• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಿಸ್ತೂಲ್ ಹಿಡಿದ ಪಾತಕಿಯನ್ನು ಲಾಠಿಯಲ್ಲೇ ಎದುರಿಸಿದ ಈ ಪೊಲೀಸಪ್ಪನ ಶೌರ್ಯಕ್ಕೊಂದು ಮೆಚ್ಚುಗೆ ಇರಲಿ

by
February 27, 2020
in ದೇಶ
0
ಪಿಸ್ತೂಲ್ ಹಿಡಿದ ಪಾತಕಿಯನ್ನು ಲಾಠಿಯಲ್ಲೇ ಎದುರಿಸಿದ ಈ ಪೊಲೀಸಪ್ಪನ ಶೌರ್ಯಕ್ಕೊಂದು ಮೆಚ್ಚುಗೆ ಇರಲಿ
Share on WhatsAppShare on FacebookShare on Telegram

ಲಾಠಿ ಹಿಡಿದ ಪೊಲೀಸಪ್ಪ ಏನು ತಾನೇ ಮಾಡಬಲ್ಲ ಎಂಬ ತಾತ್ಸಾರದ ಮಾತುಗಳನ್ನಾಡುವ ಸಾಕಷ್ಟು ಮಂದಿಯನ್ನು ನಮ್ಮ ಸುತ್ತ ದಿನಬೆಳಗಾದರೆ ನೋಡುತ್ತಲೇ ಇರುತ್ತೇವೆ. ನಮ್ಮ ಪೊಲೀಸ್ ವ್ಯವಸ್ಥೆಯೂ ಹಾಗೇ ಇದೆ ಬಿಡಿ.

ADVERTISEMENT

ಪ್ರಥಮ ವಿಶ್ವ ಮಹಾಯುದ್ಧದ ಕಾಲದ ಆಂಟಿಕ್‌ ಪೀಸ್‌ಗಳಾದ 0.302 ರೈಫಲ್‌ಗಳನ್ನೇ ಇನ್ನೂ ಪೊಲೀಸ್‌ ಸ್ಟೇಷನ್‌ಗಳಲ್ಲಿ ಸ್ಟಾಂಡರ್ಡ್ ವೆಪನ್ ಆಗಿಟ್ಟುಕೊಂಡಿರುವುದಲ್ಲದೇ, ಈ ಪೊಲೀಸ್ ಪೇದೆಗಳನ್ನು ವಿಐಪಿಗಳ ಕಾವಲಿಗೆ ಸೀಮಿತ ಮಾಡಿಕೊಂಡಿರುವ ನಮ್ಮದೇ ವ್ಯವಸ್ಥೆಯ ಸೀಮಿತತೆಗಳನ್ನೂ ಮೀರಿ ಅಪ್ರತಿಮ ಸಾಧನೆಗಳು ಮಾಡಿದ್ದ ಅದೆಷ್ಟೋ ಪೊಲೀಸಪ್ಪಂದಿರು ಇತಿಹಾಸ ಪುಟಗಳಲ್ಲಿ ತಮ್ಮ ಶೌರ್ಯದ ಗಾಥೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದು ಹೋಗಿದ್ದಾರೆ.

2008ರ 26/11 ಮುಂಬಯಿ ದಾಳಿ ಸಂದರ್ಭದಲ್ಲಿ ಜೀವಂತ ಸೆರೆ ಹಿಡಿಯಲಾದ ಪಾಕಿಸ್ತಾನದ ಭಯೋತ್ಪಾದ ಅಜ್ಮಲ್ ಕಸಬ್‌ನನ್ನು ಹಿಡಿದುಕೊಟ್ಟಿದ್ದು ಯಾರು ಗೊತ್ತೇ? ತುಕಾರಾಂ ಒಂಬ್ಳೆ ಎಂಬ ಮುಖ್ಯ ಪೇದೆ… ಅದೂ ಕೈಯಲ್ಲಿ ಲಾಠಿ ಹಿಡಿದುಕೊಂಡು, AK-47 ಸಜ್ಜಿತ ಕಸಾಬ್‌ ತನ್ನ ಮೇಲೆ ಗುಂಡಿನ ಮಳೆಗರೆದರೂ ಸಹ, ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ತನ್ನ ಸಹೋದ್ಯೋಗಿಗಳ ಪ್ರಾಣಕ್ಕೆ ಸಂಚಕಾರ ಬಾರದಂತೆ ಮಾಡಿದ ಒಂಬ್ಳೆ ಸಾಹಸ ನಿಜಕ್ಕೂ ಅಪ್ರತಿಮವಾದದು.

