ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿದ ಛಾರ್ ಧಮ್ ದೇವಸ್ಥಾನಮ್ ನಿರ್ವಹಣೆ ಮಸೂದೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅಂಗೀಕಾರ ನೀಡಿರುವುದರಿಂದ ಇನ್ನುಮುಂದೆ ಬದ್ರೀನಾಥ್, ಕೇದರ್‌ನಾಥ್, ಯಮುನೋತ್ರಿ ಹಾಗೂ ಗಂಗೋತ್ರಿ ಸೇರಿದಂತೆ 51 ದೇವಾಲಯಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುತ್ತದೆ.
ಹೊಸ ಮಸೂದೆಯಿಂದ ದೇವಾಲಯದಲ್ಲಿ ವೃತ್ತಿಪರವಾದ ಆಡಳಿತ ನೀಡಲು ಸಾಧ್ಯವಾಗುತ್ತದೆ. ದೇವಾಲಯಗಳಿಗೆ ಬರುವ ಲಕ್ಷಾಂತರ ಭಕ್ತಾದಿಗಳು ಹಾಗೂ ಪ್ರವಾಸಿಗಳಿಗೆ ನಿಭಾಯಿಸಲು ಹಾಗೂ ವೃತ್ತಿಪರವಾದ ಸೇವೆ ನೀಡಲು ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
Also Read: ʻಮೋದಿ ಆರತಿʼ : ʻಮೋದಿ ಮೂರ್ತಿʼ : ಕೊನೆಗೂ ಮೋದಿ ಹೆಸರಲ್ಲಿ ದೇವಸ್ಥಾನ.!
2019ರಲ್ಲಿ ಸುಮಾರು ಮೂರು ದಶಲಕ್ಷಕ್ಕೂ ಅಧಿಕ ಭಕ್ತಾದಿ ಹಾಗೂ ಪ್ರವಾಸಿಗಳು ಪರ್ವತದ ತಪ್ಪಲಿನಲ್ಲಿರುವ ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ಅಂಗೀಕರಿಸಲಾಗಿರುವ ಹೊಸ ಕಾಯ್ದೆಯಂತೆ, ಮುಖ್ಯಮಂತ್ರಿ ಆಡಳಿತ ಮಂಡಳಿಯ ಅಧ್ಯಕ್ಷರಾಗಲಿದ್ದು, ಮುಖ್ಯ ಕಾರ್ಯ ನಿರ್ವಾಹಕರಾಗಿ ಹಿರಿಯ IAS ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಹೊಸ ಕಾಯ್ದೆಯ ಪ್ರಕಾರ ತಪ್ಪು ಮಾಡಿದ ಅರ್ಚಕರನ್ನು ಆಡಳಿತ ಮಂಡಳಿ ವಜಾಗೊಳಿಸಬಹುದು.
ಮಸೂದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದಂದಿನಿಂದಲೂ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಹಲವಾರು ಅರ್ಚಕರು ತಾವು ಹಾಗೂ ತಮ್ಮ ಕುಟುಂಬ ದಶಕಗಳಿಂದಲೂ ನಿರ್ವಹಿಸಿಕೊಂಡು ಬಂದಿರುವ ಕರ್ತವ್ಯ ಮತ್ತು ಪ್ರಾಬಲ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
Also Read: ಏನಿದು ತಿರುಪತಿ ಆಸ್ತಿ ವಿವಾದ? ಬಿಜೆಪಿ ನಾಯಕರಿಗೆ ವಲಸೆ ಕಾರ್ಮಿಕರ ಮೇಲಿಲ್ಲದ ಪ್ರೀತಿ ತಿಮ್ಮಪ್ಪನ ಮೇಲೇಕೆ?
ಅದಾಗ್ಯೂ, ಸರ್ಕಾರಕ್ಕೆ ಯಾವುದೇ ಪುರೋಹಿತರ ಹಳೆಯ ಸಂಪ್ರದಾಯಗಳಿಗೆ ಹಾಗೂ ಕರ್ತವ್ಯಗಳನ್ನು ನಿಯಂತ್ರಿಸುವ ಉದ್ದೇಶವಿಲ್ಲವೆಂದು ಛಾರ್ ಧಮ್ ವಿಕಾಸ್ ಪರಿಷದಿನ ಉಪಾಧ್ಯಕ್ಷ ಶಿವ್ ಪ್ರಸಾದ್ ಮಮ್‌ಗೈನ್ ಹೇಳಿದ್ದಾರೆ.
ಸರ್ಕಾರದ ವಾದವನ್ನು ಒಪ್ಪಿಕೊಳ್ಳಲು ತಯಾರಿಲ್ಲದ ವಿರೋಧ ಪಕ್ಷ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಪ್ರೀತಂ ಸಿಂಗ್ ತಮ್ಮ ಪಾರ್ಟಿ ಅಧಿಕಾರಕ್ಕೆ ಬಂದರೆ ಭಕ್ತಾದಿಗಳ ಹಾಗೂ ಅರ್ಚಕರ ವಿರೋಧದ ನಡುವೆ ತಂದ ಹೊಸ ಕಾಯ್ದೆಯನ್ನು ರದ್ದು ಪಡಿಸಲಾಗುವುದು ಎಂದಿದ್ದಾರೆ. ಹೊಸ ಕಾಯ್ದೆಯ ವಿರುಧ್ದದ ಹೋರಾಟದಲ್ಲಿ ಅರ್ಚಕರೊಡನೆ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ.