ದಿನದಿಂದ ದಿನಕ್ಕೆ ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಳ್ತಿದೆ. ತನಿಖೆಯ ಹಾದಿಯಲ್ಲಿ ಸಾಕಷ್ಟು ಸ್ಫೋಟಕ ಅಂಶಗಳು ಒಂದೊಂದಾಗೆ ಬೆಳಕಿಗೆ ಬರ್ತಿದೆ. ಇದೀಗ ಐಎನ್ಎ ಅಂಥದ್ದೇ ಮತ್ತೊಂದು ಮಾಹಿತಿಯನ್ನು ಹೊರಹಾಕಿದೆ.
ಬಾಂಬ್ ಬ್ಲಾಸ್ಟ್ ಮಾಡಿದ ಈ ಆರೋಪಿ ಸಾಮಾನ್ಯನಲ್ಲ. ಈತ ಇಸ್ಲಾಮಿಕ್ ಸ್ಟೇಟ್ & ISIS ನೊಂದಿಗೆ ನಂಟು ಹೊಂದಿರೋ ಸಾಧ್ಯತೆ ದಟ್ಟವಾಗಿರೋದು ತನಿಖ್ಯೆಯಲ್ಲಿ ತಿಳಿದು ಬಂದಿದೆ. ಈತ ಇಂಥ ಕೃತ್ಯ ನಡೆಸಲು ಉಗ್ರ ಸಂಘಟನೆಗಳಿಂದ ಸತತ ಟ್ರೈನಿಂಗ್ ಪಡೆದ್ಕಿಂಡಿದಾನೆ ಎಂದು ಅಧಿಕಾರಿಗಳು ಬಲವಾದ ಶಂಕ್ಯೆ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಕಾರಣ ಅಷ್ಟೇ ಬಲವಾದ ಕಾರಣಗಳು.
ಸಾಮಾನ್ಯವಾಗಿ ಒಂದು ಕೃತ್ಯ ನಡೆದಾಗ ಅದು ಪ್ಲಾನ್ಡ್ ಕ್ರೈಂ ಹೌದಾ ಅಲ್ವಾ ಅನ್ನೋದನ್ನ ಪತ್ತೆಹಚ್ಚೋದಕ್ಕೆ ಪೊಲೀಸರಿಗೆ ಅವರದ್ದೇ ರೀತಿಯ ವಿಧಾನಗಳಿರುತ್ತೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆದಿರೋದ ? ಆರೋಪಿಯ ಉದ್ದೇಶವೇನಾಗಿತ್ತು ? ಈ ಎಲ್ಲವನ್ನೂ ಅಧಿಕಾರಿಗಳು ನಾಜೂಕಾಗಿ ಅಂದಾಗಿಸಿಬಿಡ್ತಾರೆ. ಆ ಪ್ರಕಾರ ಇದು ಪಕ್ಕಾ ಪ್ರಿ-ಪ್ಲಾನ್ಡ್ ಬಾಂಬ್ ಬ್ಲಾಸ್ಟ್ .
ಯಾಕಂದ್ರೆ ಇಲ್ಲಿ ಈ ಕೃತ್ಯ ನಡೆಸಿರುವ ಶಂಕಿತ ಉಗ್ರ ಬಹಳ ಬುದ್ಧಿವಂತಿಕೆ ತೋರಿರೋದು. ಹೌದು , ಪ್ರತಿ ಹಂತದಲ್ಲೂ ಈತ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಎಲ್ಲೂ ಕೂಡ ತನ್ನ ಮೂಕ ಕಾಣದಹಾಗೆ ಮರೆಮಾಚಿದ್ದಾನೆ. ಸಿಸಿಟಿವಿ ಯಲ್ಲಿ ಸಿಕ್ಕಿಬೀಳೋದನ್ನ ಆವಾಯ್ಡ್ ಮಾಡಿದ್ದಾನೆ. ಹಲವಾರು ಬಸ್ ಗಳನ್ನ ಬದಲಾಯಿಸಿ ತನಿಖೆಯ ದಾರಿ ತಪ್ಪಿಸೋ ಪ್ರಯತ್ನ ಮಾಡಿದ್ದಾನೆ.
ಇದೆಲ್ಲವನ್ನೂ ಗಮನಿಸಿದಾಗ ಉಗ್ರ ಸಂಘಟನೆಯಿಂದ ತರಬೇತಿ ಪಡೆದೇ ಈತ ಈ ಕೃತ್ಯ ಮಾಡಿದ್ದಾನೆ ಎಂಬುದು ಖಾತ್ರಿಯಾಗುತ್ತೆ. ಇಸ್ಲಾಮಿಕ್ ಸ್ಟೇಟ್ ಹಾಗೂ ISIS ರೀತಿಯ ಉಗ್ರ ಸಂಸ್ಥೆಗಳು ಈ ಕೃತ್ಯದ ಹಿಂದೆ ಇರೋದು ಈ ಮೂಲಕ ಸಾಬೀತಾಗಿದೆ. ಪೊಲೀಸರು ನಿರಂತರ ತನಿಖೆ ಮುಂದುವರೆಸಿದ್ದು ಯಾವುದೇ ಕ್ಷಣದಲ್ಲಿ ಆರೋಪಿಯ ಸುಳಿವು ಸಿಗಬಹುದಾಗಿದೆ.