• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೆಹಲಿಯ ತಬ್ಲೀಗ್‌ ಜಮಾಅತ್‌ ಕಾರ್ಯಕ್ರಮದಿಂದ ದೇಶಕ್ಕೆ ಎದುರಾದ ಕಂಟಕ..!?

by
March 31, 2020
in ದೇಶ
0
ದೆಹಲಿಯ ತಬ್ಲೀಗ್‌ ಜಮಾಅತ್‌ ಕಾರ್ಯಕ್ರಮದಿಂದ ದೇಶಕ್ಕೆ ಎದುರಾದ ಕಂಟಕ..!?
Share on WhatsAppShare on FacebookShare on Telegram

ಸಾವಿರಾರು ಮಂದಿ ಭಾಗಿಯಾಗಿದ್ದ ದೆಹಲಿಯ ನಿಜಾಮುದ್ದೀನ್‌ ಮರ್ಕಝ್‌ ಸೆಂಟರ್‌ ನಲ್ಲಿ ತಬ್ಲೀಗ್‌ ಜಮಾಅತ್‌ ನಡೆಸಿದ್ದ ಧಾರ್ಮಿಕ ಸಭೆ ದೇಶಾದ್ಯಂತ ಕರೋನಾ ವೈರಸ್‌ ಪಸರಿಸಲು ಕಾರಣವಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶ ಹಾಗೂ ರಾಜ್ಯಗಳ ಧಾರ್ಮಿಕ ಪಂಡಿತರು ಮಾರ್ಚ್‌ 10 ರಂದು ಕಾರ್ಯಕ್ರಮ ಆಯೋಜಿಸಿದ್ದರು. 16 ದೇಶಗಳ 310 ಧಾರ್ಮಿಕ ಪಂಡಿತರು ಹಾಗೂ ವಿವಿಧ ರಾಜ್ಯಗಳ ಧಾರ್ಮಿಕ ಗುರುಗಳು ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಈ ರೀತಿ ಭಾಗವಹಿಸಿದ್ದ ಮತ ಪಂಡಿತರಲ್ಲಿ ಕರೋನಾ ವೈರಸ್‌ ಸೋಂಕು ಹಲವರಲ್ಲಿ ಪತ್ತೆಯಾಗಿದೆ.

