• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘ಗುಜರಾತ್ ಮಾದರಿ ಅಭಿವೃಧ್ಧಿ’ಯಲ್ಲಿ ಕೋವಿಡ್-19ರ ಮರಣ ಪ್ರಮಾಣ ಯಾಕೆ ಹೆಚ್ಚಿದೆ?

by
April 10, 2020
in ದೇಶ
0
‘ಗುಜರಾತ್ ಮಾದರಿ ಅಭಿವೃಧ್ಧಿ’ಯಲ್ಲಿ ಕೋವಿಡ್-19ರ ಮರಣ ಪ್ರಮಾಣ ಯಾಕೆ ಹೆಚ್ಚಿದೆ?
Share on WhatsAppShare on FacebookShare on Telegram

ಏಪ್ರಿಲ್ 7 ರ ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ದತ್ತಾಂಶದ ಪ್ರಕಾರ ಗುಜರಾತ್‌ನಲ್ಲಿ COVID-19 ನಿಂದ ಉಂಟಾಗುವ ಸಾವಿನ ಪ್ರಮಾಣವುಃ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಅತಿ ಹೆಚ್ಚು ಎಂದು ಸೂಚಿಸುತ್ತದೆ.

ADVERTISEMENT

ಗುಜರಾತ್‌ನಲ್ಲಿ ಒಟ್ಟು ಕರೊನ ಸೋಂಕಿತರ ಸಂಖ್ಯೆ 165 ಆಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಗುಜರಾತ್‌ನಲ್ಲಿ ಸಾವಿನ ಪ್ರಮಾಣ 7.88% ಆಗಿದೆ. ಒಟ್ಟಾರೆಯಾಗಿ ಭಾರತದಲ್ಲಿ COVID-19ನಿಂದ ಉಂಟಾದ ಸಾವಿನ ಪ್ರಮಾಣ 2.87%.

ಗುಜರಾತ್‌ನಲ್ಲಿ ಕಂಡುಬಂದ ಹೆಚ್ಚಿನ ಸಾವಿನ ಪ್ರಮಾಣವು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಆತಂಕಕಾರಿ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಅರ್ಥಮಾಡಿಕೊಳ್ಳುವ ತುರ್ತು ಅವಶ್ಯಕತೆಯಿದೆ, ಅದರಲ್ಲೂ ವಿಶೇಷವಾಗಿ “ಗುಜರಾತ್ ಮಾದರಿ”ಯಂತೆ ಭಾರತವನ್ನು ಮಾಡುವುದಾಗಿ ಮತಗಳನ್ನು ಪಡೆದಿರುವಾಗ.

ಭಾರತದಾದ್ಯಂತ ಲಾಕ್‌ಡೌನ್‌ ಹೇರಿದ ನಂತರವೇ ಗುಜರಾತ್ ಸರ್ಕಾರವು COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಕಾಯ್ದಿರಿಸುವ ಪ್ರಕ್ರಿಯೆಯನ್ನು ಆರಂಭಿಸಿತು.ಬರೀ 156 ವೆಂಟಿಲೇಟರ್‌ಗಳನ್ನು ಸಂಗ್ರಹಿಸಿ ಅದರ ನಿರ್ವಹಣೆಗಾಗಿ 9,000 ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿತು. ಈ ತುರ್ತು ಅವಶ್ಯಕತೆಯ ಕೊರತೆಯು ಗುಜರಾತ್‌ನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯ ಕಳಪೆ ಸ್ಥಿತಿಯನ್ನು ತೋರಿಸುತ್ತದೆ.

2014 ರಲ್ಲಿ ಗುಜರಾತ್ ಮಾದರಿ ಅಭಿವೃದ್ಧಿಯನ್ನು ದಾಳವಾಗಿಟ್ಟುಕೊಂಡು ಮೋದಿ ಪ್ರಧಾನಿಯಾದರು. 2001 ರಿಂದ 2014 ರ ನಡುವೆ ಸುಮಾರು 13 ವರ್ಷಗಳ ಕಾಲ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರ ಸಾಧನೆಗಳನ್ನು ಅವರು ಕೇಂದ್ರದಲ್ಲಿ ತಂದಿರುವ ಆರೋಗ್ಯ ಕಾಳಜಿಯ ನೀತಿಯನ್ನು ಗಮನಿಸಿ ಮತ್ತು ಕರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಅವರ ಪ್ರತಿಕ್ರಿಯೆಯನ್ನು ಗಮನಿಸಿ ಅರ್ಥಮಾಡಿಕೊಳ್ಳಬಹುದು ಎಂದರೆ ತಪ್ಪಾಗಲಾರದು.

