ಕ್ಯಾರವಾನ್ ಪತ್ರಕರ್ತರ ಮೇಲೆ ಹಲ್ಲೆ: ಸು- ಮೊಟು ದಾಖಲಿಸಿದ ಪ್ರೆಸ್ ಕೌನ್ಸಿಲ್

ಆಗಸ್ಟ್‌ 11 ರಂದು ʼದ ಕ್ಯಾರವಾನ್‌ʼನ ಪತ್ರಕರ್ತರ ಮೇಲೆ ನಡೆದಂತಹ ಹಲ್ಲೆ ಮತ್ತು ದೌರ್ಜನ್ಯದ ಕುರಿತಾಗಿ, ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸು-ಮೋಟೊ(suo motu) ಪ್ರಕರಣ ದಾಖಲಿಸಿಕೊಂಡಿದೆ. ಈ ಸಂಬಂಧ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ದೆಹಲಿಯ ಪೊಲೀಸ್‌ ಕಮಿಷನರ್‌ ಮತ್ತು ಡೆಪ್ಯುಟಿ ಪೊಲೀಸ್‌ ಕಮಿಷನರ್‌ ಅವರಿಗೆ ನೋಟೀಸ್‌ ಕೂಡಾ ಜಾರಿ ಮಾಡಿದೆ. ನೋಟೀಸ್‌ನಲ್ಲಿ, ಘಟನೆಗೆ ಸಂಬಂಧಿಸಿದಂತೆ ವರದಿಯನ್ನು ಕೇಳಲಾಗಿದೆ.

ಆಗಸ್ಟ್‌ 5 ರಂದು ರಾಮಮಂದಿರ ಭೂಮಿ ಪೂಜೆ ನಡೆದ ಬಳಿಕ ಈಶಾನ್ಯ ದೆಹಲಿಯ ಸುಭಾಷ್‌ ಮೊಹಲ್ಲಾದ ಮಸೀದಿಯೊಂದರ ಮೇಲೆ ಏಕಾಏಕಿ ಕೇಸರಿ ಧ್ವಜ ಕಾಣಿಸಿಕೊಂಡಿರುವುದು ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಆಗಸ್ಟ್‌ 11ರಂದು ಈ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ‌ ಗುಂಪೊಂದು ಹಲ್ಲೆ ನಡೆಸಿತ್ತು. ಅದಾಗ್ಯೂ ಪೋಲಿಸರು ತಕ್ಷಣವೇ ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕಿದ್ದರು. ಈ ಘಟನೆಯ ಕುರಿತಂತೆ ಪ್ರಗತಿಪರ ಚಿಂತಕರು, ಪತ್ರಕರ್ತರು, ಜನಪರ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.

Also Read: ದೆಹಲಿ- ಪತ್ರಕರ್ತರ ಮೇಲಿನ ಗೂಂಡಾಗಿರಿ ಫ್ಯಾಸಿಸಂ ಲಕ್ಷಣ: ಅರುಂಧತಿ ರಾಯ್

Also Read: ಉ.ಪ್ರ ಪತ್ರಕರ್ತನ ಕೊಲೆ; ಪತ್ರಿಕಾ ಸ್ವಾತಂತ್ರ್ಯದ ಧಕ್ಕೆಗೆ ಮತ್ತೊಂದು ಉದಾಹರಣೆಯೇ?

Please follow and like us:

Related articles

Share article

Stay connected

Latest articles

Please follow and like us: