• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಪರಿಚಿತ ಮೂಲಗಳಿಂದ ಆದಾಯ: ಬಿಜೆಪಿಯದ್ದೇ ಸಿಂಹಪಾಲು

by
March 11, 2020
in ದೇಶ
0
ಅಪರಿಚಿತ ಮೂಲಗಳಿಂದ ಆದಾಯ: ಬಿಜೆಪಿಯದ್ದೇ ಸಿಂಹಪಾಲು
Share on WhatsAppShare on FacebookShare on Telegram

ದೇಶದ ವಿವಿಧ ರಾಜಕೀಯ ಪಕ್ಷಗಳು ಉದ್ಯಮಿಗಳು , ಶ್ರೀಮಂತರೊಂದಿಗೆ ಹೊಂದಿರುವ ನಂಟು ಹೊಸತೇನಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಅಥವಾ ಕೊಡುಗೆಗೆ ಪ್ರತಿಯಾಗಿ ತಮ್ಮ ಉದ್ಯಮಕ್ಕೆ ಅನುಕೂಲವಾಗುವಂತೆ ಹಲವು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ಜನಸಾಮಾನ್ಯರ ನಂಬಿಕೆ. ಅದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರೇ ಗೊತ್ತಾಗದೇ ಹೋದರೆ ? ಆಳುವ ಪಕ್ಷದ ರಾಜಕಾರಣಿಗಳು ಯಾರಿಗೆ ಯಾವ ರೀತಿಯ ಫೇವರ್‌ ಮಾಡಿದ್ದಾರೆ ಎಂದು ಕನಿಷ್ಟ ಪಕ್ಷ ಊಹಿಸಲೂ ಸಾಧ್ಯವೇ ಇಲ್ಲ. ಅದರೆ, ಆಡಳಿತದ ಪಾರದರ್ಶಕತೆಗೆ ಸಂಪೂರ್ಣವಾಗಿ ವಿರುದ್ದವಾಗಿರುವಂತಹ ವಿಚಾರವಿದು.

ADVERTISEMENT

ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ (ADR Report) ಭಾರತದ ಏಳು ರಾಷ್ಟ್ರೀಯ ಪಕ್ಷಗಳು 2018 -19 ರ ಆರ್ಥಿಕ ವರ್ಷದಲ್ಲಿ 3,749.37 ಕೋಟಿ ರೂ.ಗಳನ್ನು ಪಡೆದಿದ್ದು, ಅದರಲ್ಲಿ 67% ನಷ್ಟು “ಅಪರಿಚಿತ ಮೂಲಗಳಿಂದ” ಬಂದಿದ್ದು ಇದರ ಮೂಲ ಕಂಡುಹಿಡಿಯಲಾಗುವುದಿಲ್ಲ ಎಂದು ಹೇಳಿದೆ. ಒಟ್ಟು ಹಣದ ಪೈಕಿ, ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು 1,612.04 ಕೋಟಿ ರೂಪಾಯಿಗಳ ದೇಣಿಗೆ ಪಡೆದಿದ್ದು, ಇದು ಇತರ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ 64% ಪಟ್ಟು ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ. “ಬಿಜೆಪಿಯ ಆದಾಯವು ಇತರ 5 ರಾಷ್ಟ್ರೀಯ ಪಕ್ಷಗಳು (ರೂ. 900.94 ಕೋಟಿ) ಘೋಷಿಸಿದ ಅಪರಿಚಿತ ಮೂಲಗಳಿಂದ ಬರುವ ಆದಾಯಕ್ಕಿಂತ ಒಂದೂವರೆ ಪಟ್ಟು ಹೆಚ್ಚು” ಎಂದು ವರದಿ ತಿಳಿಸಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ರಾಜಕೀಯ ಲಾಭದಾಯಕತೆಯ ಮೇಲೆ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾಗಿದ್ದು, ಅದರ ಸಂಶೋಧಕರು ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಮತ್ತು ದೇಣಿಗೆ ವರದಿಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ಸಿದ್ದಪಡಿಸಿದೆ. ಸಿಪಿಐ (ಎಂ) ಪಕ್ಷದ 2017-18 ರ ಮಾಹಿತಿಗಳು ಲಭ್ಯವಿರದ ಕಾರಣದಿಂದ ಅಧ್ಯಯನದಲ್ಲಿ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಸಂಸ್ಥೆ ಹೇಳಿದೆ.

