ರಾಜ್ಯದಲ್ಲಿಂದು ಮೊದಲ ಹಂತದ ಗ್ರಾಮಪಂಚಾಯಿತಿ ಚುನಾವಣೆಯುತ್ತಿದೆ. ರಾಜ್ಯದ 30 ಜಲ್ಲೆಗಳಲ್ಲಿ ಒಟ್ಟು 5,762 ಗ್ರಾಮಪಂಚಾಯಿತಿಗಳಿದ್ದು, ಕೆಲವೊಂದು ತಾಲೂಕುಗಳ ಗ್ರಾಮಪಂಚಾಯಿತಿ ಚುನಾವಣೆ ಇಂದು ನಡೆದರೆ ಎರಡನೇ ಹಂತದ ಚುನಾವಣೆ ಡಿ27ಕ್ಕೆ ನಡೆಯಲಿದೆ. ಡಿ30ಕ್ಕೆ ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯೆ ಆಡಳಿತ ಪಕ್ಷ ಮಹತ್ವದ ಸುದ್ದಿಯೊಂದನ್ನು ಹೊರಹಾಕಿದೆ ಬಿಜೆಪಿಯನ್ನು ಗೆಲ್ಲಿಸಿದ್ರೆ ಪ್ರತಿ ಗ್ರಾಮಕ್ಕೆ 1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಲಾಗಿದೆ.
ರಾಜ್ಯದ 113 ತಾಲೂಕುಗಳಲ್ಲಿ 3019 ಗ್ರಾಮಪಂಚಾಯಿತಿಗಳಿದ್ದು, 48,048 ಚುನಾವಣೆ ನಡೆಯಬೇಕಿತ್ತು. ಇಲ್ಲಿ 4,377 ಮಂದಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 48,238 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಈಗಾಗಲೆ ರಾಜ್ಯ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಮತಗಟ್ಟೆಯ ಸುತ್ತಮುತ್ತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ʼಅಂತ್ಯೋದಯ ಗ್ರಾಮಸ್ವರಾಜ್ಯ ಬಿಜೆಪಿಯ ಗುರಿ. ಗ್ರಾಮಾಭಿವೃದ್ಧಿಗಾಗಿ ಕೇಂದ್ರ ರಾಜ್ಯದ ಬಿಜೆಪಿ ಸರ್ಕಾರಗಳು ನಿರಂತರ ಕಾರ್ಯನಿರತವಾಗಿವೆ. ಸಧೃಡ, ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಗ್ರಾಮಪಂಚಾಯಿತಿಗಳ ಪಾತ್ರ ಮುಖ್ಯ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಶೀರ್ವದಿಸಿʼ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತದಾರರಲ್ಲಿ ಕೋರಿದ್ದಾರೆ.
ಜನಸೇವೆ, ದೇಶ ಸೇವೆಯನ್ನು ಉಸಿರಾಗಿಸಿಕೊಂಡಿರುವ ಭಾರತೀಯ ಜನತಾಪಾರ್ಟಿ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸೋಣ ಗ್ರಾಮ ಗ್ರಾಮಗಳಲ್ಲಿ ಕಮಲ ಅರಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ದೇಶ ರಾಮ ರಾಜ್ಯವಾಗಲು ಗ್ರಾಮಗಳು ಅಭಿವೃದ್ಧಿಯಾಗಬೇಕು ಮೋದಿ ನೇತೃತ್ವದ ಸರ್ಕಾರ 15 ನೇ ಹಣಕಾಸು ಆಯೋಗದಲ್ಲಿ ಪ್ರತಿ ಗಾಮ ಪಂಚಾಯಿತಿಗೆ 1 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ಆಡಳಿತ ಪಕ್ಷ ತಿಳಿಸಿದೆ.