ಪ್ರಸ್ತುತ ಗುಜರಾತಿನಲ್ಲಿ ಪ್ರತೀ 1,000 ಜನಸಂಖ್ಯೆಗೆ 0.33 ಆಸ್ಪತ್ರೆ ಹಾಸಿಗೆಗಳನ್ನು ಹೊಂದಿದೆ. ರಾಷ್ಟ್ರೀಯ ಸರಾಸರಿ ಪ್ರತೀ 1,000 ಜನಸಂಖ್ಯೆಗೆ 0.55 ಹಾಸಿಗೆಗಳು. ಗುಜರಾತ್ ಮತ್ತು ರಾಷ್ಟ್ರೀಯ ಸರಾಸರಿ ನಡುವಿನ ಈ ಅಸಮಾನತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತವು 2011 ರಲ್ಲಿ 1,000 ಜನಸಂಖ್ಯೆಗೆ 0.70 ಆಸ್ಪತ್ರೆ ಹಾಸಿಗೆಗಳನ್ನು ಹೊಂದಿತ್ತು

ಸಾಮಾಜಿಕ ವಲಯದ ಖರ್ಚಿನ ವಿಷಯದಲ್ಲಿ ಭಾರತದ 18 ಅತಿದೊಡ್ಡ ರಾಜ್ಯಗಳಲ್ಲಿ ಗುಜರಾತ್ 17 ನೇ ಸ್ಥಾನದಲ್ಲಿದೆ. ಗುಜರಾತ್ ತನ್ನ ಒಟ್ಟು ಬಜೆಟಿನಲ್ಲಿ ಕೇವಲ 3.61% ಅನ್ನು ಸಾಮಾಜಿಕ ವಲಯಕ್ಕಾಗಿ ಖರ್ಚು ಮಾಡುತ್ತಿದೆ.

ತಲಾ ಆರೋಗ್ಯ ವೆಚ್ಚದ ದೃಷ್ಟಿಯಿಂದ ಗುಜರಾತ್‌ನ ಶ್ರೇಣಿ 1999-2000ರಲ್ಲಿ ಇದ್ದ ನಾಲ್ಕನೇ ಸ್ಥಾನದಿಂದ 2009-10ರಲ್ಲಿ 11 ನೇ ಸ್ಥಾನಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಅಸ್ಸಾಂ 12 ರಿಂದ ಮೂರನೇ ಸ್ಥಾನ ಮತ್ತು ಉತ್ತರ ಪ್ರದೇಶ 15 ರಿಂದ ಒಂಬತ್ತನೇ ಸ್ಥಾನಕ್ಕೆ ಏರಿತ್ತು. 1999-2000ರಲ್ಲಿ, ಗುಜರಾತ್ ತನ್ನ ಒಟ್ಟು ರಾಜ್ಯ ವೆಚ್ಚದ 4.39% ನಷ್ಟು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿತ್ತು, ಆದರೆ 2009-10ರ ವೇಳೆಗೆ ಇದು 0.77% ರಷ್ಟು ಕೆಳಗೆ ಇಳಿಯಿತು.

ಆರೋಗ್ಯ ವೆಚ್ಚದ ದೃಷ್ಟಿಯಿಂದ NSDPಯ ಪಾಲಿನ ಪ್ರಕಾರ ಗುಜರಾತ್ 1999-00 ಮತ್ತು 2009-10ರ ನಡುವೆ 0.87% ರಿಂದ 0.73% ಕ್ಕೆ ಇಳಿದಿದೆ, ಅದೇ ಅವಧಿಯಲ್ಲಿ ಪ್ರಮುಖ ರಾಜ್ಯಗಳ ಸರಾಸರಿ 0.95% ರಿಂದ 1.04% ಕ್ಕೆ ಏರಿದೆ. ಒಂದೇ ಅವಧಿಯಲ್ಲಿ ತಮಿಳುನಾಡು ಮತ್ತು ಅಸ್ಸಾಂ ತಮ್ಮ ಖರ್ಚನ್ನು ದ್ವಿಗುಣಗೊಳಿಸಿದೆ. ಇದು ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಗುಜರಾತ್ ಸರ್ಕಾರವು ತೋರಿಸಿದ ನಿರಾಸಕ್ತಿಯನ್ನು ಸೂಚಿಸುತ್ತದೆ.

2004-05ರಲ್ಲಿ ಕೇಂದ್ರದಲಲ್ಲಿ UPA ಅಧಿಕಾರಕ್ಕೆ ಬಂದಾಗ ಜಿಡಿಪಿಗೆ ಶೇಕಡಾವಾರು ಆರೋಗ್ಯಕ್ಕಾಗಿ ಸಾರ್ವಜನಿಕ ಖರ್ಚು 0.84%

ಮಾಡುತ್ತಿತ್ತು. ಇದು 2008-09ರ ವೇಳೆಗೆ 1.41% ಕ್ಕೆ ಏರಿತು, ಇದನ್ನು 2014-15ರಲ್ಲಿ ಹೊಸ NDA ಒಕ್ಕೂಟದ ಸರ್ಕಾರವು (ಮೋದಿಯವರ ಮೊದಲ ಅವಧಿ) 0.98% ಕ್ಕೆ ಇಳಿಸಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಇದನ್ನು 1.28% ಕ್ಕೆ ನಿಗದಿಪಡಿಸಲಾಗಿದೆ.

ಗುಜರಾತ್‌ನಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನರು ತಮ್ಮ ಕಿಸೆಯಿಂದ ಖರ್ಚು ಮಾಡಬೇಕಾಗಿದೆ, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಮತ್ತು ಬಿಹಾರದಂತಹ ರಾಜ್ಯಗಳಿಗಿಂತ ಹೆಚ್ಚಾಗಿದೆ. ಇದರರ್ಥ ಗುಜರಾತ್‌ನ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರು ಬಿಹಾರದ ಜನರಿಗಿಂತ ಹೆಚ್ಚಿನ ಹಣವನ್ನು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾಗುತ್ತದೆ. ತಲಾ ಆದಾಯಕ್ಕೆ ಸಂಬಂಧಿಸಿದಂತೆ ಔಷಧಕ್ಕೆ ಮಾಡುವ ಖರ್ಚಿನಲ್ಲಿ 2009-10ರಲ್ಲಿ ಗುಜರಾತ್ 25 ನೇ ಸ್ಥಾನದಲ್ಲಿದೆ.

2001 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಒಟ್ಟು 1,001 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 244 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 7,274 ಉಪ ಕೇಂದ್ರಗಳಿತ್ತು. 2011-12ರಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ 1,158 ಮತ್ತು 318 ಕ್ಕೆ ಏರಿದರೆ,ಏರಿಕೆಗೊಂಡ ಉಪ ಕೇಂದ್ರಗಳ ಸಂಖ್ಯೆ ಒಂದೇ ಒಂದು ಆಗಿದೆ. ಇಂದಿಗೂ ಗುಜರಾತ್‌ನ ಒಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಬಿಹಾರಕ್ಕಿಂತಲೂ ಕಡಿಮೆಯಾಗಿದೆ. ಬಿಹಾರದ ಒಟ್ಟು ಸಾರ್ವಜನಿಕ ಗ್ರಾಮೀಣ ಆಸ್ಪತ್ರೆಗಳ ಸಂಖ್ಯೆ ಗುಜರಾತ್‌ನ ಒಟ್ಟು ಗ್ರಾಮೀಣ ಸಾರ್ವಜನಿಕ ಆಸ್ಪತ್ರೆಗಳ ಮೂರು ಪಟ್ಟು ಹೆಚ್ಚಾಗಿದೆ.

