ಹೆಚ್ಚು ಜನ ಪ್ರತಿ ದಿನವೂ ಒಂದಿಷ್ಟು ಸಮಯವನ್ನು ವಾಕಿಂಗ್ ಗೆ ಅಂತ ಮೀಸಲಿಡುತ್ತಾರೆ. ವಾಕಿಂಗ್ ಮಾಡುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು, ಇದೊಂದು ರೀತಿಯ ಸಿಂಪಲ್ ಎಕ್ಸಸೈಜ್ ಆಗಿದ್ದರೂ ದೇಹಕ್ಕೆ ಆರೋಗ್ಯ ಪ್ರಯೋಜನಗಳು ತುಂಬಾನೇ ಇದೆ. ಅದರಲ್ಲೂ ವಾಕಿಂಗ್ ಮಾಡುವವರಿಗೋಸ್ಕರನೇ ಮಾರ್ಕೆಟ್ನಲ್ಲಿ ವಿಧವಿಧವಾದ ಶೂ ಹಾಗೂ ಚಪ್ಪಲಿಗಳು ಟ್ರೆಂಡ್ ಕ್ರಿಯೇಟ್ ಮಾಡಿದೆ.

ಆದ್ರೆ ವಾಕಿಂಗ್ ಮಾಡುವಾಗ ಯಾವುದೆ ರೀತಿಯ ಶೂ ಹಾಗೂ ಚಪ್ಪಲಿಗಳನ್ನು ಬಳಸದೆ ಬರೀ ಕಾಲಿನಲ್ಲಿ ವಾಕ್ ಮಾಡುವುದು ತುಂಬಾನೇ ಒಳ್ಳೆಯದು. ಮನುಷ್ಯನ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಚಿಕಿತ್ಸೆಗಳು ಉತ್ತಮ ಪರಿಹಾರವಾಗಿದೆ. ಸೂರ್ಯನ ಬಿಸಿಲು, ನೀರು ,ಮಣ್ಣು ,ಗಾಳಿ ಇವೆಲ್ಲವೂ ಕೂಡ ನಮಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಣ್ಣಿನ ಮೇಲೆ ಪಾದವನ್ನ ಊರಿದಾಗ ಒತ್ತಡದ ಬಿಂದುಗಳ ಸಕ್ರಿಯವಾಗುತ್ತದೆ ಮತ್ತು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೆ ಬರಿಗಾಲಿನಲ್ಲಿ ನಡೆಯುವುದರಿಂದ ಏನಿಲ್ಲ ಆರೋಗ್ಯ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಒತ್ತಡವನ್ನ ಕಡಿಮೆ ಮಾಡುತ್ತದೆ
ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳಲ್ಲಿನ ನರವನ್ನ ಉತ್ತೇಜಿಸುತ್ತದೆ. ಹಾಗೂ ಮುಖ್ಯವಾಗಿ ಸ್ವನಿಯಂತ್ರಿತ ನರಮಂಡಲವನ್ನ ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ.ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ದೀರ್ಘಕಾಲದ ನೋವಿಗೆ ಉತ್ತಮ ಪರಿಹಾರ
ಬರಿಗಾಲಿನಲ್ಲಿ ನಡೆಯುವುದರಿಂದ ಸಂಧಿವಾತದಂತ ದೀರ್ಘಕಾಲದ ನೋವಿಗೆ ಉತ್ತಮ ಪರಿಹಾರ ಎನ್ನಲಾಗುತ್ತದೆ ಹಾಗೂ ಉರಿಯುತ್ತದಂತ ಸಮಸ್ಯೆಗಳನ್ನ ನಿವಾರಣೆ ಮಾಡುತ್ತದೆ. ಹಾಗೂ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಸ್ವಲ್ಪ ಕಡಿಮೆ ಮಾಡುವ ಮೂಲಕ ಪ್ರತಿರಕ್ಷಕ ವ್ಯವಸ್ಥೆಯ ಚಟುವಟಿಕೆ ಮತ್ತು ನೋವಿನ ಮೇಲೆ ಪರಿಣಾಮ ಬೀರುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಪ್ರತಿದಿನ ಸ್ವಲ್ಪ ಹೊತ್ತು ಬರಿ ಕಾಲಿನಲ್ಲಿ ನಡೆಯುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಯಾವಾಗಲೂ ಮಣ್ಣು ಹಾಗೂ ಕಲ್ಲಿನ ಜೊತೆ ಆಟವಾಡುತ್ತಿರುತ್ತಾರೆ ಇದರಿಂದ ಅವರ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು..

ನಿದ್ರಾಹೀನತೆ ಸಮಸ್ಯೆ ನಿವಾರಣೆ
ಹೆಚ್ಚು ಜನಕ್ಕೆ ರಾತ್ರಿ ಹೊತ್ತು ಎಷ್ಟು ಸಮಯವಾದರೂ ನಿದ್ದೆ ಬರುವುದಿಲ್ಲ ನಿದ್ದೆ ಬಂದರೂ ಇದ್ದಕ್ಕಿದ್ದ ಹಾಗೆ ಎಚ್ಚರಾಗುತ್ತದೆ ಇಂತಹ ಸಮಸ್ಯೆಗಳು ಸಾಕಷ್ಟಿರುತ್ತದೆ. ಈ ರೀತಿ ಸಮಸ್ಯೆ ಇದ್ದರೂ ಪ್ರತಿ ದಿನ ಸಂಜೆಯ ಸಮಯದಲ್ಲಿ ಬರಿ ಗಾಳಿನಲ್ಲಿ ನಡೆಯುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.