ಬಹುಜನ ಸಮಾಜ ಪಕ್ಷವು ಸ್ವಯಂಪ್ರೇರಿತ ಕೊಡುಗೆಗಳಿಂದ (20,000 ರೂ.ಗಿಂತ ಹೆಚ್ಚಿನ ಅಥವಾ ಅದಕ್ಕಿಂತ ಕಡಿಮೆ), ಕೂಪನ್‌ಗಳು / ಚುನಾವಣಾ ಬಾಂಡ್‌ಗಳ ಮಾರಾಟ ಅಥವಾ ಅಪರಿಚಿತ ಆದಾಯದ ಮೂಲಗಳಿಂದ ಯಾವುದೇ ಹಣವನ್ನು ಸ್ವೀಕರಿಸಲಿಲ್ಲ ಎಂದು ಘೋಷಿಸಿದೆ ಎಂದು ವರದಿ ತಿಳಿಸಿದೆ. ಇತರ ಆರು ಪಕ್ಷಗಳ ಪೈಕಿ, ಕಾಂಗ್ರೆಸ್ ಪಕ್ಷವು 728.88 ಕೋಟಿ ರೂ ಪಡೆದಿದ್ದು ಇದು ಇತರ ಎಲ್ಲಾ ಪಕ್ಷಗಳ ಒಟ್ಟು ಆದಾಯದ 29%. ಆಗಿದೆ. 2018-19 ರ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳಿಂದ ಪಕ್ಷಗಳ ಅಪರಿಚಿತ ಆದಾಯದ ಪಾಲು 1960.68ಕೋಟಿ ರೂಪಾಯಿಗಳಾಗಿವೆ.

ಇದನ್ನೂ ಓದಿ: ಬಿಜೆಪಿ ಬೊಕ್ಕಸ ತುಂಬುವ ಎಲೆಕ್ಟೋರಲ್ ಬಾಂಡ್!

ರಾಷ್ಟ್ರೀಯ ಪಕ್ಷಗಳು 2004-05 ಮತ್ತು 2018-19 ರ ನಡುವೆ ಒಟ್ಟು 11,234.12 ಕೋಟಿ ರೂಪಾಯಿಗಳ ಅದಾಯ ಪಡೆದಿವೆ . ಪಕ್ಷಗಳ 2018-19 ಹಣಕಾಸು ವರ್ಷದ ವರದಿಯ ಪ್ರಕಾರ ರಾಜಕೀಯ ಪಕ್ಷಗಳು 71.44 ಲಕ್ಷ ರೂ.ನಗದು ದೇಣಿಗೆ ಸ್ವೀಕರಿಸಿವೆ. ಕಾಂಗ್ರೆಸ್ ಮತ್ತು ಎನ್‌ಸಿಪಿ 2004-’05 ಮತ್ತು 2018-’19 ರ ನಡುವೆ ಕೂಪನ್‌ಗಳ ಮಾರಾಟದ ಮೂಲಕ 3902.63 ಕೋಟಿ ರೂ.ಗಳನ್ನು ಗಳಿಸಿವೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ ತಿಳಿದಿರುವ ಮೂಲಗಳಿಂದ ಬರುವ 20,000 ರೂ.ಗಿಂತ ಹೆಚ್ಚಿನ ಆದಾಯವನ್ನು ದೇಣಿಗೆ ಎಂದು ವ್ಯಾಖ್ಯಾನಿಸಿದೆ. ಈ ರೀತಿ ನೀಡಿರುವ ಹಣದ ದಾನಿಗಳ ವಿವರಗಳನ್ನು ಪಕ್ಷಗಳು ಲಭ್ಯವಾಗಿಸಿವೆ. ತೆರಿಗೆ ರಿಟರ್ನ್‌ಗಳಲ್ಲಿ 20,000 ರೂ.ಗಿಂತ ಕಡಿಮೆ ನೀಡಲಾದ ದೇಣಿಗೆಗಳನ್ನು ಆದಾಯವೆಂದು ಘೋಷಿಸಲಾಗಿದೆ ಆದರೆ ಗುರುತಿಸಲಾಗದ ಮೂಲಗಳಿಂದ ಬಂದಿರುವ ಹಣವನ್ನು ಅಪರಿಚಿತ ಮೂಲಗಳಿಂದ ಬಂದಂತಹ ಗಳಿಕೆ ಎಂದು ವರ್ಗೀಕರಿಸಲಾಗಿದೆ. ಅಂತಹ ಮೂಲಗಳಲ್ಲಿ ಚುನಾವಣಾ ಬಾಂಡ್‌ಗಳು, ಕೂಪನ್‌ಗಳು, ಪರಿಹಾರ ನಿಧಿಗಳು ಮತ್ತು ಸಭೆಗಳ ಕೊಡುಗೆಗಳು ಸೇರಿವೆ.

