ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಮೈಸೂರಿನ ವರುಣ ಕ್ಷೇತ್ರವು ಈ ಬಾರಿಯ ಹೈ ವೋಲ್ಟೇಜ್ ಕಣವಾಗಿದ್ದು ಈ ಬಾರಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಸಿಗಲಿದೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ .

ವರುಣ ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಸಿದ್ದರಾಮಯ್ಯ ನಿನ್ನೆ ರಾತ್ರಿಯೇ ಮೈಸೂರಿಗೆ ಆಗಮಿಸಿದ್ದಾರೆ. ರಾತ್ರಿಯಿಡೀ ಬೆಂಬಲಿಗರ ಜೊತೆಯಲ್ಲಿ ಗುಪ್ತ ಸಭೆ ನಡೆಸಿದ ಸಿದ್ದರಾಮಯ್ಯ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ವರುಣ ಕ್ಷೇತ್ರದ ಫಲಿತಾಂಶ ಕಣ್ತುಂಬಿಕೊಳ್ಳೋಕೆ ಸಿದ್ದರಾಮಯ್ಯ ಆಗಮಿಸಿದ್ದಾರೆ.
ಇತ್ತ ಸಿದ್ದರಾಮಯ್ಯರನ್ನು ಸೋಲಿಸಲು ಜೆಡಿಎಸ್ ಹಾಗೂ ಬಿಜೆಪಿ ಹೆಣೆದಿದ್ದ ತಂತ್ರ ಸಕ್ಸಸ್ ಆಗಬಹುದಾ ಎಂಬ ಅನುಮಾನ ಕೂಡ ಆರಂಭಗೊಂಡಿದೆ. ಆದರೆ ಎಲ್ಲಾ ಸಮೀಕ್ಷೆಗಳಲ್ಲಿ ಸಿದ್ದರಾಮಯ್ಯ ವರುಣದಲ್ಲಿ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದ್ದು ಮೂರು ಪಕ್ಷದ ಯಾವುದೇ ಅಭ್ಯರ್ಥಿ ವರುಣದಲ್ಲಿ ಗೆದ್ದರೂ ಸಹ ಆ ಅಭ್ಯರ್ಥಿಗೆ ಪ್ರಬಲ ಸ್ಥಾನ ಸಿಗೋದಂತೂ ಗ್ಯಾರಂಟಿ ಎನ್ನಲಾಗ್ತಿದೆ.