• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತೆರೆಯ ಮೇಲೆ ಗಣೇಶ; ಭಿನ್ನ ನೋಟ

by
August 22, 2020
in ಕರ್ನಾಟಕ
0
ತೆರೆಯ ಮೇಲೆ ಗಣೇಶ; ಭಿನ್ನ ನೋಟ
Share on WhatsAppShare on FacebookShare on Telegram

ಬೆಳ್ಳಿತೆರೆ ಮೇಲೆ ಗಣೇಶ ನಾನಾ ರೀತಿ ಅನಾವರಣಗೊಂಡಿದ್ದಾನೆ. ನಮ್ಮ ಸಿನಿಮಾಗಳಲ್ಲಿ ಗಣೇಶನ ಕುರಿತಾಗಿ ಭಯ – ಭಕ್ತಿಗಿಂತ ಪ್ರೀತಿಯೇ ಹೆಚ್ಚು ಎನ್ನುವುದು ವಿಶೇಷ. ಹಲವು ಸಿನಿಮಾಗಳಲ್ಲಿ ನಾಯಕ – ನಾಯಕಿಗೆ ಗಣೇಶನೇ ಫ್ರೆಂಡ್. ಆತನಲ್ಲಿ ಅವರು ಕಷ್ಟ – ಸುಖ (ಸ್ವಗತ) ಹೇಳಿಕೊಳ್ಳುವುದುಂಟು. `ಎ’ ಕನ್ನಡ ಚಿತ್ರದಲ್ಲಿ ಹೀರೋ ಉಪೇಂದ್ರ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಾರೆ. ಪಿಸ್ತೂಲು ಹಿಡಿದು ಗಣೇಶನನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ! ಮೊದಲೇ ಹೇಳಿದಂತೆ ಇಲ್ಲಿ ಗಣೇಶನೆಂದರೆ ಭಕ್ತಿಗಿಂತ ಸಲಿಗೆ ಜಾಸ್ತಿ.

ADVERTISEMENT

ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಸಿನಿಮಾಗಳಲ್ಲಿ ಅದ್ಧೂರಿ ಗಣೇಶೋತ್ಸವ ತೋರಿಸಲಾಗಿದೆ. ವಿಚಿತ್ರವೆಂದರೆ ಗಣೇಶನ ಸನ್ನಿಯಲ್ಲಿ ರೊಮ್ಯಾನ್ಸ್ ನಡೆದದ್ದು ಕಡಿಮೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ಕ್ರೈಂ ತೋರಿಸಿದ್ದೇ ಹೆಚ್ಚು. ಹಾಡು – ಕುಣಿತದ ಥ್ರಿಲ್ ನಡುವಿನ ಹೊಡೆದಾಟದ ದೃಶ್ಯಗಳು ಹಬ್ಬದ ಪ್ರಾಮುಖ್ಯತೆಯನ್ನೇ ಮರೆಮಾಚುತ್ತವೆ. ಎಲ್ಲರನ್ನೂ ಒಂದುಗೂಡಿಸುವ ಸಾಂಸ್ಕೃತಿಕ ರಾಯಭಾರಿ ಗಣೇಶ. ಆದರೆ ನಮ್ಮ ಬಹುತೇಕ ಸಿನಿಮಾಗಳಲ್ಲಿ ಈ ಹಬ್ಬಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಕೆಲವು ಪ್ರಮುಖ ಸಿನಿಮಾಗಳಲ್ಲಿ ಗಣೇಶನ ಮೆರವಣಿಗೆ ಹಿನ್ನೆಲೆಯಲ್ಲಿ ಕ್ರೌರ್ಯ, ಹಿಂಸೆ ನಡೆಯುತ್ತದೆ. ಇಲ್ಲಿ ಗಣೇಶೋತ್ಸವದ ಔಚಿತ್ಯವನ್ನೇ ಪ್ರಶ್ನಿಸುವಂತಾಗುವುದು ವಿಪರ್ಯಾಸ. ಆದರೆ ತೆರೆಯಾಚೆಗಿನ ಕಥೆಯೇ ಬೇರೆ. ಶೂಟಿಂಗ್‍ಗೆ ಮುನ್ನ ವಿಘ್ನ ನಿವಾರಕನ ನೆನೆಯುವುದನ್ನು ಮಾತ್ರ ಸಿನಿಮಾ ಮಂದಿ ಮರೆಯುವುದಿಲ್ಲ.