ಪ್ರಸ್ತುತ ಸಾಂಕ್ರಾಮಿಕ ರೋಗದೊಂದಿಗೆ ಜಗತ್ತು ವ್ಯವಹರಿಸುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಅಂದಾಜು ಮಾಡುತ್ತಿವೆ ಮತ್ತು ಅದಕ್ಕೆ ತಕ್ಕಂತೆ ನೀತಿಯನ್ನು ನಿರ್ಧರಿಸುತ್ತವೆ. ಈ ಬಿಕ್ಕಟ್ಟಿನ ಮಧ್ಯೆ ನಮ್ಮ ದೋಷಗಳನ್ನು ಗುರುತಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಭಾರತದಲ್ಲಿ ಪ್ರಸ್ತುತ ಸುಮಾರು 7,13,986 ಆಸ್ಪತ್ರೆ ಹಾಸಿಗೆಗಳು ಮತ್ತು 20,000 ವೆಂಟಿಲೇಟರ್‌ಗಳಿವೆ. ಅಂದಾಜಿನ ಪ್ರಕಾರ, COVID-19 ಸೋಂಕಿತರಲ್ಲಿ ಸುಮಾರು 5% ಜನರಿಗೆ ವೆಂಟಿಲೇಟರ್ ಸಹಾಯ ಬೇಕಾಗುತ್ತದೆ.

ಈ ಪರಿಸ್ಥಿತಿಗಳಲ್ಲಿ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ ದಾಟಿದ ಕ್ಷಣ, ಭಾರತವು ನಿರ್ಣಾಯಕ ರೋಗಿಗಳಿಗೆ ಸಾಕಷ್ಟು ವೆಂಟಿಲೇಟರ್‌ಗಳನ್ನು ಹೊಂದಿರುವುದಿಲ್ಲ. ಅಂದಾಜಿನ ಪ್ರಕಾರ, ಮೇ 15 ರ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 22 ಲಕ್ಷದವರೆಗೆ ತಲುಪಬಹುದು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಇಂಡಿಯಾ ಸಿಮ್‌ನ ಅಂದಾಜು ಇನ್ನೂ ಹೆಚ್ಚಾಗಿದೆ.

ದೇಶಗಳಲ್ಲಿ ಪರಿಸ್ಥಿತಿ ಭಯಾನಕವಾಗಿದ್ದರೂ, ನಾವು ಆಯ್ಕೆ ಮಾಡಿದ ಅಭಿವೃದ್ಧಿಯ ಮಾದರಿಯನ್ನು ನಾವು ಪ್ರಶ್ನಿಸಬೇಕಾಗಿದೆ ಮತ್ತು ಅದು ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಎಲ್ಲಿ ಬಿಟ್ಟಿದೆ ಎಂಬುದನ್ನು ನೋಡಬೇಕು ಮತ್ತು ಮುಂದಿನ ದಿನಗಳಲ್ಲಿ ನಾವು ಹೆಚ್ಚು ಸಮರ್ಥನೀಯ ಅಭಿವೃದ್ಧಿಯ ಮಾದರಿಯ ಬಗ್ಗೆ ಯೋಚಿಸಬೇಕಾಗುತ್ತದೆ.

ಕೃಪೆ: The Wire

Tags: Covid 19Guajrat Modelಕೋವಿಡ್-19ಗುಜರಾತ್ ಮಾದರಿ
Previous Post

ಸುಳ್ಳಿನ ಕಂತೆಗಳ ನಡುವೆ ಬ್ಯಾಂಕ್ ಖಾತೆಗೆ ಬಂತು ಹಣ..!

Next Post

ಖಾಸಗಿ ಬ್ಯಾಂಕುಗಳು ನಿಮ್ಮ ಸಾಲದ ಮೇಲೆ ಹೇರುವ ಹೆಚ್ಚುವರಿ ಬಡ್ಡಿ ಎಷ್ಟು ಗೊತ್ತಾ?

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಖಾಸಗಿ ಬ್ಯಾಂಕುಗಳು ನಿಮ್ಮ ಸಾಲದ ಮೇಲೆ ಹೇರುವ ಹೆಚ್ಚುವರಿ ಬಡ್ಡಿ ಎಷ್ಟು ಗೊತ್ತಾ?

ಖಾಸಗಿ ಬ್ಯಾಂಕುಗಳು ನಿಮ್ಮ ಸಾಲದ ಮೇಲೆ ಹೇರುವ ಹೆಚ್ಚುವರಿ ಬಡ್ಡಿ ಎಷ್ಟು ಗೊತ್ತಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada