ಪಾಕಿಸ್ತಾನ ದೇಶ ಸದಾ ಸುದ್ದಿಯಲ್ಲಿ ಇರುತ್ತದೆ, ಆದರೆ ಈ ದೇಶದ ಹೆಸರಿನ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಪಾಕಿಸ್ತಾನ ಹೆಸರಿನ ಸೃಷ್ಟಿ ಭಾರತದ ಸಂಬಂಧದೊಂದಿಗ ಹೆಣೆದುಕೊಂಡಿದೆ. ಒಬ್ಬ ಭಾರತೀಯ ಮುಸ್ಲಿಂ ವಿದ್ಯಾರ್ಥಿ ಮೊದಲು ಈ ಹೆಸಟಿದ್ದಾನೆ.
ಪಾಕಿಸ್ತಾನ ಎಂದು ಹೆಸರಿಸಿದ ವ್ಯಕ್ತಿ ಚೌಧರಿ ರೆಹಮತ್ ಅಲಿ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದರು. ಆರೆ ಇವರು ಭಾರತದ ಗುಜರಾತ್ ಮೂಲದವರು. ಆಗ ಜನವರಿ 28, 1933 ರಂದು, ಚೌಧರಿ ರೆಹಮತ್ ಅಲಿ ಒಂದು ಸಣ್ಣ ಪುಸ್ತಕವನ್ನು ಪ್ರಕಟಿಸಿದರು. ಈ ಸಣ್ಣ ಪುಸ್ತಕದಲ್ಲಿ, ಅವರು ಮೊದಲು ಮುಸ್ಲಿಮರಿಗೆ ಪ್ರತ್ಯೇಕ ದೇಶವನ್ನು ಒತ್ತಾಯಿಸಿದರು ಮತ್ತು ಅದಕ್ಕೆ ಪಾಕಿಸ್ತಾನ ಎಂದು ಹೆಸರಿಸಿದರು. ನಂತರ ಅವರು “ಪಾಕಿಸ್ತಾನ: ದಿ ಫಾದರ್‌ಲ್ಯಾಂಡ್ ಆಫ್ ದಿ ಪಾಕ್ ನೇಷನ್” ಎಂಬ ಪುಸ್ತಕ ಬರೆದರು.
ಪಾಕಿಸ್ತಾನ ಎಂದರೆ ಪವಿತ್ರ ಜನರ ನಾಡು. ರಹಮತ್ ಅಲಿ ಥೇಮ್ಸ್ ನದಿಯ ದಡದಲ್ಲಿ ನಡೆಯುವಾಗ ಅವರು ಮೊದಲು ಆ ಹೆಸರನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು ಎನ್ನಲಾಗುತ್ತದೆ. ಆದರೆ ಪಾಕಿಸ್ತಾನ ಎಂಬ ಪದವು ಮೊದಲು ಜುಲೈ 1, 1928 ರಂದು ಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು.

ಚೌಧರಿ ರೆಹಮತ್ ಅಲಿ ತನ್ನ ಜೀವನದ ಬಹುಪಾಲು ಸಮಯವನ್ನು ಇಂಗ್ಲೆಂಡ್‌ನಲ್ಲಿ ಕಳೆದರು ಆದರೆ 1948 ರಲ್ಲಿ ಅವರು ಹೆಸರಿಸಿದ ದೇಶದಲ್ಲಿ ನೆಲೆಸುವ ಆಶಯದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು, ನಂತರ ಅವರು ಬೇರೆ ಬೇರೆ ಮುಸ್ಲಿಂ ದೇಶಕ್ಕೆ ತೆರಳಿಸಿದರು ಕೊನೆಗೆ ಮತ್ತೆ ಪಾಕಿಸ್ತಾನಕ್ಕ ಬರುವ ಮನಸ್ಸು ಮಾಡಿದರು ಆದರೆ ಅವರಿಗೆ ಪಾಕಿಸ್ತಾನಿ ಪಾಸ್‌ಪೋರ್ಟ್ ನಿರಾಕರಿಸಲಾಯಿತು ಮತ್ತು ಇಂಗ್ಲೆಂಡ್‌ಗೆ ಹಿಂತಿರುಗಲಾಯಿತು. ಅವರು 1951 ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಿಧನರಾದರು, ಆದರೆ ಪಾಕಿಸ್ತಾನ ಅವರು ಕಲ್ಪಿಸಿಕೊಂಡ ಹೆಸರನ್ನು ಹೊಂದಿತ್ತು.







