ಮೇವು ಹಗರಣ ಸೇರಿದಂತೆ ಹಲವು ಹಗರಣ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಪಿತಾಮಹ ಲಾಲೂ ಪ್ರಸಾದ್ ಯಾದವ್ ಜಾಮೀನಿನ ಮೇಲೆ ಬಿಡುಡೆಯಾಗುವ ಸಾಧ್ಯತೆ ಇದೆಯೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ
ಲಾಲೂ ಪ್ರಸಾದ್ ಯಾದವ್ ನವೆಂಬರ್ ತಿಂಗಳಲ್ಲಿ ತಮ್ಮ ಶಿಕ್ಷೆಯ ಅರ್ಧದಷ್ಟು ಪೂರ್ಣಗೊಳಿಸುವುದರಿಂದ ಜಾಮೀನು ಪಡೆಯುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಾನೂನು ತಜ್ಞರ ಪ್ರಕಾರ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವವರು ಜಾಮೀನು ಅರ್ಜಿ ಸಲ್ಲಿಸಲು ತಮ್ಮ ಶಿಕ್ಷೆಯ ಅರ್ಧದಷ್ಟನ್ನು ಅನುಭವಿಸಿರಬೇಕು.
Also Read: ಬಿಹಾರ ಚುನಾವಣಾ ಕಣದಲ್ಲಿ ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ
ಲಾಲೂ ಪ್ರಸಾದ್ ಯಾದವ್ ಈಗಾಗಲೇ ದಿಯೋಗರ್ ಖಜಾನೆ ಹಾಗೂ ಚೈಗಾರ್ ಖಜಾನೆ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಡುಮ್ಕಾ ಖಜಾನೆ ಪ್ರಕರಣದ ಶಿಕ್ಷೆಯ ಅರ್ಧದಷ್ಟು ನವೆಂಬರ್ 9 ಕ್ಕೆ ಪೂರ್ಣಗೊಳ್ಳುತ್ತದೆ ಎಂದು ಅವರ ವಕೀಲ ಪ್ರಭಾತ್ ಕುಮಾರ್ ಹೇಳಿದ್ದಾರೆ. ದುರ್ಗಾ ಪೂಜಾ ರಜೆಯ ನಂತರ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಲಾಲು ಅವರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸುವ ಸಾಧ್ಯತೆಯಿದೆ.
Also Read: ಏರುದಾರಿಯಲ್ಲಿ ಲಾಲೂ ಪಕ್ಷ- `ಮೇಲ್ಜಾತಿ’ಗೆ ಮಣೆ
ಲಾಲೂ ಪ್ರಸಾದ್ ಜೈಲು ಶಿಕ್ಷೆಯ ಅರ್ಧ ಅವಧಿ ನವೆಂಬರ್ 9 ರಂದು ಪೂರ್ಣಗೊಳ್ಳುವುದರಿಂದ ಬಿಹಾರ ಚುನಾವಣೆಗೆ ಮುನ್ನ ಲಾಲೂ ಪ್ರಸಾದ್ ರ ಬಿಡುಗಡೆಯಾಗುವುದಿಲ್ಲ. ಅವರು ನವೆಂಬರ್ 10 ರಂದು, ಅಂದರೆ ಬಿಹಾರ ಮತ ಎಣಿಕೆಯ ದಿನದಂದು ಜಾಮೀನಿನ ಮೇಲೆ ಹೊರಬರುವ ಸಾಧ್ಯತೆ ಇದೆ ಎಂದು ರಾಂಚಿ ಮೂಲದ ಕಾನೂನು ತಜ್ಞರು ಹೇಳಿದ್ದಾರೆ.
ನವೆಂಬರ್ 9 ರಂದು ಲಾಲೂ ಪ್ರಸಾದ್ ಯಾದವ್‌ರಿಗೆ ಜಾಮೀನಾಗುತ್ತದೆ, ನವೆಂಬರ್ 10 ರಂದು ನಿತೀಶ್ ಕುಮಾರ್ ಮನೆಗೆ ತೆರಳಬೇಕಾಗುತ್ತದೆ ಎಂದು ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು.
ಕೃಪೆ: ಡೆಕ್ಕನ್ ಹೆರಾಲ್ಡ್