• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಫೋನ್, ಲೈಟ್, ಆಟದ ಸಾಮಾನುಗಳಾಯ್ತು, ಈಗ ಚೀನಾದಿಂದ ಈರುಳ್ಳಿ ಬಂದಿದೆ!

by
December 23, 2019
in ದೇಶ
0
ಫೋನ್
Share on WhatsAppShare on FacebookShare on Telegram

ತಿಂಗಳುಗಳ ಕಾಲ ಗಗನಕ್ಕೇರಿದ ಈರುಳಿ ಬೆಲೆಯನ್ನು ನಿಯಂತ್ರಿಸಲಾಗದ ಭಾರತ ಸರ್ಕಾರ ನೆರೆಯ ಚೀನಾ ಹಾಗೂ ಟರ್ಕಿ ದೇಶಗಳಿಂದ 11,000 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಂಡಿದೆ!

ADVERTISEMENT

`ದಿ ಪ್ರಿಂಟ್’ ಪ್ರಕಟಿಸಿದ ವರದಿ ಈ ಮಾಹಿತಿಯನ್ನು ಹೊರಹಾಕಿದೆ. ಭಾನುವಾರ ಮತ್ತು ಸೋಮವಾರ ಹಲವು ಮಂದಿ ಟ್ವಿಟರ್‍ನಲ್ಲಿ ಹಳದಿ ಬಣ್ಣ, ನುಣುಪಾದ ಈರುಳ್ಳಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವು ಎಲ್ಲಿ ಬೆಳೆದ ಈರುಳ್ಳಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.

ಸುಳಿವು ಬೆನ್ನುಹತ್ತಿದ ದಿ ಪ್ರಿಂಟ್, ಭಾರತ ಸರ್ಕಾರ ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಟನ್ ಈರುಳ್ಳಿ ತರಿಸಿಕೊಂಡಿರುವುದಾಗಿ ಲಭ್ಯವಾಗಿರುವ ದಾಖಲೆಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಅಗ್ಗದ ಆಟಿಕೆಗಳು, ಎಲೆಕ್ಟ್ರಾನಿಕ್ ಸರಕನ್ನು ಭಾರತದ ಮಾರುಕಟ್ಟೆಗೆ ಪೂರೈಸುತ್ತಿದ್ದ ಚೀನಾ ಈಗ ಆಹಾರ-ಕೃಷಿ ಉತ್ಪನ್ನಗಳಿಗೆ ಪೂರೈಸಲಾರಂಭಿಸಿದಂತಾಗಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಭಾರತ 2ನೇ ಅತಿ ದೊಡ್ಡ ಈರುಳ್ಳಿ ಉತ್ಪಾದಕ ದೇಶ. ಆದರೆ ದಿಢೀರನೆ ಈರುಳ್ಳಿ 80 ರಿಂದ 200 ರೂ.ಗಳವರೆಗೆ ತಲುಪಿದೆ.

ಆದರೆ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೋರೇಷನ್ ಎಂಬ ಸಾರ್ವಜನಿಕ ಟ್ರೇಡಿಂಗ್ ಏಜೆನ್ಸಿ ಜಾಗತಿಕ ಟೆಂಡರ್ ಕರೆದು ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಈರುಳ್ಳಿ ಖರೀದಿಸಿದೆ. ಈ ಕುರಿತು ದಿ ಪ್ರಿಂಟ್‍ಗೆ ದಾಖಲೆಗಳು ಲಭ್ಯವಾಗಿರುವುದಾಗಿ ವರದಿಯಲ್ಲಿ ತಿಳಿಸಿದೆ.

ಆದರೆ ಆಶ್ಚರ್ಯದ ಸಂಗತಿಯೆಂದರೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರ ವರದಿಗಾರರ ನೀಡಿರುವ ಮಾಹಿತಿಯ ಪ್ರಕಾರ 2020ರ ಜನವರಿ 31ರಂದು ಈರುಳ್ಳಿ ಭಾರತಕ್ಕೆ ಬರಬೇಕಿದೆ. ಬಂದ ನಂತರ ಈರುಳ್ಳಿ ಬೆಲೆ 70 ರಿಂದ 80 ರೂ.ಗಳಿಗೆ ಇಳಿಯಲಿದೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ನೆದರ್‍ಲ್ಯಾಂಡ್, ಈಜಿಪ್ತ್, ಇರಾನ್ ಮತ್ತು ರಷ್ಯಾಗಳಿಂದ ಈರುಳ್ಳಿ ತರಿಸಿಕೊಳ್ಳುತ್ತಿರುವುದಾಗಿ ವರದಿ ಉಲ್ಲೇಖಿಸಿದೆ.

ನವೆಂಬರ್‍ನಲ್ಲಿಯೇ ಸರ್ಕಾರ 1.2 ಲಕ್ಷ ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ಎಂಎಂಟಿಸಿ ಕೇವಲ 40,000 ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯಲ್ಲಿ ತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪೈಕಿ 11,000 ಮೆಟ್ರಿಕ್ ಟನ್ ಈರುಳ್ಳಿಯನ್ನು ಕಳೆದ ವಾರ ಆರ್ಡರ್ ಮಾಡಲಾಗಿತ್ತು. ಈ ಪೈಕಿ 290 ಮೆಟ್ರಿಕ್ ಟನ್ ಈರುಳ್ಳಿ ಭಾರತದ ಬಂದರನ್ನು ಈಗಾಗಲೇ ತಲುಪಿದೆ.

ಚೀನಾದಿಂದ ಬಂದರೂ ದರದಲ್ಲಿ ಹೆಚ್ಚೇನು ವ್ಯತ್ಯಾಸವಾಗುತ್ತಿಲ್ಲ. 600 ಡಾಲರ್ (42,702ರೂ.)ಗೆ ಮೆಟ್ರಿಕ್ ಟನ್‍ನಂತೆ ಈರುಳ್ಳಿ ಆಮದು ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿತ್ತು. ಆದರೆ ಚೀನಾದಿಂದ ಆಮದಾಗುತ್ತಿರುವ ಈರುಳ್ಳಿ ಟನ್‍ಗೆ 714 ಡಾಲರ್ (50,886 ರೂ)ಗಳ ದರಕ್ಕೆ ಭಾರತಕ್ಕೆ ಬರುತ್ತಿದೆ. ಭಾರತ ಸರ್ಕಾರದ ಆಮದು ನೀತಿ ಹಲವು ದೇಶಗಳು ಬಿಡ್ ಮಾಡಲು ಮುಂದಾಗದಂತೆ ಮಾಡಿದೆ. ಹಾಗಾಗಿ ಚೀನಾ ಮತ್ತು ಟರ್ಕಿಗಳಿಂದ ಮಾತ್ರಕ್ಕೆ ಸದ್ಯಕ್ಕೆ ಈರುಳ್ಳಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: AgricultureChinaEgyptFarmersMarketNirmala SitaramanOnion PriceTarki Onionಈಜಿಪ್ಟ್‌ಈರುಳ್ಳಿ ಬೆಲೆಕೃಷಿಚೀನಾಟರ್ಕಿ ಈರುಳ್ಳಿನಿರ್ಮಲ ಸೀತಾರಾಮನ್ಮಾರುಕಟ್ಟೆರೈತರು
Previous Post

ಕರ್ನಾಟಕದಲ್ಲಿ ಅಕ್ರಮ ವಲಸಿಗರಿಗೆ ಸಿದ್ಧವಾಗಿದೆ ಜೈಲು?

Next Post

ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada