• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಚೀನಾ-ಭಾರತ ಗಡಿ ಬಿಕ್ಕಟ್ಟು; ಸೂಕ್ತ ಮಾಹಿತಿ ನೀಡುತ್ತಿಲ್ಲವೇಕೆ ಕೇಂದ್ರ ಸರಕಾರ!?

by
June 11, 2020
in ದೇಶ
0
ಚೀನಾ-ಭಾರತ ಗಡಿ ಬಿಕ್ಕಟ್ಟು; ಸೂಕ್ತ ಮಾಹಿತಿ ನೀಡುತ್ತಿಲ್ಲವೇಕೆ ಕೇಂದ್ರ ಸರಕಾರ!?
Share on WhatsAppShare on FacebookShare on Telegram

ಚೀನಾ-ಭಾರತ ಗಡಿ ವಿಚಾರ ಸಂಬಂಧ ಲಡಾಖ್‌ ಪ್ರದೇಶದಲ್ಲಿ ತಲೆದೋರಿದ ಬಿಕ್ಕಟ್ಟು ದೇಶದೊಳಗಿನ ರಾಜಕೀಯ ಬೆಳವಣಿಗೆಗೂ ಕಾರಣವಾಗಿದೆ. ಒಂದು ಮೂಲದ ಪ್ರಕಾರ ಚೀನಾ ಭಾರತದ ಕೆಲವು ಕಡೆ ಅತಿಕ್ರಮಣ ನಡೆಸಿದೆ ಅನ್ನೋ ಆರೋಪ ಕೇಳಿ ಬಂದಿದ್ದರೆ, ಇನ್ನೊಂದೆಡೆ ಚೀನಾ ಹಾಗೂ ಭಾರತ ದೇಶಗಳ ಸೈನಿಕರು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದ ಲಡಾಕ್‌ ಭಾಗದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ ಎಂದು ಚೀನಾ ಹಾಗೂ ಭಾರತ ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೇ ಇದನ್ನ ANI ಕೂಡಾ ವರದಿ ಮಾಡಿವೆ.

India and China disengage at multiple points in Eastern Ladakh. Troops and infantry combat vehicles moved back by 2.5 km by People’s Liberation Army in Galwan area, Patrolling Point 15 and Hot Springs area. India has also moved some of its troops back: Top Govt Sources to ANI pic.twitter.com/2wIrBm67HD

— ANI (@ANI) June 9, 2020


ಆದರೆ ಈ ಕುರಿತು ಇದೀಗ ರಾಜಕೀಯ ಜಂಗೀಕುಸ್ತಿಯೂ ಶುರುವಾಗಿದೆ. ಚೀನಾದ ಅತಿಕ್ರಮಣದ ಬಗ್ಗೆ ಪ್ರಧಾನಿ ಮೋದಿ ಮೌನವನ್ನ ಕಾಂಗ್ರೆಸ್‌ ಪ್ರಶ್ನಿಸುತ್ತಿದ್ದರೆ, ಬಿಜೆಪಿ ನಾಯಕರು ಇದೆಲ್ಲ ಜಾಲತಾಣದಲ್ಲಿ ನಡೆಸುವ ಚರ್ಚೆ ಅಲ್ಲ ಎನ್ನುತ್ತಿದ್ದಾರೆ. ಆದರೆ ಭಾರತ-ಚೀನಾ ಗಡಿ ಉದ್ವಿಗ್ನತೆ ಬಗ್ಗೆ ಮಾತಾಡಲು ಭಾರತೀಯ ರಾಜತಾಂತ್ರಿಕ ಯಾವ ಕಾರಣಕ್ಕೆ ಹಿಂದೇಟು ಹಾಕುತ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʼದಿ ವೈರ್‌ʼ ಪ್ರಕಟಿಸಿದ ವರದಿಯನ್ನ ಮುಂದಿರಿಸಿ ಲಡಾಖ್‌ ನಲ್ಲಿ ಚೀನಾ ಭಾರತದ ಕೆಲವು ಪ್ರಾಂತ್ಯಗಳನ್ನ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾಗಿ ಟ್ವೀಟ್‌ ಮಾಡಿದ್ದಾರೆ. ಮಾತ್ರವಲ್ಲದೇ ಈ ಕುರಿತು ಪ್ರಧಾನಿ ಮಾತಾಡದೇ ಇರೋದನ್ನೂ ಪ್ರಶ್ನಿಸಿದ್ದಾರೆ.

The Chinese have walked in and taken our territory in Ladakh.

Meanwhile

The PM is absolutely silent and has vanished from the scene.https://t.co/Cv06T6aMvU

— Rahul Gandhi (@RahulGandhi) June 10, 2020


ಇದಕ್ಕೆ ಪ್ರತಿಕ್ರಿಯೆ ಅನ್ನೋ ಕಾನೂನು ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟ್ಟರ್‌ ನಲ್ಲಿ ಇಂತಹ ವಿಚಾರಗಳಿಗೆ ಪ್ರಶ್ನಿಸೋದು ಸರಿಯಲ್ಲ ಎಂದಿದ್ದಾರೆ.

Rahul Gandhi should know that questions related to international matters like China should not be asked on social media.
Also he is the same person who asked for evidence after Balakot airstrikes & over 2016 Uri attack. pic.twitter.com/dD1xIJrKsX

— Ravi Shankar Prasad (@rsprasad) June 10, 2020


ಇನ್ನು ರಾಹುಲ್‌ ಗಾಂಧಿಗೆ ಬೆಂಬಲವಾಗಿ ನಿಂತ ಕಾಂಗ್ರೆಸ್ ನಾಯಕ ಮನೀಶ್‌‌ ತಿವಾರಿ, ಲಡಾಖ್‌ ನಲ್ಲಿ ಏನಾಗಿದೆ ಅನ್ನೋ ಸತ್ಯವನ್ನ ಸಚಿವರು ಜನರಿಗೆ ತಿಳಿಸುವ ಬದಲು ಅಪ್ರಜ್ಞಾಪೂರ್ವಕ ನಡೆದುಕೊಂಡಿರುವುದು ದುರಾದೃಷ್ಟಕರ. ಪ್ರಶ್ನೆ ಕೇಳಿದ ವಿಪಕ್ಷದ ವಿರುದ್ಧ ಕೆಂಗಣ್ಣು ಬೀರುವ ಬದಲು, ಭಾರತದ ಭೂಮಿ ಅತಿಕ್ರಮಿಸಿದವರ ವಿರುದ್ಧ ಕೇಂದ್ರ ಸರಕಾರ ಕೆಂಗಣ್ಣು ಬೀರಬೇಕಾದ ಅಗತ್ಯವಿದೆ ಅಂತಾ ಮನೀಶ್‌ ತಿವಾರಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

देश के कानून मंत्री ने कांग्रेस पार्टी, पूर्व राष्ट्रीय अध्यक्ष पर बहुत ही अनुचित और पूरी तरह से गैर-जिम्मेदाराना राजनीतिक हमला बोला।
हम उनको बताना चाहते हैं कि भारतीयता और राष्ट्रीयता किसी की बपौती नहीं है: श्री @ManishTewari#रक्षा_मंत्री_जवाब_दो pic.twitter.com/UMTWXhIONO

— Congress (@INCIndia) June 10, 2020


ಇದರ ಬೆನ್ನಿಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಟ್ವೀಟ್‌ ವೊಂದು ಮಾಡಿದ್ದು, ಸಶಸ್ತ್ರ ಪಡೆಗಳ ಪರಿಣತರು ರಾಹುಲ್‌ ಗಾಂಧಿ ವಿರುದ್ಧ ನೀಡಿರುವ ಪತ್ರಿಕಾ ಪ್ರಕಟಣೆಯನ್ನ ಟ್ವೀಟ್‌ ಮಾಡಿ #RahulInsultsArmy ಅಂತಾ ಹ್ಯಾಷ್‌ ಟ್ಯಾಗ್‌ ಮೂಲಕ ರಾಹುಲ್‌ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Press statement by Armed Forces Veterans on DEPLORABLE tweets/comments of Rahul Gandhi on present India-China situation at the Ladakh Border.
As usual #RahulInsultsArmy pic.twitter.com/x1REJkjnzo

— Sambit Patra (@sambitswaraj) June 11, 2020


ಆದರೆ ಟ್ವಿಟ್ಟರ್‌ ತುಂಬಾ ಚೀನಾ-ಭಾರತ ಗಡಿ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಲೇ ಇದೆ. ಐದು ಪೆಟ್ರೋಲಿಂಗ್‌ ಪಾಯಿಂಟ್‌ ನಲ್ಲಿ ಪಾಂಗಾಂಗ್‌ ಹಾಗೂ ಚುಶುಲ್‌ ಕಣಿವೆಗಳ ಮೂರು ಪೆಟ್ರೋಲಿಂಗ್‌ ಪಾಯಿಂಟ್‌ (PP 14, PP 15, PP 17) ನಿಂದ ಮಾತ್ರ ಚೀನಿ ಸೈನಿಕರು ಹಿಂದೆ ಸರಿದಿದ್ದು, ಆದರೆ ಗಾಲ್ವಾನ್‌ ಕಣಿವೆ ಬಗ್ಗೆ ಇದುವರೆಗೂ ಸೇನಾಧಿಕಾರಿಗಳು ನಡೆಸಿದ ಮಾತುಕತೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದೆ. ಈ ಕುರಿತು ಟ್ವೀಟರ್‌ ನಲ್ಲಿ ಹಲವು ವಿಚಾರಗಳೂ ಹರಿದಾಡುತ್ತಿದೆ. ಅಲ್ಲದೇ ಚೀನಾ ಇನ್ನೊಂದೆಡೆ ಗಡಿಯಲ್ಲಿ ಸೇನೆ ಜಮಾಯಿಸಿದೆ ಎನ್ನಲಾಗುತ್ತಿದೆ.

#बीजेपी_लोकतंत्र_पर_दाग_है
Status on India/China border after the talks till date is below. China din't even talk on Galwan valley and considered it as it's own. Do read and make yourself aware!!! pic.twitter.com/I4FSB9fc7j

— Ali Bux (@aliibux) June 11, 2020


ADVERTISEMENT

ಇಷ್ಟಾಗುತ್ತಲೇ ಚೀನಾ-ಭಾರತ ನಡುವಿನ ಗಡಿ ವಿವಾದ ಶಾಂತಿಯುತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ, ದೇಶದ ಪ್ರಧಾನ ಮಂತ್ರಿಗಳು ಈ ಕುರಿತು ಧ್ವನಿ ಎತ್ತಿಲ್ಲ. ಕಳೆದ ಮೇ ತಿಂಗಳಿನಲ್ಲಿಯೇ ಇಂತಹದ್ದೊಂದು ಸಮಸ್ಯೆ ಗಡಿಯಲ್ಲಿ ತಲೆದೋರಿದ್ದರೂ ಭಾರತ ರಾಜತಾಂತ್ರಿಕ ಮಾತುಕತೆಗೂ ಮುಂದಾಗದಿರುವುದು ಅಚ್ಚರಿ ತಂದಿದೆ. ಈ ಬಗ್ಗೆ ಪ್ರಶ್ನಿಸುವ ವಿಪಕ್ಷಗಳಿಗೆ, ಸಾರ್ವಜನಿಕರಿಗೆ ಉತ್ತರ ನೀಡುವ ಗೋಜಿಗೂ ಕೇಂದ್ರ ಸರಕಾರ ಮುಂದಾಗದಿರುವುದು ಮತ್ತು ಅದನ್ನೇ ಇರಿಸಿ ರಾಜಕೀಯ ಮುಂದುವರೆಸುತ್ತಿರುವುದು ಕಂಡರೆ ಭಾರತ ಚೀನಾ ಮುಂದೆ ಧ್ವನಿ ಎತ್ತುವ ಬದಲು ವಿಪಕ್ಷಗಳನ್ನ ಬಾಯಿ ಮುಚ್ಚಿಸುವ ಆತುರತೆ ಮೆರೆದಂತಿದೆ.

Tags: Central Govtchina-india border disputeladakhRahul Gandhiಕೇಂದ್ರ ಸರಕಾರಚೀನಾ-ಭಾರತ ಗಡಿ ವಿವಾದರಾಹುಲ್ ಗಾಂಧಿಲಡಾಖ್‌
Previous Post

ಧಾರ್ಮಿಕ ಸ್ವಾತಂತ್ರ್ಯ: ಅಮೇರಿಕ ವರದಿಯನ್ನು ತಿರಸ್ಕರಿಸಿದ ಭಾರತ

Next Post

KSRTC ನೌಕರರ ನಿವೃತ್ತಿ ಪಡೆದುಕೊಳ್ಳಲೆಂದೇ ರಚನೆಯಾಗಿದೆ ಸಮಿತಿ!

Related Posts

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
0

ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ (Kempegowda International Airport) ಕರ್ನಾಟಕದ...

Read moreDetails

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

July 8, 2025

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

July 8, 2025

CM Siddaramaiah: ನಾರಾಯಣ ಬರಮನಿ ಕೇಸ್ – ಮುಜುಗರದಿಂದ ಪಾರಾದ ಸರ್ಕಾರ..!!

July 8, 2025
Next Post
KSRTC ನೌಕರರ ನಿವೃತ್ತಿ ಪಡೆದುಕೊಳ್ಳಲೆಂದೇ ರಚನೆಯಾಗಿದೆ ಸಮಿತಿ!

KSRTC ನೌಕರರ ನಿವೃತ್ತಿ ಪಡೆದುಕೊಳ್ಳಲೆಂದೇ ರಚನೆಯಾಗಿದೆ ಸಮಿತಿ!

Please login to join discussion

Recent News

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
Top Story

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

by ಪ್ರತಿಧ್ವನಿ
July 8, 2025
Top Story

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

by ಪ್ರತಿಧ್ವನಿ
July 8, 2025
Top Story

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

by ಪ್ರತಿಧ್ವನಿ
July 8, 2025
Top Story

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

by ಪ್ರತಿಧ್ವನಿ
July 8, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada