ಚಾಮರಾಜನಗರ: ಇಂದು ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಾಳೆ (ಭಾನುವಾರ) ತಾಲ್ಲೂಕಿನ ಅವರ ಹುಟ್ಟೂರು ಹೆಗ್ಗವಾಡಿಯಲ್ಲಿ ನಡೆಯಲಿದೆ.
ಮೈಸೂರಿನ ಅವರ ಮನೆ, ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಲ್ಲಿಂದ ಮೃತದೇಹವನ್ನು ನಂಜನಗೂಡಿಗೆ ತಂದು, ರಾತ್ರಿ ಹುಟ್ಟೂರಿಗೆ ತರಲಾಗುವುದು.

ಹೆಗ್ಗವಾಡಿಯಲ್ಲಿರುವ ಅವರ ಜಮೀನಿನಲ್ಲಿ, ತಂದೆ ತಾಯಿ ಸಮಾಧಿ ಪಕ್ಕದಲ್ಲಿ, ಅಂತ್ಯಸಂಸ್ಕಾರ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.
ಎಸ್ ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಪದ್ಮಿನಿ ಸಾಹು ಹಾಗೂ ಅಧಿಕಾರಿಗಳು ಹೆಗ್ಗವಾಡಿಗೆ ಭೇಟಿ ನೀಡಿ ಅಂತ್ಯಕ್ರಿಯೆ ಸ್ಥಳ ಪರಿಶೀಲಿಸಿದ್ದಾರೆ.
ಅಂತಿಮ ದರ್ಶನಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.