ಕಳೆದ ಗುರುವಾರ ಜಮ್ಮು&ಕಾಶ್ಮೀರದ ವೃದ್ಧರೊಬ್ಬರು ಹಾಗೂ ತುಮಕೂರಿನ ಶಿರಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಇಬ್ಬರೂ ನಿಜಾಮುದ್ದೀನ್‌ ಸೆಂಟರ್‌ನಲ್ಲಿ ನಡೆದಿದ್ದ ತಬ್ಲೀಗ್‌ ಜಮಾಅತ್‌ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ಈ ಸೆಂಟರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಿಬ್ಬಂದಿಗಳು ತಪಾಸಣೆಗೆ ಇಳಿದಿದ್ದಾರೆ. ಸೆಂಟರ್‌ನಲ್ಲಿದ್ದ 700 ಮಂದಿಯನ್ನು ಕ್ವಾರೆಂಟೈನ್‌ ಹಾಗೂ 335 ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ವಾಪಾಸ್‌ ತೆರಳುವ ಸಂದರ್ಭ ಮತಪಂಡಿತರು ವಿಮಾನ, ರೈಲು ಹಾಗೂ ಬಸ್ಸುಗಳ ಮೂಲಕ ತವರಿಗೆ ತೆರಳಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕರೋನಾ ವೇಗವಾಗಿ ಹರಡಿರುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಇಲಾಖೆ ಗಮನಹರಿಸಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಮೂಲದ ಹತ್ತು ಮಂದಿಯಲ್ಲಿ ಕೋವಿಡ್-19‌ ದೃಢಪಟ್ಟಿದೆ. ಅಲ್ಲದೇ ಇದೇ ಸೆಂಟರ್‌ನಲ್ಲಿರುವ ದೆಹಲಿಯ 24 ಮಂದಿಯಲ್ಲಿ ಕೋವಿಡ್-19‌ ಪತ್ತೆಯಾಗಿದೆ. ಇದರಿಂದಾಗಿ ಕಾರ್ಯಕ್ರಮ ಆಯೋಜಕ ಹಾಗೂ ಮರ್ಕಝ್‌ನ ಮುಖ್ಯಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇನ್ನು ಕರ್ನಾಟಕದಿಂದಲೂ 45 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಾಪಾಸ್‌ ರಾಜ್ಯಕ್ಕೆ ಆಗಮಿಸುವಾಗ ರೈಲುಗಳನ್ನು ಅವಲಂಬಿಸಿದ್ದರು. ಇದರಲ್ಲಿ ಈಗಾಗಲೇ 13 ಮಂದಿಯನ್ನು ಪತ್ತೆಹಚ್ಚಿ ನಿಗಾದಲ್ಲಿ ಇಡಲಾಗಿದೆ. ಶಿರಾದ ವಯೋವೃದ್ಧರೊಬ್ಬರು ಬಲಿಯಾಗಿದ್ದಾರೆ. ಉಳಿದವರು ತಕ್ಷಣ ಕರೋನಾ ವೈರಸ್‌ ತಪಾಸಣೆಗೆ ಒಳಗಾಗುವಂತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿನಂತಿಸಿಕೊಂಡಿದ್ದಾರೆ. ಈ ಕುರಿತು ತಮ್ಮ ಟ್ವೀಟ್‌ ಖಾತೆಯಲ್ಲೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹೀಗಾಗಿ, ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, Quarantine ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.
ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ. #IndiaFightsCornona

— B Sriramulu (@sriramulubjp) March 31, 2020


ADVERTISEMENT

ಸದ್ಯ ಭಾರತದಲ್ಲಿ 1417 ಪ್ರಕರಣ ದೃಢಪಟ್ಟರೆ, 140 ಮಂದಿ ಗುಣಮುಖರಾಗಿದ್ದಾರೆ, ಸಾವಿನ ಸಂಖ್ಯೆ 47 ಕ್ಕೆ ತಲುಪಿದೆ.

Tags: B SriramuluCorona OutbreakCovid 19Delhinizamuddin markaztableeg jamaathಕರೋನಾ ವೈರಸ್‌ಕೋವಿಡ್-19ತಬ್ಲೀಗ್‌ ಜಮಾಅತ್‌ದೆಹಲಿನಿಜಾಮುದ್ದೀನ್‌ಬಿ ಶ್ರೀರಾಮುಲು
Previous Post

7.86 ಲಕ್ಷ ದಾಟಿದ ಕೋವಿಡ್-19‌ ದೃಢ ಪ್ರಕರಣ ; ಜಗತ್ತಿನಾದ್ಯಂತ 37,825 ಸಾವು..

Next Post

ಜನರ ದುಡ್ಡನ್ನು ಜನರಿಗೆ ನೀಡುವ ಚಾಲಾಕಿತನ ಬಿಡಿ, ಇಂಥ ಕಷ್ಟಕ್ಕಾದರೂ ನಿಮ್ಮ ಜೇಬಿನಿಂದ ಹಣ ಕೊಡಿ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಜನರ ದುಡ್ಡನ್ನು ಜನರಿಗೆ ನೀಡುವ ಚಾಲಾಕಿತನ ಬಿಡಿ

ಜನರ ದುಡ್ಡನ್ನು ಜನರಿಗೆ ನೀಡುವ ಚಾಲಾಕಿತನ ಬಿಡಿ, ಇಂಥ ಕಷ್ಟಕ್ಕಾದರೂ ನಿಮ್ಮ ಜೇಬಿನಿಂದ ಹಣ ಕೊಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada