ಭಾರತ-ಚೀನಾ ಗಡಿ ವಿವಾದ ತಾರಕಕ್ಕೇರಿದ ಬೆನ್ನಲ್ಲಿ ಭಾರತೀಯ ವಾಯುಸೇನೆಯ ಯುಧ್ದ ವಿಮಾನಗಳು, ಹೆಲಿಕಾಪ್ಟರ್‌ಗಳು ಲೇಹ್,ಲಢಾಕ್ ಭಾಗಕ್ಕೆ ತಲುಪಿದೆ. ವಾಯುಸೇನೆಯ ಮುಖ್ಯಸ್ಥ ಆರ್ ಕೆ ಎಸ್ ಭಧೌರಿಯಾ ಲೇಹ್ ಮತ್ತು ಶ್ರೀನಗರದ ವಾಯುನೆಲೆಗಳಿಗೆ ಎರಡು ದಿನಗಳ ತರಾತುರಿಯ ಭೇಟಿ ನೀಡಿದ್ದಾರೆ. ಪೂರ್ವ ಲಢಾಖ್‌ನಲ್ಲಿ ಯಾವುದೇ ವೈಮಾನಿಕ ಕಾರ್ಯಾಚರಣೆ ನಡೆಸಲು ಶ್ರೀನಗರ ಹಾಗೂ ಲೇಹ್ ವಾಯುನೆಲೆಗಳು ನಿರ್ಣಾಯಕವಾಗಿದೆ.
ಗಾಲ್ವಾನ್ ಪ್ರದೇಶದಲ್ಲಿ 20 ಯೋಧರನ್ನು ಕಳೆದುಕೊಂಡ ಬಳಿಕ ನಡೆದ ಹಿರಿಯ ಸೇನಾಧಿಕಾರಿಗಳ ಸಭೆಯ ಬಳಿಕದ ವಾಯುಸೇನೆಯ ಮುಖ್ಯಸ್ಥರ ಈ ಭೇಟಿ ಮಹತ್ತರವಾದದ್ದು.
Military chopper and fighter jet activity seen in Leh, Ladakh pic.twitter.com/1OoeEIPgrw
— ANI (@ANI) June 19, 2020
ಎರಡು ದಿನದ ಭೇಟಿಯಲ್ಲಿದ್ದ ವಾಯುಸೇನೆ ಮುಖ್ಯಸ್ಥರು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪರಿಶೀಲನೆ ನಡೆಸಿದ್ದಾರೆ. ಪೂರ್ವ ಲಢಾಕಿನಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸೈನಿಕರನ್ನು ಚೀನಾ ನಿಯೋಜಿಸಿದೆ ಎಂದು ಸರ್ಕಾರದ ಮೂಲಗಳು ANI ಸುದ್ದಿ ಸಂಸ್ಥೆಗೆ ಹೇಳಿದೆ. ಜೂನ್ 17 ರಂದು ಲೇಹ್ ಗೆ ಭೇಟಿ ನೀಡಿರುವ ಮುಖ್ಯಸ್ಥರು ಜೂನ್ 18 ರಂದು ಧ್ರೀನಗರದ ವಾಯುನೆಲೆಗಳಿಗೆ ಭೇಟಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಈಗಾಗಲೇ ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ಮುಖ್ಯ ಪಾತ್ರ ವಹಿಸಿದ್ದ ಮಿರಾಜ್ 2000 ಮತ್ತು ಸುಕೊಯೋ ಯುದ್ಧ ವಿಮಾನಗಳು ಲೇಹ್ ವಾಯುನೆಲೆಗೆ ಆಗಮಿಸಿದೆ. ಇದರ ಜೊತೆ ಆಕ್ರಮಣಕಾರಿ ಹೆಲಿಕಾಪ್ಟರ್‌ಗಳಾದ ಅಪಾಚೆ ಮತ್ತು ಚಿನೂಕ್ ಕೂಡಾ ಲೇಹ್ ವಾಯುನೆಲೆಯಲ್ಲಿ ಚಟುವಟಿಕೆ ಶುರುಮಾಡಿದೆ.






