COVID-19 ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳಿಗೆ 12 ಸಂಭಾವ್ಯ ಲಸಿಕೆಗಳನ್ನು ಆಯ್ಕೆ ಮಾಡಲಾಗಿದೆ, ಅದನ್ನು ಮಾನವರ ಮೇಲೆ ಪ್ರಯೋಗಿಸಿ ಯಶಸ್ವಿಯಾದರೆ ಆಗಸ್ಟ್ ಮಧ್ಯಂತರದ ಅವಧಿಯಲ್ಲಿ ಲಸಿಕೆ ದೊರೆಯಬಹುದು ಎಂದು ಸರ್ಕಾರದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (BBIL) ಸಹಭಾಗಿತ್ವದಲ್ಲಿ “ಕೋವಾಕ್ಸಿನ್” (Covaxin) ಅನ್ನು ಅಭಿವೃದ್ಧಿಪಡಿಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ತ್ವರಿತಗತಿಯ ಪ್ರಯತ್ನ ಪಡುತ್ತಿದೆ. ಆಗಸ್ಟ್ 15 ರೊಳಗೆ ಭಾರತದಲ್ಲಿ ಮೊಟ್ಟಮೊದಲ ನಿರ್ಮಿತ ಕರೊನಾ ವೈರಸ್ ಲಸಿಕೆಯನ್ನು ಲಭ್ಯವಾಗಬಹುದೆಂದು ಸಂಸ್ಥೆ ಹೇಳಿದೆ.
ಸರ್ಕಾರದ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವ ಯೋಜನೆ ಆಗಿರುವುದರಿಂದ ಕ್ಲಿನಿಕಲ್ ಪ್ರಯೋಗಗಳನ್ನು ಹೆಚ್ಚಿಸಲು ಸಂಸ್ಥೆಗಳಿಗೆ ICMR ಹೇಳಿದೆ.
“ಈ ಲಸಿಕೆಯನ್ನು ಪುಣೆಯ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ತಯಾರಿಸದ್ದು, ICMR ಮತ್ತು BBIL ಈ ಲಸಿಕೆಯ ಅಭಿವೃದ್ಧಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ICMR ಹೇಳಿದೆ
ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ರೊಳಗೆ ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ. ಎಲ್ಲಾ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ನಂತರ 2020 ಆಗಸ್ಟ್ 15 ರೊಳಗೆ ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ” ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.
