ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನವೆಂಬರ್ 9 ರ ಮಧ್ಯರಾತ್ರಿಯಿಂದ ನವೆಂಬರ್ 30 ರ ಮಧ್ಯರಾತ್ರಿ ವರೆಗೆ ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಆದೇಶ ಹೊರಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಬಳಸದಂತೆ ಮುನ್ನೆಚ್ಚರಿಕೆಯಾಗಿ ಆದೇಶ ಹೊರಡಿಸಿದ್ದು, ಈ ನಿಷೇಧವು ದೆಹಲಿಯ ಸುತ್ತಮುತ್ತಲಿನ 24 ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಕ್ರಿಸ್‌ಮಸ್ ವೇಳೆಯಲ್ಲೂ ಪಟಾಕಿಗೆ ನಿಷೇಧ ಹೇರಲಾಗುತ್ತದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ಹದಗೆಟ್ಟಿದ್ದು, ಶ್ವಾಸಕೋಶ ಸಂಬಂಧಿತ ರೋಗಿಗಳಿಗೆ ಅಪಾಯ ಸೃಷ್ಟಿಸುತ್ತಿದೆ ಎಂದು ಹವಾಮಾನ ಹಾಗೂ ಆರೋಗ್ಯ ಸಂಬಂಧಿತ ವರದಿಗಳು ಹೇಳುತ್ತದೆ.
Also Read: ಈ ಬಾರಿ ದೀಪಾವಳಿಯಲ್ಲಿ ಪಟಾಕಿ ನಿಷೇಧ – ಬಿ ಎಸ್ ಯಡಿಯೂರಪ್ಪ
National Green Tribunal pronounces total ban against sale or use of all kinds of firecrackers in Delhi NCR from midnight today till 30th November pic.twitter.com/6jBBnsZt43
— ANI (@ANI) November 9, 2020
ದೇಶದಾದ್ಯಂತ ಗಾಳಿಯ ಗುಣಮಟ್ಟ”ಕಳಪೆ” ಅಥವಾ ಕೆಟ್ಟದಾಗಿರುವ ನಗರಗಳು ಮತ್ತು ಪಟ್ಟಣಗಳಿಗೆ ಕೂಡಾ ಈ ಆದೇಶ ಅನ್ವಯಿಸುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ.
ಗಾಳಿಯ ಗುಣಮಟ್ಟದಲ್ಲಿ ಕಡಿಮೆ ಮಾಲಿನ್ಯಗೊಂಡಿರುವ ನಗರಗಳಲ್ಲಿ ʼಹಸಿರು ಪಟಾಕಿʼಗಳಿಗೆ ಅವಕಾಶ ನೀಡಲಾಗಿದ್ದು, ಪಟಾಕಿ ಸುಡಲು ಎರಡು ಗಂಟೆಗಳ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
Also Read: ಪಟಾಕಿ ನಿಷೇಧದಿಂದ ಹಿಂದೆ ಸರಿದ ಯಡಿಯೂರಪ್ಪ!
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು, ಉತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿರುವ ಇತರ ಪ್ರದೇಶಗಳಲ್ಲಿ ಪಟಾಕಿ ನಿಷೇಧವನ್ನು ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಬಿಟ್ಟಿದೆ.
ಕೋವಿಡ್ ಹಾಗೂ ಶ್ವಾಸಕೋಶ ಸಂಬಂಧಿತ ಇತರೆ ಕಾಯಿಲೆ ಇರುವ ರೋಗಿಗಳ ಹಿತದೃಷ್ಟಿಯಿಂದ ರಾಜಸ್ಥಾನ ಸರ್ಕಾರ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ ಕೂಡಾ ಪಟಾಕಿ ನಿಷೇಧಿಸುವುದಾಗಿ ಹೇಳಿದ್ದರೂ, ನಂತರ ʼಹಸಿರು ಪಟಾಕಿʼಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು.
Also Read: ದೀಪಾವಳಿ ಪಟಾಕಿ ಮಾರಾಟದ ಮೇಲೂ ಕೋವಿಡ್ ಕರಿ ನೆರಳು












