ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಒಂದಲ್ಲ ಎರಡಲ್ಲ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಸಾಮಾನ್ಯವಾಗಿ ಕಂಡುಬರುವುದಂದ್ರೆ ಒಂದು ಉರಿಮೂತ್ರದ ಸಮಸ್ಯೆ ಹಾಗೂ ಹೆಚ್ಚು ಜನಕ್ಕೆ ಮೂಗಿನಲ್ಲಿ ರಕ್ತಸ್ರಾವ ಆಗುವಂಥದ್ದು ಇದು ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಕೂಡ ಈ ರಕ್ತಸ್ರಾವ ಕಂಡು ಬರುತ್ತದೆ, ಹೆಚ್ಚಾಗಿ ನಾವು ಬೇಸಿಗೆಯಲ್ಲಿ ದೇಹ ಹೀಟ್ ಆಗುತ್ತಾದೇ.. ಮೂಗಿನಲ್ಲಿ ರಕ್ತಸ್ರಾವ ಆಗ್ತಾ ಇದ್ರೆ ಅದನ್ನ ನೀವು ನೆಗ್ಲೆಟ್ ಮಾಡಿದೆ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಉತ್ತಮ.ಉಷ್ಣ ದೇಹ ಅಂತ ನಿಮಗೆ ಮೊದಲೇ ಗೊತ್ತಿದ್ರೆ. ಒಂದಿಷ್ಟು ಪ್ರಿಕಾಶನ್ಸ್ ತಗೊಳ್ಳುವಂಥದ್ದು ಒಳಿತು.
![](https://pratidhvani.com/wp-content/uploads/2024/05/IMG_7654.jpeg)
ಹೈಡ್ರೇಟ್ ಆಗಿರಿ
ಬೇಸಿಗೆಯಲ್ಲಿ ತಂಪು ದೇಹವರಿಗೂ ಕೂಡ ಉಷ್ಣತೆ ಹೆಚ್ಚಾಗುತ್ತದೆ, ಅದರಲ್ಲೂ ನಿಮ್ಮದು ಹೀಟ್ ಬಾಡಿ ಅಂತ ಗೊತ್ತಿದ್ರೆ , ಉಷ್ಣತೆ ಜಾಸ್ತಿ ಆಗುವಂತ ಸಾಧ್ಯತೆ ಹೆಚ್ಚುರುತ್ತದೆ. ಇಂಥ ಸಂದರ್ಭದಲ್ಲಿ ನೀವು ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯಬೇಕು, ನಿಮ್ಮ ದೇಹದಲ್ಲಿ ನೀರಿನ ಕೊರತೆ ಕಂಡು ಬಂದಲ್ಲಿ ಈ ಎಲ್ಲ ಸಮಸ್ಯೆಗಳು ಎದುರಾಗುತ್ತದೆ.ಇದರ ಜೊತೆಗೆ ನೀರಿನ ಅಂಶ ಇರುವಂತಹ ಹಣ್ಣು ತರಕಾರಿಗಳ ಸೇವನೆ ಮಾಡುವಂಥದ್ದು ಉತ್ತಮ ಅದ್ರಲ್ಲೂ ಸೌತೆಕಾಯಿ, ಕಲ್ಲಂಗಡಿ ಹಣ್ಣು ,ಮಸ್ಕ್ ಮೆಲ್ಲನ್ ಇಂತಹ ಹಣ್ಣು ಮತ್ತು ತರಕಾರಿಗಳು ತಿನ್ನೀ.
![](https://pratidhvani.com/wp-content/uploads/2024/05/IMG_7655.jpeg)
ಫ್ಯಾನ್ ಬಳಕೆ
ಬೇಸಿಗೆಯಲ್ಲಿ ಶೆಕೆ ಜಾಸ್ತಿ. ನಾವು ಹಗಲು ರಾತ್ರಿ ಎಂದು ನೋಡದೆ ಫ್ಯಾನನ್ನ ಹೆಚ್ಚಾಗಿ ಬಳಸ್ತೀವಿ. ಇದರಿಂದ ನಮಗೆ ನ್ಯಾಚುರಲ್ ಗಾಳಿ ಸಿಗುವುದಿಲ್ಲ ,ಫ್ಯಾನ್ ಬಳಕೆಯಿಂದಾಗಿ ಹೆಚ್ಚಿನವರಿಗೆ ಮೂಗು ಕಟ್ಟಿದಂತಾಗುತ್ತದೇ. ಫ್ಯಾನ್ ಬಾಲ್ಕ್ ತಕ್ಕಮಟ್ಟಿಗೆ ಕಡಿಮೆ ಮಾಡಿ . ಈ ಫ್ಯಾನ್ ಗಾಳಿಯಿಂದಲೂ ದೇಹದ ಉಷ್ಣತೆ ಹೆಚ್ಚಾಗುವಂತ ಚಾನ್ಸಸ್ ತುಂಬಾ ಇದೆ.
![](https://pratidhvani.com/wp-content/uploads/2024/05/IMG_7657-1.jpeg)
ಮಾಸ್ಕ್ ಬಳಸಿ
ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಮಾಸ್ಕ್ ಬಳಸುವುದು ಉತ್ತಮ.ಇಲ್ಲವಾದಲ್ಲಿ ಒಣಗಾಳಿಗೆ ನಿಮ್ಮ ಮಗುನ್ನ ಒಡ್ಡಿದಾಗ ಈ ಎಲ್ಲ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಡಸ್ಟ್ ಅಲರ್ಜಿ ಕೂಡ ಬೇಗನೆ ಶುರುವಾಗುತ್ತದೆ.
![](https://pratidhvani.com/wp-content/uploads/2024/05/IMG_7656-1.jpeg)
ಇದೆಲ್ಲದರ ಜೊತೆಗೆ ಸಿಟ್ರಿಕ್ ಅಂಶ ಇರುವಂತಹ ಹಣ್ಣುಗನ್ನ ಸೇವಿಸಿ. ನಿಂಬೆಹಣ್ಣಿನ ಜ್ಯೂಸ್ ,ಮೋಸಂಬಿ ಜ್ಯೂಸ್ ಅಥವಾ ಕಿತ್ತಲೆ ಹಣ್ಣಿನ ಜ್ಯೂಸನ್ನು ಸೇವಿಸಿ ಹಾಗೂ ವಿಟಮಿನ್ ಸಿ ಇರುವ ಆಹಾರವನ್ನು ತಿನ್ನೋದ್ರಿಂದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.