ವಿನಾಯಕ ಚೌತಿ

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗಣೇಶನ ಕುರಿತಂತೆ ಪೌರಾಣಿಕ ಚಿತ್ರಗಳು ಬಂದದ್ದು ಕಡಿಮೆ. ಶಿವ, ಷಣ್ಮುಖನ ಕಥೆಗಳಲ್ಲಿ ಪ್ರಾಸಂಗಿಕವಾಗಿ ಗಣೇಶ ಕಾಣಿಸಿಕೊಳ್ಳುತ್ತಾನೆ. ಕನ್ನಡದ `ಭೂಕೈಲಾಸ’, `ಸತಿ ಸಾವಿತ್ರಿ’, `ಪಾರ್ವತಿ ಕಲ್ಯಾಣ’ ಸಿನಿಮಾಗಳಲ್ಲಿ ಗಣೇಶನ ಉತ್ತಮ ಚಿತ್ರಣ ಸಿಗುತ್ತದೆ. ಹಾಗೆ ನೋಡಿದರೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲೇ ಗಣೇಶನ ಸ್ತುತಿ ಹೆಚ್ಚು. `ವಿನಾಯಕ ಚೌತಿ’, `ನಾಯಕುಡು ವಿನಾಯಕುಡು’ ಜನಪ್ರಿಯ ತೆಲುಗು ಗಣೇಶ ಸಿನಿಮಾಗಳು. ತಮಿಳಿನ ಮುರುಗನ್ ಕಥೆಗಳಲ್ಲಿ ಪುಳ್ಳಯಾರ್ (ಗಣೇಶ) ಬಂದು ಹೋಗುತ್ತಾನೆ.

ಇನ್ನು ಸಾಮಾಜಿಕ ಚಿತ್ರಗಳಲ್ಲೂ ಗಣೇಶನ ಆರಾಧನೆ ಕಡಿಮೆ. ಇತರೆ ದೇವತೆಯರಂತೆ (ನಾಗದೇವತೆ) ಗಣೇಶನ ಪವಾಡದ ಕಥೆಗಳಿಲ್ಲ. ಅಪರೂಪ ಎನ್ನುವಂತೆ ಕನ್ನಡದಲ್ಲಿ `ಗಣೇಶನ ಮಹಿಮೆ’ ಚಿತ್ರ ತಯಾರಾಗಿತ್ತು. ಉಳಿದಂತೆ ಕೆಲವು ಚಿತ್ರಗಳಲ್ಲಿ ಗಣೇಶನ ಪೂಜೆ, ಉತ್ಸವದ ಸೀನ್‍ಗಳು ಕಾಣಿಸುತ್ತವೆ. ಡಾ.ರಾಜ್‍ರ `ದಾರಿ ತಪ್ಪಿದ ಮಗ’ ಚಿತ್ರದಿಂದ `ವಿನಾಯಕರ ಗೆಳೆಯರ ಬಳಗ’ದವರೆಗೆ ಸಾಕಷ್ಟು ಉದಾಹರಣೆಗಳಿವೆ. ತಮಿಳು, ತೆಲುಗು ಚಿತ್ರಗಳಲ್ಲೂ ಗಣಪನ ಹಾಡು – ಸನ್ನಿವೇಶಗಳಿಗೆ ಕೊರತೆಯಿಲ್ಲ.

ಫಣಿರಾಮಚಂದ್ರ ನಿರ್ದೇಶನದ `ಗಣೇಶ’ ಸರಣಿ ಚಿತ್ರಗಳಿಗೂ, ವಿಘ್ನೇಶ್ವರನಿಗೂ ಯಾವುದೇ ಸಂಬಂಧವಿಲ್ಲ. ತೆಲುಗಿನ `ವಿನಾಯಕರಾವ್ ಪೆಳ್ಳಿ’ ಕಾದಂಬರಿ ಇಲ್ಲಿ `ಗಣೇಶನ ಮದುವೆ’ಯಾಗಿ ತೆರೆಗೆ ಬಂದಿತಷ್ಟೆ. `ಗಣಪನದ್ದು ವಿಶಿಷ್ಟ ರೂಪ. ಆನೆ ಮೊಗದ ಆತನನ್ನು ತೋರಿಸಲು ಹಿಂದೆ ಗ್ರಾಫಿಕ್ಸ್ ತಂತ್ರಜ್ಞಾನ ಇರಲಿಲ್ಲ. ಬಹುಶಃ ಹೀಗಾಗಿ ಪೂರ್ಣಪ್ರಮಾಣದ ಗಣೇಶನ ಪೌರಾಣಿಕ ಚಿತ್ರಗಳು ಬಂದಿರಲಿಕ್ಕಿಲ್ಲ. ಮತ್ತೊಂದೆಡೆ ನಿರ್ಮಾಪಕರಿಗೂ ಭಯವಿತ್ತು. ಪಾತ್ರವನ್ನು ಸರಿಯಾಗಿ ಚಿತ್ರಿಸದಿದ್ದರೆ ಅಪಾಯ ಎಂದು ಹಿಂಜರಿಯುತ್ತಿದ್ದರು’ ಎನ್ನುತ್ತಾರೆ ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್.

500 ಕ್ಕೂ ಹೆಚ್ಚು ಸೀಡಿಗಳು

ಸಿನಿಮಾಗಳಲ್ಲಿ ಗಣೇಶನ ಕುರಿತ ಹಾಡುಗಳು ಹೆಚ್ಚೇನಿಲ್ಲ. ಆದರೆ ಗಣೇಶನ ಭಕ್ತಿಗೀತೆಗಳ ಸಂಖ್ಯೆ ಸಾವಿರದಲ್ಲಿದೆ. ಒಂದು ಅಂದಾಜಿನಂತೆ ಗಣೇಶನ ಕನ್ನಡ ಭಕ್ತಿಗೀತೆಗಳ 500ಕ್ಕೂ ಹೆಚ್ಚು ಕೆಸೆಟ್‍ಗಳಿವೆಯಂತೆ. ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜ್‍ಕುಮಾರ್, ಎಸ್.ಜಾನಕಿ ಮತ್ತಿತರ ಪ್ರಮುಖ ಗಾಯಕರು ಗಣೇಶನ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಕೆಲವರ್ಷಗಳ ಹಿಂದೆ ಗಣೇಶೋತ್ಸವಗಳಲ್ಲಿ ಕಡ್ಡಾಯವಾಗಿ ಭಕ್ತಿಗೀತೆಗಳು ಕೇಳಿಸುತ್ತಿದ್ದವು. ಈಗ ಈ ಪಟ್ಟಿಯಲ್ಲಿ ಸಿನಿಮಾ ಹಾಡುಗಳೇ ಹೆಚ್ಚು.

