• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದ ಕೇಂದ್ರ ಸಚಿವ

by
June 30, 2020
in ದೇಶ
0
ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದ ಕೇಂದ್ರ ಸಚಿವ
Share on WhatsAppShare on FacebookShare on Telegram

ಪೆಟ್ರೋಲ್‌ – ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಈಗಾಗಲೇ ಸಾಕಷ್ಟು ಕಂಗಾಲಾಗಿದ್ದಾರೆ. ಎಲ್ಲಾ ರೀತಿಯ ಸರಕುಗಳ ಬೆಲೆಯೂ ಹೆಚ್ಚಾಗಿದ್ದು ಕರೋನಾ ಕಷ್ಟಕಾಲದಲ್ಲಿ ಜನರು ಅಗತ್ಯ ಸಾಮಾಗ್ರಿಗಳಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ADVERTISEMENT

ಇಂತಹ ಸಂದರ್ಭದಲ್ಲಿ ಅತ್ಯಂತ ಬಾಲೀಶ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಇವರ ಈ ಮಾತುಗಳಿಗೆ ಬಹಳಷ್ಟು ಆಕ್ರೋಶ ವ್ಯಕ್ತವಾಗಿದೆ.

“ಲಾಕ್‌ಡೌನ್‌ನಲ್ಲಿ ಸುಮಾರು 70% ಇಂಧನ ಮಾರಾಟ ಕಡಿಮೆಯಾಗಿತ್ತು. ಲಾಕ್‌ಡೌನ್‌ ಸಡಿಲಿಸಿದ ನಂತರ ಮತ್ತೆ ಸಾಮಾನ್ಯ ಸ್ಥಿತಿಯತ್ತ ಇಂಧನ ಮಾರಾಟ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಒಂದು ಕುಟುಂಬದಲ್ಲಿ ಏನಾದರೂ ಆರ್ಥಿಕ ತೊಂದರೆ ಇದ್ದಲ್ಲಿ, ಯಜಮಾನ ಬಹಳ ಸೂಕ್ಷ್ಮತೆಯಿಂದ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಾನೆ. ಇಂಧನ ಬೆಲೆ ಏರಿಕೆಯನ್ನು ಕೂಡಾ ಅದೇ ದೃಷ್ಟಿಯಿಂದ ನೋಡಬೇಕು,” ಎಂದು ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ತೆರಿಗೆಗಳಿಂದ ಅಧಿಕವಾಗಿ ಸಂಗ್ರಹವಾದ ಹಣವನ್ನು ಆರೋಗ್ಯ, ಉದ್ಯೋಗ ಮತ್ತು ಜನರ ಆರ್ಥಿಕ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ, ಎಂದು ವಿವರಣೆ ನೀಡಿದ್ದಾರೆ. ಆದರೆ, ಇಲ್ಲ ಅರ್ಥವಾಗದ ವಿಷಯವೇನೆಂದರೆ, ದೇಶದಲ್ಲಿ ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿರುವಾಗ, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ದಿನ ದೂಡುವ ಸಂದರ್ಭದಲ್ಲಿ ಜನರ ಬಳಿ ಹಣವನ್ನು ಕಿತ್ತುಕೊಂಡು ಸರ್ಕಾರವು ಜನರನ್ನು ಹೇಗೆ ಆರ್ಥಿಕವಾಗಿ ಸದೃಢಗೊಳಿಸುತ್ತಾರೆ ಎಂಬುದನ್ನು ವಿವರಿಸಿಲ್ಲ.

ಇಂಧನ ಬೆಲೆ ಏರಿಕೆ ವಿರುದ್ದ ನಿನ್ನೆ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಎಲ್ಲಾ ರಾಜ್ಯಗಳಲ್ಲಿಯೂ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡಿತ್ತು. ಇದರ ಫಲವಾಗಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ಏರಿಕೆ ಆಗಿಲ್ಲ. ಕಳೆದ ಸುಮಾರು ಎರಡು ವಾರಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಇಂಧನ ಬೆಲೆ ಇಂದು ಏರಿಕೆಯಾಗದೇ ಇರುವುದು ಕಾಂಗ್ರೆಸ್‌ ಪ್ರತಿಭಟನೆಗೆ ಸಿಕ್ಕ ಪ್ರತಿಫಲವೇ ಎಂಬ ಅಂಶವೂ ಗಮನಿಸಬೇಕಾಗಿದೆ.

Tags: Central Minister Dharmendra PradhanFuel price hikepetrol-diesel price hikeಇಂಧನ ಬೆಲೆ ಏರಿಕೆಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
Previous Post

ಅಪ್ಲಿಕೇಶನ್ ಬ್ಯಾನ್: TikTok ಸ್ಪಷ್ಟೀಕರಣ

Next Post

ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ

Related Posts

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
Top Story

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

by ಪ್ರತಿಧ್ವನಿ
March 3, 2026
0

ಬೆಂಗಳೂರು : ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಇಂಧನ ಸಚಿವ ಕೆ.ಜೆ. ಜಾಋಜ್ ಜನರ ಸಮಸ್ಯೆಗಳನ್ನು ಆಲಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ...

Read moreDetails
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

March 3, 2026
ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

March 3, 2026
Next Post
ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ

ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada