• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಪ್ರಕರಣದಲ್ಲಿ ಮತ್ತೊಂದು ಯಶಸ್ಸು ಸಾಧಿಸಿದ ED

by
June 10, 2020
in ದೇಶ
0
ನೀರವ್‌ ಮೋದಿ
Share on WhatsAppShare on FacebookShare on Telegram

ಮಹತ್ವದ ಕಾರ್ಯಾಚರಣೆಯಲ್ಲಿ ಜಾರಿ ನಿರ್ದೇಶನಾಲಯವು ದೇಶದ ಬ್ಯಾಂಕಿಂಗ್‌ ಗೆ ವಂಚಿಸಿ, ಅಕ್ರಮ ಹಣ ವರ್ಗಾವಣೆ ನಡೆಸಿ ಪಲಾಯನ ಮಾಡಿದ್ದ ಉದ್ಯಮಿಗಳಾದ ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿ ಒಡೆತನದ ಸಂಸ್ಥೆಗಳಿಗೆ ಸೇರಿದ ವಜ್ರ ಮತ್ತು ಮುತ್ತುಗಳನ್ನು ಹಾಂಗ್‌ ಕಾಂಗ್‌ ನಿಂದ ವಾಪಾಸ್‌ ಭಾರತಕ್ಕೆ ಮರಳಿ ತರುವಲ್ಲಿ ಇಡಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ADVERTISEMENT

ಸುಮಾರು 1,350 ಕೋಟಿ ರೂಪಾಯಿಯ 2300 ಕ್ಕೂ ಅಧಿಕ ಕೆಜಿಯ ವಜ್ರ, ಮುತ್ತು ಹಾಗೂ ಚಿನ್ನಾಭರಣಗಳನ್ನ ಇಡಿ ಅಧಿಕಾರಿಗಳು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 108 ಪ್ಯಾಕೇಜ್‌ ಗಳ ರೂಪದಲ್ಲಿ ಮುಂಬೈನ ಬಂದರಿನಲ್ಲಿ ತಂದಿಳಿಸಲಾಯಿತು ಅಂತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ 32 ಪ್ಯಾಕೆಜ್‌ ಗಳು ನೀರವ್‌ ಮೋದಿ ಸಾಮ್ಯದ ಕಂಪೆನಿಗೆ ಸೇರಿದ್ದರೆ, ಉಳಿದೆಲ್ಲವೂ ಚೋಕ್ಸಿ ಒಡೆತನದ ಕಂಪೆನಿಗೆ ಸೇರಿದ್ದಾಗಿ ಹೇಳಲಾಗಿದೆ. ಇವರಿಬ್ಬರು ಈ ಎಲ್ಲಾ ಸರಕುಗಳ ಜೊತೆಗೆ ಹಾಂಗ್‌ ಕಾಂಗ್‌ ನಿಂದ ದುಬೈಗೆ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ 2018 ರಲ್ಲಿ ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

48 ರ ಹರೆಯದ ನೀರವ್‌ ಮೋದಿ ಹಾಗೂ 60 ರ ಹರೆಯದ ಮೆಹುಲ್‌ ಚೋಕ್ಸಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಲ್ಲಿ ನಕಲಿ ಗ್ಯಾರಂಟಿಗಳನ್ನ ಇರಿಸಿ ಸಾಲಗಳನ್ನ ಪಡೆದಿದ್ದರು. ಈ ಕುರಿತು ಸಿಬಿಐ ತನಿಖೆಗೆ ಮುಂದಾಗುತ್ತಲೇ ಇವರಿಬ್ಬರೂ 2018 ರಲ್ಲಿ ದೇಶ ಬಿಟ್ಟು ಪಲಾಯನಗೈದಿದ್ದರು. ಇಬ್ಬರ ಮೇಲೂ ಮುಂಬೈಯ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗೆ 15 ಸಾವಿರ ಕೋಟಿ ರೂಪಾಯಿ ವಂಚಿಸಿರುವ ಆರೋಪವಿದ್ದು, ಸದ್ಯ ಜಾರಿ ನಿರ್ದೇಶನಾಲಯ (ED) ಅದರ ತನಿಖೆಯಲ್ಲಿ ನಿರತವಾಗಿದೆ.

ನೀರವ್‌ ಮೋದಿಯನ್ನ ಕಳೆದ ವರುಷವೇ ಲಂಡನ್‌ ನಲ್ಲಿ ಬಂಧಿಸಿರುವ ಇಡಿ ಅಧಿಕಾರಿಗಳು, ಭಾರತಕ್ಕೆ ಕರೆತರಲು ಕಾನೂನು ಮೊರೆ ಹೋಗಿದ್ದಾರೆ. ಇನ್ನು ನೀರವ್‌ ಮೋದಿ ಬ್ಯಾಂಕ್‌ ಗೆ ನೀಡಬೇಕಿರುವ ಹಣವನ್ನ ಮರಳಿ ಪಡೆಯುವ ಉದ್ದೇಶದಿಂದ ಈಗಾಗಲೇ ನೀರವ್‌ ಮೋದಿಗೆ ಸೇರಿದ ರಾಲ್ಸ್‌ ರಾಯ್ಸ್‌ ಕಾರು, ಖ್ಯಾತ ಚಿತ್ರಕಾರ ಎಂಎಫ್‌ ಹುಸೇನ್‌ ಹಾಗೂ ಅಮೃತಾ ಶೆರ್ಗಿಲ್ ರಚನೆಯ ಚಿತ್ರಗಳು ಹಾಗೂ ಐಷಾರಾಮಿ ಕೆಲವು ಸರಕುಗಳನ್ನ ಈಗಾಗಲೇ ಹರಾಜು ಹಾಕಿ ಹಣ ಪಡೆಯಲಾಗಿದೆ. ಇದೀಗ ಇಡಿ ಅಧಿಕಾರಿಗಳು 1350 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನ ವಾಪಾಸ್‌ ತರುವಲ್ಲಿ ಸಾಧ್ಯವಾಗಿದ್ದು, ವಿಜಯ್‌ ಮಲ್ಯ ಬಳಿಕ ನೀರವ್‌ ಮೋದಿ ಕೇಸ್‌ ನಲ್ಲೂ ಭಾರತ ಯಶಸ್ಸಿನ ಹೆಜ್ಜೆ ಇರಿಸಿದಂತಾಗಿದೆ.

Tags: EDMehul ChoksiNirav Modiಜಾರಿ ನಿರ್ದೇಶನಾಲಯನೀರವ್ ಮೋದಿಮೆಹುಲ್ ಚೋಕ್ಸಿ
Previous Post

ಕರೋನಾ: ರಾಜ್ಯದಲ್ಲಿ ಇಳಿಕೆ ಕಂಡ ಸಕ್ರಿಯ ಪ್ರಕರಣಗಳ ಸಂಖ್ಯೆ

Next Post

ಕರೋನಾಯ ತಸ್ಮೈ ನಮಃ; ಸಂಸತ್ ಅಧಿವೇಶನವೂ ವರ್ಚ್ಯುಯಲ್!

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
ಶೋಬಾ ಕರಂದ್ಲಾಜೆ ಕಾರು ಡಿಕ್ಕಿಯಾಗಿ ವ್ಯಕ್ತಿ ಬಲಿಯಾಗಿರುವ ಘಟನೆ

ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

March 30, 2026
Next Post
ಕರೋನಾಯ ತಸ್ಮೈ ನಮಃ; ಸಂಸತ್ ಅಧಿವೇಶನವೂ ವರ್ಚ್ಯುಯಲ್!

ಕರೋನಾಯ ತಸ್ಮೈ ನಮಃ; ಸಂಸತ್ ಅಧಿವೇಶನವೂ ವರ್ಚ್ಯುಯಲ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada