ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಉತ್ತರ ದೆಹಲಿಯ ಮುನಿಸಿಪಲ್ ಕಾರ್ಪೊರೇಷನ್ ಆಸ್ಪತ್ರೆಯ ನಿವಾಸಿ ವೈದ್ಯರು ಹಮ್ಮಿಕೊಂಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ. ಸುಮಾರು 2,000 ನಿವಾಸಿ ವೈದ್ಯರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಮುನಿಸಿಪಲ್ ಕಾರ್ಪೊರೇಷನ್ ಮೇಯರ್ ಅವರು ಮೆತ್ತಗಾಗಿದ್ದಾರೆ.
Also Read: ತೀವ್ರಗೊಳ್ಳುತ್ತಿರುವ ವೈದ್ಯರ ಮುಷ್ಕರ: ಕಠಿಣವಾಗಬೇಕಿದೆ ಸರ್ಕಾರ
ಕಳೆದ ಮೂರುವರೆ ತಿಂಗಳುಗಳಿಂದ ವೇತನ ಪಾವತಿ ಮಾಡದ ಕಾರಣಕ್ಕೆ ಒಂದು ವಾರಗಳ ಸಂಪೂರ್ಣ ಮುಷ್ಕರಕ್ಕೆ ನಿವಾಸಿ ವೈದ್ಯರು ಮುಂದಾಗಿದ್ದರು. ಈ ಕುರಿತಾಗಿ ತಮ್ಮ ತಮ್ಮ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಪತ್ರವನ್ನು ಬರೆದು ಎಚ್ಚರಿಕೆಯನ್ನು ಕೂಡಾ ನೀಡಲಾಗಿತ್ತು. ಆದರೆ, ಯಾವುದಕ್ಕೂ ಬಗ್ಗದ ಸ್ಥಳಿಯಾಡಳಿತವು ತನ್ನ ಮೊಂಡುತನವನ್ನು ಪ್ರದರ್ಶಿಸಿತ್ತು. ಇದರಿಂದ ರೋಸಿ ಹೋದ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದರು.
ಈಗ ಮೇಯರ್ ಅವರು ಶೀಘ್ರದಲ್ಲಿಯೇ ಹಣಕಾಸಿನ ವ್ಯವಸ್ಥೆಯನ್ನು ಮಾಡುವ ಆಶ್ವಾಸನೆ ನೀಡಿದ್ದರಿಂದ ವೈದ್ಯರು ತಮ್ಮ ಮುಷ್ಕರವನ್ನು ವಾಪಾಸ್ ಪಡೆದಿದ್ದಾರೆ.
Also Read: ನಿಗದಿತ ಸಮಯಕ್ಕೆ ವೈದ್ಯರ ಸಂಬಳವನ್ನು ನೀಡುವಂತೆ ಸುಪ್ರೀಂ ನಿರ್ದೇಶನ
“ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಉತ್ತರ ಎಂಸಿಡಿಯ ಮೇಯರ್ ಅವರು, ಹಣಕಾಸಿನ ವ್ಯವಸ್ಥೆಗೆ ಕಾಲಾವಕಾಶ ಕೇಳಿ ಮಾಡಿರುವ ಮನವಿಯನ್ನು ಪರಿಗಣಿಸಿ ನಮ್ಮ ಮುಷ್ಕರವನ್ನು ವಾಪಾಸ್ ಪಡೆಯುತ್ತಿದ್ದೇವೆ,” ಎಂದು ನಿವಾಸಿ ವೈದರು ಹೇಳಿದ್ದಾರೆ.
ಆದರೆ, ಈ ಮುಷ್ಕರವನ್ನು ತಾತ್ಕಾಲಿಕವಾಗಿ ಮಾತ್ರ ಮುಂದೂಡಲಾಗಿದೆ ಎಂದು ಪರೋಕ್ಷವಾಗಿ ಮತ್ತೆ ಮುಷ್ಕರ ಹೂಡುವ ಎಚ್ಚರಿಕೆ ನೀಡಿದ್ದಾರೆ
Also Read: ದೆಹಲಿ: ನಿವಾಸಿ ಸರ್ಕಾರಿ ವೈದ್ಯರ ವೇತನ ನೀಡಲು ಹೈಕೋರ್ಟ್ ಆದೇಶ