ಫೆಬ್ರವರಿ 28, ರಾಷ್ಟ್ರೀಯ ವಿಜ್ಞಾನದ ದಿನ. ವಿಜ್ಞಾನ ದಿನದ ಅಂಗವಾಗಿ ಶಾಲೆಗಳಲ್ಲಿ ಸೈನ್ ಎಕ್ಸಿಬಿಷನ್ ನಡೆಸಲಾಗುತ್ತದೆ. ಶಾಲೆಗಳ ಶಕ್ತಿ, ಸಾಮರ್ಥ್ಯ ಹಾಗು ಆಸಕ್ತಿ ಮೇಲೆ ಈ ರೀತಿಯ ಕಾರ್ಯಕ್ರಮಗಳು ಜರುಗುತ್ತವೆ. ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಯಾವುದೇ ಪ್ರಯೋಗವೂ ಇಲ್ಲ, ಅದಕ್ಕೆ ಬೇಕಾದ ಉಪಕರಣಗಳೂ ಇಲ್ಲ ಎನ್ನುವಂತೆ ಇರುತ್ತವೆ. ಆದರೆ ಇಲ್ಲೊಂದು ಜೋಡಿ, ತಮ್ಮಲ್ಲಿರುವ ವಿಜ್ಞಾನದ ಮೇಲಿನ ಆಸಕ್ತಿಯನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನದ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಲು ಕೆಲಸ ಮಾಡುತ್ತಿದೆ.


MSW ಓದಿಕೊಂಡಿರುವ ಚೈತನ್ಯಗೌಡ ಹಾಗು ಎಂಜಿನಿಯರ್ ಆಗಿರುವ ಪತಿ ಭರತ್ ಎನ್ ಜೊತೆಗೆ ಸೇರಿಕೊಂಡು ನೆಕ್ಸಿ (NEXZE) ಅನ್ನೋ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆ ಮೂಲಕ ಪ್ರಾಥಮಿಕವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಸಿಲಾಬಸ್ ಬೇಸ್ ಸೈನ್ಸ್ ಮಾಡ್ಯುಲ್ಸ್’ ಮಾಡುವ ಕಾರ್ಯಗಾರ ಹಮ್ಮಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ಕಾಲ ವಿಜ್ಞಾನದ ಮಾದರಿಗಳ ಮೇಲೆ ಅಧ್ಯಯನ ಮಾಡಿದ್ದು, 2 ತಿಂಗಳಿ ಈ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡಲಾಯ್ತು. ನಿನ್ನೆ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷವಾಗಿ ಕೊತ್ತನೂರು ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಮಾಡ್ಯುಲ್ ಪ್ರದರ್ಶನ ಮತ್ತು ವಿವರಣೆ ಕೊಡಿಸಲಾಯ್ತು. ಜೊತೆಗೆ ಮಾಡ್ಯುಲ್ ತಯಾರಿಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯ್ತು.


ನೆಕ್ಸಿ (NEXZE) ಸಂಸ್ಥೆ ಜೊತೆಗೆ ಕ್ರಿಸ್ತು ಜಯಂತಿ ಕಾಲೇಜು ಆಡಳಿತ ಮಂಡಳಿ ಹಾಗು ವಿದ್ಯಾರ್ಥಿಗಳು ಕೈ ಜೋಡಿಸಿದ್ದು, ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕರಿಸಿದ್ದಾರೆ. ಮೊದಲಿಗೆ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಾದರಿ ಬಗ್ಗೆ ತರಬೇತಿ ಕೊಟ್ಟು ರಾಷ್ಟ್ರೀಯ ವಿಜ್ಞಾನ ದಿನದಂದು ಮಕ್ಕಳಲ್ಲಿ ವಿಜ್ಞಾನದ ಅರಿವು ಮೂಡಿಸಲಾಯ್ತು. ಮಕ್ಕಳನ್ನು ವಿಜ್ಞಾನದ ಕಡೆಗೆ ಸೆಳೆಯುವುದು ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶ. 2 ತಿಂಗಳ ಕಾಲ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಸಾರ್ಥಕ ಭಾವ ಬಂದಿದೆ ಎಂದಿದ್ದಾರೆ ಚೈತನ್ಯಗೌಡ. ಇನ್ನು DIY ಅಂದ್ರೆ Do It Yourself ಅನ್ನೋ ಪರಿಕಲ್ಪನೆಯಲ್ಲಿ ನೆಕ್ಸಿ (NEXZE) ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.


ನೆಕ್ಸಿ (NEXZE) ಸಂಸ್ಥೆ ವಿಜ್ಞಾನದ ಪ್ರಾತ್ಯಕ್ಷಿಕೆ ಅಥವಾ ಪ್ರಯೋಗಗಳ ಮೂಲಕ ಮಕ್ಕಳು ಹಾಗು ಶಿಕ್ಷಕ ವರ್ಗಕ್ಕೆ ಪಠ್ಯಾಧಾರಿತ ತರಬೇತಿ ನೀಡಲು ಸದಾ ಸಿದ್ದವಿದ್ದು, ಸಂಸ್ಥೆಯ ಮುಖ್ಯಸ್ಥರಾದ ಚೈತನ್ಯಗೌಡ ಅವರನ್ನು ಇ-ಮೇಲ್ chaithanyagowda11@gmail.com ಮೂಲಕ ಸಂಪರ್ಕ ಮಾಡಬಹುದು. ಜೊತೆಗೆ ಇನ್‌ಸ್ಟಾಗ್ರಾಂ ಖಾತೆ ಲಿಂಕ್ nexze_youngengineerprogram ಮೂಲಕವೂ ಸಂಪರ್ಕ ಮಾಡಬಹುದು. ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಪರ್ಕ ಮಾಡಿದರೆ, ಪ್ರಾಯೋಗಿಕ ಪಾಠ ಲಭ್ಯವಾಗಲಿದೆ. ಇನ್ನು ವೈಯಕ್ತಿಕವಾಗಿಯೂ ಮಕ್ಕಳ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ತಯಾರು ಮಾಡುವುದಕ್ಕೂ ಈ ಸಂಸ್ಥೆ ಸಹಕಾರ ನೀಡಲಿದೆ. ಈ ರೀತಿಯ ವಿಜ್ಞಾನದ ಕೆಲಸಕ್ಕೆ ತೊಡಗಿಸಿಕೊಂಡಿರುವ ನೆಕ್ಸಿ (NEXZE) ಸಂಸ್ಥೆ, ಮುಂದಿನ ದಿನಗಳಲ್ಲಿ ಮಕ್ಕಳೇ ಹತ್ತಾರು ಹೊಸ ಸಂಶೋಧನೆಗಳ ಕಡೆಗೆ ಮುಖ ಮಾಡುವಂತೆ ಆಸಕ್ತಿ ಮೂಡಿಸುವ ಉದ್ದೇಶ ಮತ್ತು ಧ್ಯೇಯ ಹೊಂದಿದೆ.