ಮೈ ಫ್ರೆಂಡ್ ಗಣೇಶ

ಗಣೇಶೋತ್ಸವ ಅತ್ಯಂತ ವೈಭವಯುತವಾಗಿ ನಡೆಯುವುದು ಮುಂಬೈನಲ್ಲಿ. ಹಾಗಾಗಿ ಗಣೇಶನ ಆರಾಧನೆ ಬಾಲಿವುಡ್‍ನಲ್ಲೇ ಹೆಚ್ಚು. ನಮ್ಮಲ್ಲಿ ಮಾರಮ್ಮನ ಜಾತ್ರೆಯಲ್ಲಿ ಸಿಗುವ ಸಾಂಸ್ಕೃತಿಕ ಚಹರೆ ಹಿಂದಿ ಚಿತ್ರಗಳಿಗೆ ಗಣೇಶೋತ್ಸವದಲ್ಲಿ ಸಿಗುತ್ತದೆ. ಕೆಲವು ಸಿನಿಮಾಗಳಲ್ಲಿ ನಿಜಕ್ಕೂ ಗಣೇಶನ ಉತ್ತಮ ಚಿತ್ರಣವಿದೆ. ಆದರೆ ಬಹುಪಾಲು ಹಿಂದಿ ಸಿನಿಮಾಗಳಲ್ಲಿ ಈ ಉತ್ಸುವ ಕ್ರೈಂಗೆ ಭೂಮಿಕೆಯಾಗುತ್ತದೆ. ಅಮಿತಾಭ್‍ರ `ಅಗ್ನಿಪಥ್’, ರಾಂಗೋಪಾಲ್ ವರ್ಮಾರ `ಸತ್ಯ’ ಎರಡು ಪ್ರಮುಖ ಉದಾಹರಣೆ. ಆದರೆ `ಡಾನ್’ ರಿಮೇಕ್‍ನಲ್ಲಿ ಶಾರುಖ್ ಖಾನ್ ಈ ತಪ್ಪು ಮಾಡಲಿಲ್ಲ.

ಗಣೇಶನ ಚಿತ್ರಣಕ್ಕೆ ಸಂಬಂಸಿದಂತೆ `ಟಕ್ಕರ್’ (1980) ಸಿನಿಮಾ ವಿವಾದಕ್ಕೀಡಾಗಿತ್ತು. ಜಿತೇಂದ್ರ ಮತ್ತು ಸಂಜೀವ್ ಕುಮಾರ್ ಚಿತ್ರದ ತಾರೆಯರು. ನಿಷೇತ ಮಾದಕ ವಸ್ತುವನ್ನು ಗಣೇಶನ ಮೂರ್ತಿಗಳಲ್ಲಿ ತುಂಬಿ ಕಳ್ಳಸಾಗಣೆ ಮಾಡುವ ಕಥೆ. ಹಲವರು ಇದನ್ನು ಖಂಡಿಸಿದ್ದರಿಂದ ಐಡಿಯಾ ಮರುಕಳಿಸಲಿಲ್ಲ. ಮಿಥುನ್ ಚಕ್ರವರ್ತಿ ನಟಿಸಿದ್ದ `ಹಮ್ ಪಾಂಚ್’ನಲ್ಲಿ ಅದ್ಧೂರಿ ಗಣೇಶೋತ್ಸವ ಜರುಗುತ್ತದೆ. ಈ ಚಿತ್ರದ `ದೇವಾ ಹೋ ದೇವಾ’ ಹಾಡು ಜನಪ್ರಿಯವಾಗಿತ್ತು. ನಾನಾ ಪಾಟೇಕರ್‍ಗೆ ಆ್ಯಂಗ್ರಿ ಯಂಗ್‍ಮ್ಯಾನ್ ಇಮೇಜು ಕೊಟ್ಟ `ಅಂಕುಶ್’ ಮತ್ತೊಂದು ಉತ್ತಮ ಪ್ರಯೋಗ. ಏರಿಯಾದ ಯುವಕರೆಲ್ಲರೂ ಸೇರಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ ಚಿತ್ರವಿದು. ಹೀಗೆ ನಂತರ ಹತ್ತಾರು ಸಿನಿಮಾಗಳಲ್ಲಿ ಗಣೇಶ ಬಂದು ಹೋಗಿದ್ದಾನೆ.

ವಿಚಿತ್ರ ರೂಪಿನ ಗಣೇಶನೆಂದರೆ ಮಕ್ಕಳಿಗೆ ವಿಶೇಷ ಕುತೂಹಲ. ಗಣೇಶನ ಆ್ಯನಿಮೇಷನ್ ಸಿನಿಮಾಗಳಿಗೆ ಈ ಅಂಶವೇ ವರವಾಯ್ತೇನೋ? ರಾಜೀವ್ ರೂಯಾ 2007ರಲ್ಲಿ `ಮೈ ಫ್ರೆಂಡ್ ಗಣೇಶ’ ಮಕ್ಕಳ ಚಿತ್ರ ನಿರ್ದೇಶಿಸಿದರು. ಸರಿಸುಮಾರು ಇದೇ ದಿನಗಳಲ್ಲಿ `ಬಾಲ್ ಗಣೇಶ’ (2007) ತೆರೆಕಂಡಿತು. ಈ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಿಂದ ಪ್ರೇರಿತರಾದ ನಿರ್ದೇಶಕ ಪಂಕಜ್ ಶರ್ಮಾ `ಬಾಲ್ ಗಣೇಶ -2′ (2009) ಸರಣಿ ಮಾಡಿದರು. ಈ ಚಿತ್ರಗಳ ಡಿವಿಡಿಗಳು ಮಾರುಕಟ್ಟೆಯಲ್ಲಿ ಇಂದಿಗೂ ಭರ್ಜರಿಯಾಗಿ ಬಿಕರಿಯಾಗುತ್ತಿವೆ.

ಇದು ತೆರೆಯ ಮೇಲಿನ ಕಥೆಯಾಯ್ತು. ತೆರೆಯಾಚೆ ಕೂಡ ಬಾಲಿವುಡ್ ತಾರೆಯರ ಗಣೇಶನ ಆರಾಧನೆ ಸುದ್ದಿಯಾಗುತ್ತದೆ. ಸ್ಟಾರ್ ನಟ ಸಲ್ಮಾನ್ ಖಾನ್ ಪ್ರತೀ ವರ್ಷ ತಮ್ಮ ಮನೆಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆ. ಸರ್ವಧರ್ಮ ಸಮ್ಮಿಲನದ ಸಲ್ಲೂ ಕುಟುಂಬದಲ್ಲಿ ಗಣೇಶನ ಹಬ್ಬ ಬಲು ಜೋರು. ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಮತ್ತಿತರರ ಗಣೇಶೋತ್ಸವಗಳೂ ಸುದ್ದಿಯಾಗುತ್ತವೆ. ತಾರೆಯರನೇಕರು ಸಾರ್ವಜನಿಕ ಉತ್ಸವಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.

Tags: ಚಲನಚಿತ್ರಸಾರ್ವಜಿಕ ಗಣೇಶೋತ್ಸವಸಿನೆಮಾ ಸುದ್ದಿ
Previous Post

ಕೋವಿಡ್ ಸಂಕಷ್ಟದ ಮಧ್ಯೆಯೂ ಬೆಂಗಳೂರಿನಲ್ಲಿ ಗರಿಗೆದರಿದ ಹಬ್ಬದ ವಾತಾವರಣ

Next Post

SDPI ನಿಷೇಧ ಮಾಡಲು ರಾಜ್ಯ ಸರ್ಕಾರಕ್ಕೆ ಒಲವಿಲ್ಲವೇ..?

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
Next Post
SDPI ನಿಷೇಧ ಮಾಡಲು ರಾಜ್ಯ ಸರ್ಕಾರಕ್ಕೆ ಒಲವಿಲ್ಲವೇ..?

SDPI ನಿಷೇಧ ಮಾಡಲು ರಾಜ್ಯ ಸರ್ಕಾರಕ್ಕೆ ಒಲವಿಲ್ಲವೇ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada