ಸ್ಯಾಂಡಲ್ವುಡ್ನ(sandalwood) ಮೋಹನ ತಾರೆ ನಟಿ ರಮ್ಯಾ ನಿನ್ನೆ ಕಾಂಗ್ರೆಸ್(congress) ಪರವಾಗಿ ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಮಂಡ್ಯದ ಗಂಡು ಅಂಬರೀಷ್ ಸಾವನ್ನಪ್ಪಿದಾಗ ಬಾರದ ರಮ್ಯಾ ಈಗ ಏಕೆ ಬಂದಿದ್ದಾರೆ..?ಎಂದು ರಮ್ಯಾ(ramya) ವಿರುದ್ದ ಅಂಬರೀಷ್ ಅಭಿಮಾನಿಗಳು(ambareesh fans) ಆಕ್ರೋಶ ವ್ಯಕ್ತಪಡಿಸಿದ್ದರು. ಅಂಬರೀಷ್ ನಿಧನರಾದಾಗ ಬರಲಿಲ್ಲ..ಜಿ. ಮಾದೇಗೌಡ ನಿಧನರಾದಾಗ ಬರಲಿಲ್ಲ. ಮಂಡ್ಯ ಜನ ಸಂಕಷ್ಟದಲ್ಲಿದ್ದಾಗ ಬರಲಿಲ್ಲಾ. ಈಗ ಯಾವ ನೈತಿಕತೆ ಇಟ್ಟುಕೊಂಡು ಮತಯಾಚನೆ ಮಾಡಲು ಬರ್ತಿದ್ದಾರೆ ಎಂದು ಟೀಕೆ ವ್ಯಕ್ತವಾಗಿತ್ತು. ಎಲ್ಲಾ ಆರೋಪಗಳಿಗೂ ರಮ್ಯಾ ಸಮಾಧಾನದ ಉತ್ತರ ಕೊಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು(election) ಗಮನದಲ್ಲಿ ಇಟ್ಟುಕೊಂಡು ಜಾಣನಡೆ ಇಟ್ಟಿದ್ದಾರೆ. ನಾನು ಮಂಡ್ಯದ(mandya) ಮಗಳು ಎಂದಿರುವ ರಮ್ಯಾ, ನಾನೊಬ್ಬಳು ಗೌಡ್ತಿ ಎನ್ನುವ ಮೂಲಕ ಹಾಲಿ ಸಂಸದೆ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.
ಟ್ಯೂಮರ್ ಸರ್ಜರಿ ಆಗಿದ್ದರಿಂದ ನಾನು ಅಂತ್ಯಕ್ರಿಯೆಗೆ ಬರಲಿಲ್ಲ..
ಮಂಡ್ಯದಲ್ಲಿ(mandya) ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ರಮ್ಯಾ, ನಾನು ಮಂಡ್ಯಕ್ಕೆ ಹಾಗಾಗ್ಗೆ ಬಂದು ಹೋಗ್ತಿದ್ದೆ.. ಮೊನ್ನೆ ಮೊನ್ನೆ ನಿಮಿಷಾಂಭ ದೇವಸ್ಥಾನಕ್ಕೂ ಕೂಡ ಬಂದಿದ್ದೆ. ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ ಎನ್ನುವುದಕ್ಕೆ ನೀವು ಪ್ರಶ್ನೆ ಮಾಡ್ತಿದ್ದೀರ. ನಾನು ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ನಿರ್ಧಾರ ನಾನು ಮಾಡಿಲ್ಲ. ಅಂಬರೀಷ್(ambareesh) ಅವರು ನಿಧನರಾದಾಗ ನನಗೆ ಟ್ಯೂಮರ್ ಬಂದಿತ್ತು, ಸರ್ಜರಿ ಮಾಡಿಸಿಕೊಂಡಿದ್ದೆ. ಹಾಗಾಗಿ ನಾನು ಅವರ ಅಂತ್ಯಕ್ರಿಯೆ ಬರಲು ಆಗಲಿಲ್ಲ. ನನ್ನ ಸ್ವಭಾವ ಎಲ್ಲವನ್ನ ಮಾಧ್ಯಮಗಳ(media) ಎದುರು ಹಂಚಿಕೊಳ್ಳುವುದಲ್ಲ. ಬೇರೆಯವರು ಕ್ಯಾಮರಾ ಮುಂದೆ ಬಂದು ಎಲ್ಲವನ್ನೂ ಹೇಳ್ತಾರೆ. ನಾನು ಚಿಕ್ಕವಳಿದ್ದಾಗಿನಿಂದ ನನ್ನ ಕೆಲಸದ ಬಗ್ಗೆಯಷ್ಟೆ ಮಾತನಾಡ್ತಿನಿ. ಯಾವುದೇ ವೈಯಕ್ತಿಕ ವಿಚಾರ ಮಾತನಾಡಲ್ಲ. ಆದ್ರೆ ಕೆಲವರು ಇದರ ಬಗ್ಗೆಯೇ ಅಪಪ್ರಚಾರ ಮಾಡ್ತಾರೆ. ಆದ್ರೆ ನಾನು ತಲೆಕೆಡಿಸಿಕೊಳ್ಳಲ್ಲ. ಸರ್ಜರಿ ಆದ ಬಳಿಕ ನನಗೆ ಆಟೋ ಇಮ್ಯೂನ್ ಕಂಡಿಷನ್ ಕೂಡ ಇತ್ತು. ಇದನ್ನೆಲ್ಲ ಹೇಳಿ ಸಿಂಪತಿ ಪಡೆಯಲು ನನಗೆ ಇಷ್ಟ ಇಲ್ಲ ಎಂದಿದ್ದಾರೆ.
ಮಾತು ಮಾತಿಗೂ ಸುಮಲತಾ ಟಾರ್ಗೆಟ್ ಆದಂತಿತ್ತು..!?
ಸದ್ಯಕ್ಕೆ ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ, ಮುಂದೆ ನೋಡಣ ಎಂದಿರುವ ಮಾಜಿ ಸಂಸದೆ ರಮ್ಯಾ, ನಾನು ಸದ್ಯಕ್ಕೆ ಸಿನಿಮಾದಲ್ಲಿ ಪ್ರೊಡಕ್ಷನ್(production) ಮಾಡ್ತಿದಿನಿ. ಸುಮ್ಮನಿರುವ ಬದಲು ಪ್ರೊಡಕ್ಷನ್ ಮಾಡ್ತಿದ್ದೀನಿ. ಉತ್ತರಾಕಾಂಡ ಎಂಬ ಸಿನಿಮಾವನ್ನ ಪ್ರೊಡಕ್ಷನ್ ಮಾಡ್ತಿದಿನಿ. ಹಿಂದೆ ಮಂಡ್ಯ ಜನಕ್ಕಾಗಿ ತೊಟ್ಟಿ ಮನೆ ಮಾಡಿ ಇಲ್ಲೆ ಇರ್ತಿನಿ ಎಂಬ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಮಂಡ್ಯದ ಗೋಪಾಲಪುರದಲ್ಲಿ ನಮ್ಮ ತಾತನ ತೊಟ್ಟಿ ಮನೆ ಇದೆ. ನಾನೊಂದು ತೊಟ್ಟಿ ಮನೆ ಮಾಡಬೇಕು ಎಂಬ ಆಸೆ ಇದೆ, ಆದ್ರೆ ಅದು ಯಾವಾಗ ಈಡೇರುತ್ತೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಚುನಾವಣೆಯಲ್ಲಿ(election) ಸೋತ ಬಳಿಕ ರಮ್ಯಾ ಮಂಡ್ಯ ಖಾಲಿ ಮಾಡಿದ್ರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಯಾವಾಗಲೂ ಗೌಡ್ತಿನೇ ಇದನ್ನ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಕೂಡ ಮಂಡ್ಯ. ನಾನು ಕಷ್ಟದಲ್ಲಿದ್ದಾಗ ಮಂಡ್ಯ ಜನರು ನನ್ನ ಜೊತೆ ಇದ್ದು ಸಪೋರ್ಟ್ ಮಾಡಿದ್ದಾರೆ. ಅವರ ಮೇಲಿನ ಗೌರವ ಯಾವತ್ತು ಕಡಿಮೆ ಆಗಲ್ಲ. ಬರೀ ರಾಜಕೀಯ ಅಲ್ಲ, ಈ ಊರಿನಲ್ಲಿ ನನಗೆ ಕುಟುಂಬದ ಸಂಬಂಧವಿದೆ ಎಂದಿದ್ದಾರೆ.
ಗೌಡರ ಹುಡುಗ ಇದ್ದರೆ ನೋಡಿ, ಮದುವೆ ಆಗೋಣ..!
ನಾನು ಗೌಡ್ತಿ ಎಂದಿದ್ದ ಸುಮಲತಾಗೆ(sumalata) ಟಾಂಗ್ ಕೊಟ್ಟಿರುವ ರಮ್ಯಾ, ನಾನು ಮಂಡ್ಯದ ಮಗಳು, ನನಗೆ ಮಾಧ್ಯಮಗಳಲ್ಲಿ ಎಲ್ಲವೂ ಹೇಳಿ ಪ್ರಚಾರ ಗಿಟ್ಟಿಸುವ ಬುದ್ಧಿ ಇಲ್ಲ ಎನ್ನುವ ಮೂಲಕ ಸುಮಲತಾ ಹೆಸರನ್ನು ಹೇಳದೆ ಚಾಟಿ ಬೀಸಿದ್ದಾರೆ. ಇನ್ನು ರಾಜಕಾರಣದ(politics) ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎನ್ನುವ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಖಾಡಕ್ಕೆ ಎಂಟ್ರಿ ಕೊಡ್ತೇನೆ ಎಂದಿದ್ದಾರೆ. ಇನ್ನು ನಟಿ ರಮ್ಯಾ ಮದುವೆ ಬಗ್ಗೆ ಪ್ರಸ್ತಾಪ ಆದಾಗ ಹುಡುಗನನ್ನ ನನಗೆ ಮೊದಲು ಹುಡುಕಿ. ನನಗೆ ಗೌಡರ ಹುಡುಗ ಸಿಕ್ತಾನೆ ಅಂದ್ರೆ ಹುಡುಕಿ. ನನಗೂ ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ ಮದುವೆ ಆಗ್ತಿನಿ ಎನ್ನುವ ಮೂಲಕ ಮಂಡ್ಯ ಜನರ ಭಾವನೆಯನ್ನು ಹಿಡಿದಿಟ್ಟುಕೊಳ್ಳುವ ಸಂದೇಶ ನೀಡಿದ್ದಾರೆ. ಜೆಡಿಎಸ್(JDS) ಭದ್ರಕೋಟೆಗೆ ಲಗ್ಗೆ ಹಾಕುವ ಪ್ಲ್ಯಾನ್ ಮಾಡಿರುವ ಕಾಂಗ್ರೆಸ್, ರಮ್ಯಾ ಮೂಲಕ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಯೋಜನೆ ರೂಪಿಸಿದಂತಿದೆ.