ಸನ್ ರೈಸರ್ಸ್ ಹೈದರಾಬಾದ್ ( SRH) ಮತ್ತು ಆರ್ಸಿಬಿ (RCB) ನಡುವಿನ ಪಂದ್ಯದ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಫಾಫ್ ಡ್ಯೂಪ್ಲೆಸಿಸ್ (dad duplesis )ಪ್ಯಾಟ್ ಕಮಿನ್ಸ್(pat cummins ) ಜೊತೆ ಮಾತನಾಡಿರುವ ವಿಡಿಯೋ ಮುಂಬೈ ಇಂಡಿಯನ್ಸ್ (Mİ) ಮತ್ತು ಆರ್ ಸಿ ಬಿ ನಡುವಿನ ಪಂದ್ಯದಲ್ಲಿ toss ನಲ್ಲೆ ಫಿಕ್ಸಿಂಗ್ ನಡೆದಿತ್ತು ಆರ್‌ಸಿಬಿ ತಂಡಕ್ಕೆ ಅಲ್ಲಿಂದಲೇ ಮೋಸ ಆರಂಭವಾಗಿತ್ತು ಎಂಬುದನ್ನ ಬಳಿ ವಿವರಿಸುವ ವಿಡಿಯೋ ಇದು.

ಮುಂಬೈ ಇಂಡಿಯನ್ಸ್ (Mumbai indians ) ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಸಾಕಷ್ಟು ವಿವಾದಗಳು ಹೊರಬಂದವು ಡಿಸಿಷನ್ಗಳು ಕೂಡ ವಿವಾದಕ್ಕೆ ಕಾರಣವಾದವು. ಇದೀಗ ಡ್ಯೂಪ್ಲಿಸಿಸ್ ಟಾಸ್ ಸಂದರ್ಭದಲ್ಲಿ ಏನಾಯಿತು ಎಂದು ವಿವರಿಸಿರುವ ವಿಡಿಯೋವನ್ನು ,ಹಾರ್ದಿಕ್ ಪಾಂಡ್ಯ (Hardik pandya) ಟಾಸ್ ಹಾಕಿದ ಸಂದರ್ಭದಲ್ಲಿ ನಡೆದ ಘಟನೆಯನ್ನು ಒಂದಕ್ಕೊಂದು ಹೋಲಿಕೆ ಮಾಡಿ ತೋರಿಸಲಾಗಿದೆ. ಮುಂಬೈ ಇಂಡಿಯನ್ಸ್ ಫೇವರ್ (favour) ಪರವಾಗಿ ಪರಿಸ್ಥಿತಿ ಇರೋದನ್ನ ಕಾಣಬಹುದಾಗಿದೆ.

ಈ ವಿಡಿಯೋದಲ್ಲಿ ಡ್ಯೂಪ್ಲೆಸಿಸ್ ಅಂದಿನ ಟಾಸ್ ಪ್ರಕ್ರಿಯೆ ಹೇಗಾಯಿತು ಎಂಬುದನ್ನ ವಿವರಿಸುತ್ತಿದ್ದಾರೆ . ಹಾರ್ದಿಕ್ ಪಾಂಡ್ಯ ಟಾಸ್ ಕಾಯಿನ್ನ ಹಿಂದಕ್ಕೆ ದೂರಕ್ಕೆ ಎಸೆಯುತ್ತಾರೆ ನೆಲದ ಮೇಲೆ ಬಿದ್ದ ಕಾಯಿನ್ ಮೇಲೆತ್ತಿ ಟಾಸ್ ವಿಜೇತರು ಯಾರು ಎಂದು ತೋರಿಸುವ ಸಂದರ್ಭದಲ್ಲಿ ಜಾವಗಲ್ ಶ್ರೀನಾಥ್ ಕಾಯಿನ್ ನನ್ನ ತಿರುಚಿದ್ದಾರೆ ಅನ್ನೋದು ಈ ವಿಡಿಯೋ ಮೂಲಕ ವೈರಲ್ ಆಗ್ತಾ ಇದೆ ರ್‌ಸಿಬಿ ಅಭಿಮಾನಿಗಳು ಈ ವಿಡಿಯೋವನ್ನು ಹೆಚ್ಚೆಚ್ಚು ಹಂಚಿಕೊಂಡು ಮುಂಬೈ ಇಂಡಿಯನ್ಸ್ ಮ್ಯಾಚ್ ಫಿಕ್ಸಿಂಗ್ ಚಾಂಪಿಯನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಆರ್‌ಸಿಬಿ ಅಭಿಮಾನಿಗಳಿಗೆ ಈ ಘಟನೆಗಳು ಇನ್ನಷ್ಟು ನೋವು ತಂದಿರೋದಂತೂ ಸತ್ಯ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.