ಅಂತಹ ಧೀರರನ್ನು ಕಂಡ ಈ ದೇಶದಲ್ಲಿ, ಪ್ರಜೆಗಳು ಹಾಗೂ ಸಹೋದ್ಯೋಗಿಗಳ ಜೀವಗಳಿಗೆ ಮೊದಲ ಆದ್ಯತೆ ಕೊಟ್ಟು, ತಮ್ಮದೇ ಪ್ರಾಣವನ್ನು ಒತ್ತೆ ಇಟ್ಟು ಹೋರಾಡುವ ಧೀರ ಪೇದೆಗಳ ಸಾಲಿಗೆ ಸೇರಿಕೊಂಡಿರುವ ಮತ್ತೊಂದು ಹೆಸರು ಈ ದೀಪಕ್ ದಹಿಯಾ.

ಪೌರತ್ವ ತಿದ್ದುಪಡಿ ಕಾಯಿದೆ (CAA) ವಿರೋಧಿ ಪ್ರತಿಭಟನೆ ವೇಳೆ ಈಶಾನ್ಯದ ದೆಹಲಿಯ ಜಫರಾಬಾದ್‌ನಲ್ಲಿ ಪಿಸ್ತೂಲ್ ಹಿಡಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಲು ಬಂದ ಪಾತಕಿಯನ್ನು ಬರೀ ಲಾಠಿಯಲ್ಲಿ ಇದ್ದ ಪೊಲೀಸ್ ಸಿಬ್ಬಂದಿಯೊಬ್ಬರು ದಿಟ್ಟವಾಗಿ ಎದುರಿಸುತ್ತಿದ್ದ ಚಿತ್ರವೊಂದು ವೈರಲ್ ಆಗಿದ್ದು, ದೇಶವಾಸಿಗಳು ಆ ದಿಟ್ಟತನಕ್ಕೆ ಸಲ್ಯೂಟ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಪೊಲೀಸ್‌ ಸಿಬ್ಬಂದಿಯತ್ತ ಪಾತಕಿ ಶಾಹ್‌ರುಖ್‌ ಪಿಸ್ತೂಲ್ ತೋರುತ್ತಾ ನಿಂತಿದ್ದು, ಇದಕ್ಕೆ ಬೆದರದ ಪೊಲೀಸ್‌ ಪೇದೆ ದೀಪಕ್ ದಹಿಯಾ ಒಂಚೂರೂ ಅಲುಗಾಡದೇ, ಆ ಪಾತಕಿಯ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

ಪೊಲೀಸ್ ಇಲಾಖೆಗೆ ತನ್ನ ಮಕ್ಕಳನ್ನು ತಲೆಮಾರುಗಳಿಂದ ಕಳುಹಿಸುತ್ತಲೇ ಇರುವ ಕುಟುಂಬದಿಂದ ಬಂದ ದಹಿಯಾ, “ಇಂಥ ಪರಿಸ್ಥಿತಿಗಳನ್ನು ಎದುರಿಸಲು ಪೊಲೀಸರಿಗೆ ತರಬೇತಿ ಕೊಡಲಾಗುತ್ತದೆ. ತನ್ನ ಜೀವಕ್ಕಿಂತಲೂ ನಾಗರೀಕರ ಜೀವಗಳನ್ನು ಮೊದಲು ಎನ್ನುವ ರೀತಿಯಲ್ಲಿ ಇವರಿಗೆ ತರಬೇತಿ ಕೊಡಲಾಗುತ್ತದೆ,” ಎಂದು ಹೇಳುತ್ತಾರೆ.

ಮೌಜ್ಪುರ ಚೌಕದಲ್ಲಿ ತಾವು ಎದುರಿಸಿದ ಆ ಕ್ಷಣಗಳ ಬಗ್ಗೆ ದಹಿಯಾ ಹೇಳುವುದು ಹೀಗೆ — “ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ಅವನತ್ತ ಹೋದೆ. ಆತನ ಹಾದಿಯಲ್ಲಿ ಬೇರೆ ಯಾರನ್ನೂ ಹತ್ತಿರ ಬರಲು ಬಿಡಲು ಸಾಧ್ಯವಿರಲಿಲ್ಲ. ಯಾರಿಗೂ ಗಾಯಗಳಾಗದಂತೆ ನೋಡಿಕೊಳ್ಳುವುದು ನನ್ನ ಪ್ರಾಶಸ್ತ್ಯವಾಗಿತ್ತು. ಇದು ನನ್ನ ಕರ್ತವ್ಯ ಮತ್ತು ನಾನು ಅದನ್ನೇ ಮಾಡುತ್ತಿದ್ದೆ.”

