ಕೇರಳ ಹಾಗೂ ಪಶ್ಚಿಮ ಬಂಗಾಳ ಮೂಲದ ಅಲ್-ಖೈದಾ ಸಂಘಟನೆಗೆ ಸೇರಿದ ಒಂಬತ್ತು ಜನ ಉಗ್ರರನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂವರು ಬಂಧಿತರು ಕೇರಳದ ಎರ್ನಾಕುಲಂ ಹಾಗೂ ಆರು ಜನರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನವರು ಎಂದು ತಿಳಿದುಬಂದಿದೆ.
ಮೊಸರಫ್ ಹೊಸ್ಸೇನ್, ಮುರ್ಶೀದ್ ಹಸನ್ ಹಾಗೂ ಇಯಾಕುಬ್ ಬಿಸ್ವಾಸ್ ಎಂಬ ಇಬ್ಬರು ಕೇರಳದ ನಿವಾಸಿಗಳಾಗಿದ್ದು, ನಜ್ಮುಸ್ ಶಾಕೀಬ್, ಅಬು ಸೂಫಿಯೂನ್, ಮೈನುಲ್ ಮೊಂಡಲ್, ಲೀಯಾನ್ ಅಹ್ಮದ್, ಅಲ್-ಮಾಮುನ್ ಕಮಾಲ್ ಮತ್ತು ಅತಿತುರ್ ರೆಹ್ಮಾನ್ ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದಾರೆ.


ಬಂಧಿತರಿಂದ ಎಲೆಕ್ಟ್ರಾನಿಕ್ ವಸ್ತುಗಳು, ಚೂಪಾದ ಆಯುಧಗಳು, ದೇಸಿ ಪಿಸ್ತೂಲ್, ಕಚ್ಚಾ ಬಾಂಬ್ ತಯಾರಿಸುವ ಕುರಿತಾಗಿ ಇರುವಂತಹ ಲೇಖನಗಳೊಂದಿಗೆ ʼಜಿಹಾದಿ ಸಾಹಿತ್ಯʼವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
NIA Arrests Nine Al-Qaeda Terrorists from West Bengal and Kerala pic.twitter.com/qL7p4rR9lc
— NIA India (@NIA_India) September 19, 2020
ದೇಶದ ವಿವಿದೆಡೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಸಂಘಟಿಸಿ ಅಮಾಯಕ ನಾಗರಿಕರನ್ನು ಕೊಲ್ಲುವ ಯೋಜನೆಯನ್ನು ಅಲ್-ಖೈದಾ ಹಾಕಿಕೊಂಡಿತ್ತು ಎಂದು ಎನ್‌ಐಎ ತಿಳಿಸಿದೆ. ಈ ಕುರಿತಾಗಿ ಪ್ರಕರಣವೂ ದಾಖಲಾಗಿದ್ದು, ಎನ್‌ಐಎ ವಿಚಾರಣೆಯನ್ನು ಆರಂಭಿಸಿದೆ.