ಬ್ಲಾಕ್ ಹೆಡ್ಸ್ ಸಮಸ್ಯೆಯನ್ನು ನೀವು ಹೆಚ್ಚು ಜನರಲ್ಲಿ ನೋಡಿರ್ತೀರ.ಅದೇ ರೀತಿ ವೈಟ್ ಹೆಡ್ಸ್ ಕೂಡ ಪ್ರತಿಯೊಬ್ಬರಲ್ಲೂ ಆಗಿರುತ್ತದೆ..ಕೆಲವರಲ್ಲಿ ಅದು ಹೆಚ್ಚಿರುತ್ತದೆ.. ಇದರಿಂದ ಮುಖದ ಅಂದ ಕಡಿಮೆಯಾಗುತ್ತದೆ.ಭಯಾನಕ್ಕ ಕಿರಿಕಿರಿಯನ್ನು ಉಂಟುಮಾಡುತ್ತದೆ ಈ ವೈಟ್ ಹೆಡ್ಸ್..ಆಯ್ಲಿ ಫೇಸ್ ನಿಮ್ಮದಾಗಿದ್ರೆ ಈ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚು ಕಂಡುಬರುತ್ತದೆ..ವೈಟ್ ಹೆಡ್ಸ್ ಹೆಚ್ಚಿದ್ರೆ ಮೇಕಪ್ ಮಾಡುವುದಕ್ಕೂ ಕಿರಿ ಕಿರಿ.

ವೈಟ್ ಹೆಡ್ಸ್ ಅನ್ನಾ ರಿಮೂವ್ (remove)ಮಾಡಿಸುವುದಕ್ಕೆ ಕೆಲವರು ಸಲೂನ್ ಗೆ ಹೋಗಿ ಕ್ಲೀನ್ ಅಪ್ ಮಾಡಿಸ್ತಾರೆ ..ಸನ್ಸಿಟಿವ್ ಸ್ಕಿನ್ ಇದ್ರೆ ಕ್ಲೀನ್ ಅಪ್ ಮಾಡಿಸುವುದು ಕೂಡ ಒಂದು ರೀತಿಯ ಅಪಾಯ ಯಾಕೆ ಅಂತ ಹೇಳಿದ್ರೆ ಮೊಡವೆ ಆಗುವಂತ ಚಾನ್ಸಸ್ ಇರುತ್ತೆ ..ಹಾಗಾಗಿ ನ್ಯಾಚುರಲ್ ಆಗಿ ಮನೆಯಲ್ಲಿಯೇ ಈ ವೈಟ್ ಹೆಡ್ಸ್ ನ ಹೇಗೆ ರಿಮೂವ್ ಮಾಡಬಹುದು ಅನ್ನೋದರ ಡೀಟೇಲ್ಸ್ ಹೀಗಿದೆ..
ಎಗ್ ವೈಟ್
ಮೊಟ್ಟೆಯ ಬಿಳಿಯ ಭಾಗಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ನಂತರ ವೈಟ್ ಹೆಡ್ಸ್ ಆದ ಜಾಗದಲ್ಲಿ ಅದನ್ನ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಅದನ್ನ ತೆಗಿಬೇಕು ನಿಮಗೆ ಫೀಲ್ ಆದ ರೀತಿಯಲ್ಲಿ ಆ ಮಾಸ್ಕ್ ಬರುತ್ತದೆ ಅದ್ರಲ್ಲಿ ವೈಟ್ ಹೆಡ್ ಏನೇ ಇದ್ರೂ ಕೂಡ ಈಸಿಯಾಗಿ ರಿಮೂವ್ವಾಗುತ್ತದೆ ಸುಲಭವಾದ ರೆಮಿಡಿ

ಅರಿಶಿಣ
ಅರಿಶಿಣದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ವೈಟ್ ಹೆಡ್ಸ್ ರಿಮೂವ್ ಮಾಡೋದಕ್ಕೆ ಇದು ತುಂಬಾನೇ ಹೆಲ್ಪ್ ಫುಲ್. ಜೊತೆಗೆ ಇದರಿಂದ ಉಂಟಾಗುವಂತ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡೋದಕ್ಕೂ ಕೂಡ ಅರಿಶಿಣ ಒಳ್ಳೆಯದು. ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿನಕ್ಕೆ ಸ್ವಲ್ಪ ನೀರನ್ನು ಬೆರೆಸಿ ವೈಟ್ ಹೆಡ್ಸ್ ಆದ ಜಾಗದಲ್ಲಿ ಅಪ್ಲೈ ಮಾಡೋದ್ರಿಂದ ಬೇಗನೆ ವೈಟ್ ಹೆಡ್ ನಿವಾರಣೆ ಆಗುತ್ತದೆ ಹಾಗೂ ಅರಿಶಿನ ನಮ್ಮ ತ್ವಜೆಯ ಹೊಳಪನ್ನು ಹೆಚ್ಚಿಸುತ್ತದೆ..

ಅಲೋವೆರಾ
ಅಲೋವೆರದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ವೈಟ್ ಹೆಡ್ಸ್ ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ನೀವು ಅಲೋವೆರ ಜೆಲ್ ಅನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಬೇಕು ನಂತರ ಒಂದು ಕಾಟನ್ ಬಟ್ಟೆ ಇಂದ ಅದನ್ನ ಒರೆಸುವುದರಿಂದ ವೈಟ್ ಹೆಡ್ಸ್ ನಿವಾರಣೆಯಾಗುತ್ತದೆ..ಜೊತೆಗೆ ಸ್ಕಿನ್ ಅಲ್ಲಿ ಪೋರ್ಸ್ ಹೆಚ್ಚಿದ್ರು ಅದು ಸ್ಕಿನ್ ಟೈಟನ್ ಮಾಡುವುದಕ್ಕೆ ಸಹಕಾರಿ.
