ಅಜ್ಜ ಮುತ್ತಜ್ಜನ ಆಸ್ತಿ ಪಡೆದುಕೊಳ್ಳುವುದ ಈಗ ಸುಲಭದ ಮಾತಲ್ಲಮ.ಬರೀ ವಂಶವೃಕ್ಷ ಇದ್ದರೆ ಆಸ್ತಿ ನಿಮ್ಮದಾಗುವುದಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು ಪತ್ತೆಹಚ್ಚಲು ಮತ್ತು ಅದನ್ನು ಕಾನೂನುಬದ್ಧವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಈ ಕೆಳಗಿನ 5 ಪ್ರಮುಖ ದಾಖಲೆಗಳು ಕಡ್ಡಾಯ.

ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸಲು ಮೂಲ ಹಕ್ಕು ಪತ್ರ ಬೇಕು. ನಂತರ ಪೂರ್ವಜರು ಆಸ್ತಿಯನ್ನು ಯಾವಾಗ ಮತ್ತು ಯಾರಿಂದ ಖರೀದಿಸಿದರು ಎಂಬುದಕ್ಕೆ ಮಾರಾಟ ಪತ್ರ ಅತ್ಯಗತ್ಯ. ಕುಟುಂಬದ ಸದಸ್ಯರ ನಡುವೆ ಆಸ್ತಿ ಈ ಹಿಂದೆ ಹಂಚಿಕೆಯಾಗಿದ್ದರೆ ವಿಭಜನಾ ಪತ್ರ ಬೇಕು.

ಆಸ್ತಿಯನ್ನು ಯಾರಾದರೂ ಉಡುಗೊರೆಯಾಗಿ ನೀಡಿದ್ದರೆ ದಾನ ಪತ್ರ ದಾಖಲೆ ಬೇಕು. ಆಸ್ತಿಯ ಮೂಲ ಮಾಲೀಕರು (ಅಜ್ಜ ಅಥವಾ ಮುತ್ತಜ್ಜ) ಮರಣ ಹೊಂದಿದ್ದಾರೆ ಎಂಬುದಕ್ಕೆ ಸರ್ಕಾರಿ ಮರಣ ಪ್ರಮಾಣಪತ್ರ ಬೇಕು. ಅದರ ಜೊತೆಗೆ, ನೀವು ಅವರ ನೇರ ರಕ್ತಸಂಬಂಧಿ ಮತ್ತು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಸಾಬೀತುಪಡಿಸಲು ತಹಸೀಲ್ದಾರ್ ಕಚೇರಿಯಿಂದ ಅಧಿಕೃತ ವಂಶವೃಕ್ಷ ಪಡೆಯುವುದು ಕಡ್ಡಾಯ.

ಆಸ್ತಿ ದಾಖಲೆಗಳಲ್ಲಿ ನಿಮ್ಮ ಹೆಸರು ಅಧಿಕೃತವಾಗಿ ದಾಖಲಾಗಲು ‘ಮ್ಯುಟೇಶನ್’ ಪ್ರಕ್ರಿಯೆ ನಡೆಯಬೇಕು. ಎಲ್ಲಾ ದಾಖಲೆಗಳೊಂದಿಗೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದಾಗ, ಕಂದಾಯ ಅಧಿಕಾರಿಗಳು ವಿಚಾರಣೆ ನಡೆಸಿ ನಿಮ್ಮ ಹೆಸರನ್ನು ಸರ್ಕಾರಿ ದಾಖಲೆಗಳಿಗೆ ಸೇರಿಸುತ್ತಾರೆ.

ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಲಭ್ಯವಿರುವ ಈ ‘ಇಸಿ’ (EC) ದಾಖಲೆಯು ಅತ್ಯಂತ ಮುಖ್ಯ. ಕಳೆದ 15 ರಿಂದ 30 ವರ್ಷಗಳಲ್ಲಿ ಆ ಆಸ್ತಿಯ ಮೇಲೆ ಯಾರಾದರೂ ಸಾಲ ಪಡೆದಿದ್ದಾರೆಯೇ? ಅಥವಾ ಯಾರಿಗಾದರೂ ಮಾರಾಟ ಮಾಡಲಾಗಿದೆಯೇ? ಎಂಬ

ಒಂದು ವೇಳೆ ನಿಮ್ಮ ಬಳಿ ಯಾವುದೇ ಪತ್ರಗಳಿಲ್ಲದಿದ್ದರೆ, ಆಸ್ತಿ ಇರುವ ಭಾಗದ ಕಂದಾಯ ಕಚೇರಿ ಅಥವಾ ಆನ್‌ಲೈನ್ ಪೋರ್ಟಲ್‌ನಲ್ಲಿ ‘ಪಹಣಿ’ ಪರಿಶೀಲಿಸಿ. ಇದರಲ್ಲಿ ಆಸ್ತಿಯ ಸರ್ವೆ ನಂಬರ್, ವಿಸ್ತೀರ್ಣ, ಮತ್ತು ಪ್ರಸ್ತುತ ಯಾರು ಸಾಗುವಳಿ ಮಾಡುತ್ತಿದ್ದಾರೆ ಎಂಬ ಸಂಪೂರ್ಣ ವಿವರವಿರುತ್ತದೆ. ಇದು ಆಸ್ತಿಯ ‘ಜಾತಕ’ವಿದ್ದಂತೆ.