ಚುನಾವಣಾ ಬಾಂಡ್‌ಗಳು ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕಿನಿಂದ ಖರೀದಿಸಿ ರಾಜಕೀಯ ಪಕ್ಷಕ್ಕೆ ನೀಡಬಹುದಾದ ವಿತ್ತೀಯ ಸಾಧನಗಳಾಗಿವೆ. ನಂತರ ಅವುಗಳನ್ನು ಪಕ್ಷಗಳು ಸೂಕ್ತ ರೀತಿಯಲ್ಲಿ ವಿನಿಯೋಗಿಸಿಕೊಳ್ಳುತ್ತವೆ. ಕೇಂದ್ರ ಹಣಕಾಸು ಮಾಜಿ ಸಚಿವ ಅರುಣ್ ಜೇಟ್ಲಿ ಅವರು 2017 ರಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು, ರಾಜಕೀಯ ಧನಸಹಾಯವನ್ನು ಸ್ವಚ್ಚಗೊಳಿಸಲು ಮತ್ತು ಅದನ್ನು ಪಾರದರ್ಶಕ ಪ್ರಕ್ರಿಯೆಯನ್ನಾಗಿ ಮಾಡಲು ಸರ್ಕಾರ ಬಯಸಿದೆ ಎಂದು ಹೇಳಿದ್ದರು. ಮಾರ್ಚ್‌ನಿಂದ ಬ್ಯಾಂಕ್ ಬಾಂಡ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು.

ಇದನ್ನೂ ಓದಿ: ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ

ಆದಾಗ್ಯೂ, ಈ ಬಾಂಡ್‌ಗಳ ಖರೀದಿಯನ್ನು ಯಾರೂ ಘೋಷಿಸುವ ಅಗತ್ಯವಿಲ್ಲದ ಕಾರಣ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ಘೋಷಿಸುವ ಅಗತ್ಯವಿಲ್ಲದ ಕಾರಣ ಇಡೀ ಪ್ರಕ್ರಿಯೆಯು ಅನಾಮಧೇಯವಾಗಿದೆ. ಚೆಕ್ ಮೂಲಕ ಹಣವನ್ನು ನೀಡಬೇಕಾಗಿರುವುದರಿಂದ ಹಣವನ್ನು “ಕಪ್ಪು” ಆಗುವ ಸಾಧ್ಯತೆಯಿಲ್ಲ ಎಂದು ಸರ್ಕಾರ ವಾದಿಸಿದೆ. ಒಟ್ಟಿನಲ್ಲಿ ಈ ರೀತಿ ಅನಾಮಧೇಯ ಮೂಲಗಳಿಂದ ದೇಣಿಗೆ ಸ್ವೀಕರಿಸಲು ಸರ್ಕಾರವೇ ಅನುವು ಮಾಡಿಕೊಟ್ಟಿದ್ದರೂ ರಾಜಕೀಯ ಪಕ್ಷಗಳ ದೇಣಿಗೆ ವ್ಯವಸ್ಥೆ ಸ್ವಚ್ಚವಾಗಿಲ್ಲ ಎಂಬುದನ್ನು ನಿರೂಪಿಸುತ್ತದೆ.

Tags: ADR ReportElectoral BondElectoral Bondsಭಾರತೀಯ ಜನತಾ ಪಕ್ಷರಾಷ್ಟ್ರೀಯ ಪಕ್ಷಗಳು
Previous Post

ರಾಜಸ್ಥಾನದಲ್ಲಿ ಅಧಿಕಾರ ಪಡೆಯಲು ವೇದಿಕೆಯಾಗಲಿದೆಯೇ ಮಧ್ಯಪ್ರದೇಶದ ಆಪರೇಷನ್‌ ಕಮಲ ಮಾದರಿ

Next Post

ಭಾರತದಲ್ಲಿ ಕರೋನಾಗೆ ಮೊದಲ ಬಲಿ..! ಸತ್ಯ ಒಪ್ಪಿಕೊಳ್ಳಲು ಯಾಕಿಷ್ಟು ತಡ?

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಭಾರತದಲ್ಲಿ ಕರೋನಾಗೆ ಮೊದಲ ಬಲಿ..! ಸತ್ಯ ಒಪ್ಪಿಕೊಳ್ಳಲು ಯಾಕಿಷ್ಟು ತಡ?

ಭಾರತದಲ್ಲಿ ಕರೋನಾಗೆ ಮೊದಲ ಬಲಿ..! ಸತ್ಯ ಒಪ್ಪಿಕೊಳ್ಳಲು ಯಾಕಿಷ್ಟು ತಡ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada