡಲಾಗುತ್ತದೆ. ಕಡ್ಡಾಯವಾಗಿ ಬಳಸಬೇಕು.
– ರೈಲು ಏರುವ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.
– ಕರೋನಾ ಲಕ್ಷಣರಹಿತ ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ.
– ತತ್ಕಾಲ್ ಟಿಕೆಟ್ ಪಡೆದ ಪ್ರಯಾಣಿಕರಿಗೆ ಅವಕಾಶವಿಲ್ಲ.
– ಯಾವುದೇ ಆರ್‌ಎಸಿ ಅಥವಾ ವೈಟಿಂಗ್ ಲಿಸ್ಟ್ ಟಿಕೆಟ್ ನೀಡಲಾಗುವುದಿಲ್ಲ.
– ಪ್ರಯಾಣದ ವೇಳೆ ಎಲ್ಲಾ ಪ್ರಯಾಣಿಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
– ಟಿಕೆಟ್ ಕ್ಯಾನ್ಸಲ್ ಮಾಡಿದ್ದಲ್ಲಿ ಶೇ.50ರಷ್ಟು ಮಾತ್ರ ಮರುಪಾವತಿ ಮಾಡಲಾಗುವುದು.
– 24 ಗಂಟೆಗೂ ಮುಂಚಿತವಾಗಿಯೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಲು ಅವಕಾಶ.
– ರೈಲಿನಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಅದಕ್ಕೆ ಹೆಚ್ಚುವರಿ ಹಣ ನೀಡಬೇಕಿದೆ.