ಪ್ರತಿಭಟನೆಗಳು ತೀವ್ರ ಹಿಂಸಾಚಾರಕ್ಕೆ ತಿರುಗಿದವು ಎಂದ ಈ ಮುಖ್ಯ ಪೇದೆ, “ಜನರು ಒಬ್ಬರಿಗೊಬ್ಬರು ಕಲ್ಲು ಎಸೆದುಕೊಳ್ಳಲು ಆರಂಭಿಸಿದ್ದರು. ಗಲಭೆ ನಡೆಯುತ್ತಿದ್ದ ಜಾಗದತ್ತ ನಾನು ಹೋಗುತ್ತಿದ್ದಂತೆ , ಗನ್‌ ಶಾಟ್‌ ಸದ್ದು ಕೇಳಿತು. ಕೆಂಪು ಬಣ್ಣದ ಶರ್ಟ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನು ನೋಡಿದೆ. ಅವನು ಪಿಸ್ತೂಲ್ ಹೊಂದಿದ್ದ. ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ತಕ್ಷಣ ಅಲ್ಲಿಗೆ ಹೋದೆ,” ಎನ್ನುತ್ತಾರೆ.

ಖುದ್ದು ದಹಿಯಾ ಹೇಳುವ ಪ್ರಕಾರ, ಮೊನ್ನಿನ ಘಟನೆಯ ಬಗ್ಗೆ ಹರಿಯಾಣಾದಲ್ಲಿರುವ ಅವರ ಕುಟುಂಬಕ್ಕೆ ಏನೂ ತಿಳಿದಿಲ್ಲ.ಈ ಬಗ್ಗೆ ತಮ್ಮ ಕುಟುಂಬದ ಬಳಿ ಏನೂ ಹೇಳದಿರಲು ಅವರು ನಿರ್ಧರಿಸಿದ್ದಾರೆ. ಆದರೆ, ಪ್ರತಿಷ್ಠಿತ ಪತ್ರಿಕೆಯೊಂದರ ವರದಿಯಿಂದಾಗಿ ಅವರ ಕುಟುಂಬಕ್ಕೆ ಈ ವಿಚಾರ ತಿಳಿದುಬಿಟ್ಟಿದೆ. ಈ ಚಿತ್ರದಲ್ಲಿ ದಹಿಯಾ ಮುಖ ಕಾಣದೇ ಇದ್ದರೂ ಸಹ ಅವರು ಧರಿಸಿದ್ದ ಬ್ಲೂ ಸ್ಟ್ರೈಪ್‌ ಇದ್ದ ಜಾಕೆಟ್‌ ಅವರ ಪತ್ನಿಯ ಗಮನ ಸೆಳೆದಿದ್ದು, ಅದರಿಂದ ಸಂಗತಿ ಇನ್ನಷ್ಟು ಸ್ಪಷ್ಟವಾಗಿದೆ.

“ಬಹಳ ಚಿಂತಿತಳಾಗಿದ್ದ ನನ್ನ ಪತ್ನಿ ಕರೆ ಮಾಡಿದ್ದಳು. ಆಕೆಯ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟು ಆಕೆಯ ಗಮನ ಬೇರೆಡೆ ಸೆಳೆಯಲು ಯತ್ನಿಸಿದೆ. ನನ್ನ ಮುಖವು ಪೇಪರ್‌ಗಳಲ್ಲಿ ಒಂದ ಚಿತ್ರಗಳಲ್ಲಿ ಕಾಣದೇ ಇದ್ದರೂ ಸಹ ನಾನು ಧರಿಸಿದ್ದ ನೀಲಿ ಬಣ್ಣದ ಅಂಗಿಯಿಂದ ಆಕೆ ನನ್ನ ಗುರುತು ಹಿಡಿದಿದ್ದಾಳೆ. ನನ್ನ ಮೇಲೆ ಆಕೆಗೆ ಪೂರ್ಣ ನಂಬಿಕೆ ಇರುವ ಕಾರಣ ನಾನು ಸುಮ್ಮನೇ ಆದೆ,” ಎಂದು ತಮ್ಮ ಪತ್ನಿ ಪಟ್ಟ ಪಾಡನ್ನು ವಿವರಿಸುತ್ತಾರೆ ದಹಿಯಾ.

”ಗಲಾಟೆಯಲ್ಲಿ ಒಂದು ವೇಳೆ ನನ್ನ ಮುಂದೆ ಯಾರಾದರೂ ಮೃತಪಟ್ಟಿದ್ದರೆ ನನಗೆ ಎಂದಿಗೂ ಮರೆಯಲಾಗದಷ್ಟು ನೋವಾಗುತ್ತಿತ್ತು,” ಎಂದು ಮನದಾಳದ ಮಾತುಗಳನ್ನಾಡಿದ್ದಾರೆ ಈ ಮುಖ್ಯ ಪೇದೆ.

Tags: CAA ProtestDelhi PoliceDelhi Violenceಈಶಾನ್ಯ ದೆಹಲಿದೆಹಲಿ ದಂಗೆಪೊಲೀಸ್ ಸಿಬ್ಬಂದಿಪೌರತ್ವ ತಿದ್ದುಪಡಿ ಕಾಯಿದೆ
Previous Post

ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ

Next Post

ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

Related Posts

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!
Top Story

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ...

Read moreDetails
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
Next Post
ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada