• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ನಟ ದರ್ಶನ್​ಗೆ ಬಿರಿಯಾನಿ ಊಟ.. ಸಮರ್ಥಿಸಿಕೊಂಡು ಹೋಂ ಮಿನಿಸ್ಟರ್​..

ಪ್ರತಿಧ್ವನಿ by ಪ್ರತಿಧ್ವನಿ
June 12, 2024
in ಸಿನಿಮಾ
0
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಲಿಂಗಾಯತ ಸಮುದಾಯ ಯುವಕ ಮೆಸೇಜ್​ ಮಾಡಿದ್ದ ಎನ್ನುವ ಒಂದೇ ಒಂದು ಕಾರಣಕ್ಕೆ ಕೊಲೆ ಮಾಡಿದ ಆರೋಪದಲ್ಲಿ ಬಂಧನ ಆಗಿರುವ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ನಿನ್ನೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 6 ದಿನಗಳ ಕಾಲ ಪೊಲೀಸ್​ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಫೇಮಸ್​ ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ತರಿಸಿಕೊಟ್ಟಿದ್ದಾರೆ ಪೊಲೀಸರು. ಪ್ರವಿತ್ರಾಗೌಡ ಹೊರತುಪಡಿಸಿ ಉಳಿದ 12 ಆರೋಪಿಗಳಿಗೆ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ‌ ಮಾಡಲಾಗಿತ್ತು. ಇದು ಎಷ್ಟು ಸರಿ ಅನ್ನೋ ಬಗ್ಗೆ ಪರ ವಿರೋಧ ಚರ್ಚೆ ನಡುವೆ, ಪೊಲೀಸ್ರ ಕ್ರಮವನ್ನು ಕರ್ನಾಟಕ ಸರ್ಕಾರದ ಹೋಂ ಮಿನಿಸ್ಟರ್​ ಸಮರ್ಥನೆ ಮಾಡಿಕೊಂಡಿದ್ದಾರೆ.

ADVERTISEMENT

ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿ ಕೊಟ್ಟ ವಿಚಾರದಲ್ಲಿ ಪೊಲೀಸರ ನಡೆ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಿರಿಯಾನಿ ಊಟ ತಂದು ಕೊಟ್ಟ ಬಗ್ಗೆ ಗೃಹ ಸಚಿವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ನನಗೆ ಗೊತ್ತಿಲ್ಲ. ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ವಲ್ಲ..? ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ..? ಚಿಕನ್ ತರಿಸಿಕೊಟ್ರಾ ಗೊತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಪೊಲೀಸ್ರ ಕೆಲಸವನ್ನು ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ನಡುವೆ ಪೊಲೀಸ್​ ಠಾಣೆಯಲ್ಲಿ ದರ್ಶನ್​ ಮತ್ತೊಂದು ಬೇಡಿಕೆ ಇಟ್ಟಿರುವುದು ಗೊತ್ತಾಗ್ತಿದೆ.

ನಟ ದರ್ಶನ್ ಸಿಗರೇಟ್ ಬೇಕು ಎಂದು ಪೊಲೀಸ್ರ ಮುಂದೆ ಬೇಡಿಕೆ ಇಟ್ಟಿದ್ದಾನೆ ಅನ್ನೋದು ಗೊತ್ತಾಗಿದೆ. ಆರೋಪಿ ದರ್ಶನ್ ಪೊಲೀಸ್​ ಕಸ್ಟಡಿಯಲ್ಲಿ ಸಿಗರೇಟ್ ಬೇಕೆಂದು ಕೇಳುತ್ತಿದ್ದಾನೆ. ಆದರೆ ಸಿಗರೇಟ್ ನೀಡಲು ಸಾಧ್ಯವಿಲ್ಲ ಅಂತ ದರ್ಶನ್ ಬೇಡಿಕೆ ನಿರಾಕರಣೆ ಮಾಡಿದ್ದಾರಂತೆ ಪೊಲೀಸ್ರು. ಗೃಹ ಸಚಿವರೇ ಸಿಗರೇಟ್​ ಅವಶ್ಯಕತೆ ಬಿದ್ದಿದೆ. ದರ್ಶನ್​ ಇನ್ನು ಆರೋಪಿ ಮಾತ್ರ ಅಪರಾಧಿಯಲ್ಲ, ಸಿಗರೇಟ್​​ಗೆ ವ್ಯವಸ್ಥೆ ಮಾಡಬಹುದಲ್ಲವೇ ಅನ್ನೋ ಕುಹಕದ ಮಾತು ಕೇಳುವಂತಾಗಿದೆ. ನಟ ದರ್ಶನ್​ ಸ್ಟಾರ್​ ಅನ್ನೋ ಕಾರಣಕ್ಕೆ ಬಿರಿಯಾನಿ ತರಿಸಿಕೊಟ್ಟಿರಬಹುದು. ಆದರೆ ಓರ್ವ ಸಾಮಾನ್ಯ ಅಪರಾಧಿ ಯಾವುದೋ ಒಂದು ಕೇಸ್​ನಲ್ಲಿ ಈ ರೀತಿ ಅರೆಸ್ಟ್​ ಆದಾಗಾ ಎಲ್ಲಿದ್ದು ಬಿರಿಯಾನಿ ಬರುತ್ತದೆ..? ಆಗಲೂ ವ್ಯವಸ್ಥೆ ಆಗುತ್ತಾ..? ಆತನನ್ನೂ ಸಾಯಿಸಲು ಆಗಲ್ಲ ಅಲ್ಲವೇ..?

ದರ್ಶನ್​ ರಕ್ಷಣೆ ಇಬ್ಬರು ಸಚಿವರು ಪ್ರಯತ್ನ ಮಾಡ್ತಿದ್ದಾರೆ ಅನ್ನೋ ವಿಚಾರಕ್ಕೂ ಪರಮೇಶ್ವರ್​​ ಪ್ರತಿಕ್ರಿಯೆ ನೀಡಿದ್ದು, ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ದರ್ಶನ್​ನನ್ನು ಬಚಾವ್​ ಮಾಡಲು ಪ್ರಭಾವಿ ರಾಜಕಾರಣಿಗಳು ಕರೆ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವಂತೆ ಯಾರು ಪ್ರಯತ್ನ ಮಾಡಿಲ್ಲ. ನನ್ನ ಹತ್ತಿರ ಅಂತೂ ಯಾರೊಬ್ಬರೂ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳೋಕೆ ಅವಕಾಶವಿದೆ ಅದನ್ನು ಪೊಲೀಸ್ರು ತೆಗೆದುಕೊಳ್ತಾರೆ. ಸರ್ಕಾರದಿಂದ ನಾವ್ಯಾರು ಮಧ್ಯಪ್ರವೇಶ ಮಾಡಲ್ಲ. ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ. ರೇಣುಕಾಸ್ವಾಮಿ ಕುಟುಂಬದ ಪರವಾಗಿ ಸರ್ಕಾರ ಏನು ಮಾಡಬಹುದು ಅನ್ನೋದನ್ನ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'Darshan Arrest
Previous Post

ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಗೆ ಮಾಹಿತಿಯೇ ಇಲ್ಲ; ವಕೀಲ

Next Post

ದರ್ಶನ್ ಮತ್ತು ಟೀಂ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್

Related Posts

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….
ಸಿನಿಮಾ

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

by ಪ್ರತಿಧ್ವನಿ
May 2, 2026
0

ಬಾಲಿವುಡ್ ನಟ ಆಮೀರ್ ಖಾನ್ ಇತ್ತೀಚೆಗೆ ತಮ್ಮ ವೈಯಕ್ತಿಕ ಭಯದ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಮೊದಲಿನಂತೆ ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ ಎಂಬ...

Read moreDetails
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

April 29, 2026
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

April 29, 2026
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
Next Post
ನಟ ದರ್ಶನ್​ಗೆ ಬಿರಿಯಾನಿ ಊಟ.. ಸಮರ್ಥಿಸಿಕೊಂಡು ಹೋಂ ಮಿನಿಸ್ಟರ್​..

ದರ್ಶನ್ ಮತ್ತು ಟೀಂ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada