Covid-19 ವಿರುದ್ದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ದೇಶ ಅಂದರೆ ಅದು ಭಾರತ. ಲಸಿಕೆ ಅಭಿಯಾನ (Vaccination Drive)ದಲ್ಲಿ ಈ ಹಿಂದೆ ಹೊಸ ದಾಖಲೆಯನ್ನು ನಿರ್ಮಿಸಿದ ಭಾರತ ಇದೀಗ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.
ದೇಶದಲ್ಲಿ ಇದುವರೆಗೂ 177.70 ಕೋಟಿ ಜನರಿಗೆ ಲಸಿಕೆ(Vaccine)ಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ. 14.08ಕೋಟಿ ಲಸಿಕೆ ಬಳಕೆಯಾಗದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಉಳಿದಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ದೇಶದ ಉದ್ದಗಲಕ್ಕೂ ಲಸಿಕೆ ಅಭಿಯಾನದ ವೇಗ ಹೆಚ್ಚಿಸಲು ಹಾಗೂ ಜನರಲ್ಲಿ ಲಸಿಕೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ದವಿರುವುದಾಗಿ ತಿಳಿಸಿದೆ. 2021ರ ಜನವರಿ 16ರಂದು ದೇಶಾದ್ಯಂತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.