ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಗೆಲುವು ದಾಖಲಾಗ್ತಿಲ್ಲ ಅನ್ನೋ ಸಮಯದಲ್ಲಿ ದರ್ಶನ್ ಅಭಿನಯದ ಕಾಟೇರ ಸಿನಿಮಾ ಭರ್ಜರಿ ಲಾಭ ಗಳಿಸಿ ಬಾಕ್ ಆಫೀಸ್ ಸುಲ್ತಾನ ಅನ್ನೋ ಹೆಸರಿಗೆ ತಕ್ಕಂತೆ ಹಣ ಗಳಿಸಿತ್ತು. ಈ ನಡುವೆ 69 ನೇ ಫಿಲಂ ಫೇರ್ ಅವಾರ್ಡ್ನ 6 ಪ್ರತಿಷ್ಟಿತ ವಿಭಾಗಗಳ ಪ್ರಶಸ್ತಿಗಳ ಪಟ್ಟಿಯಲ್ಲಿ ಕಾಟೇರ ಹೆಸರು ನಾಮ ನಿರ್ದೇಶನ ಆಗಿರುವುದು ದರ್ಶನ್ಗೆ ಜೈಲಿನಲ್ಲಿದ್ದರೂ ಸಂತಸದ ಕ್ಷಣ.

ಕಾಟೇರ ಸಿನಿಮಾಗೆ ಫಿಲಂ ಫೇರ್ ಅವಾರ್ಡ್ ಬರೋದು ಮಿಸ್ ಆಗಲ್ಲ ಎನ್ನುತ್ತಿದೆ ಚಿತ್ರತಂಡ. ಇದಕ್ಕೆ ಕಾರಣ ಅಂದ್ರೆ 6 ವಿಭಾಗಗಳಲ್ಲಿ ಕಾಟೇರ ಸಿನಿಮಾ ನಾಮನಿರ್ದೇಶನ ಆಗಿದ್ದು, ಬೆಸ್ಟ್ ಆಕ್ಟರ್ ವಿಭಾಗದಲ್ಲಿ ನಟ ದರ್ಶನ್ ಹೆಸರು ಕೂಡ ನಾಮಿನೇಟ್ ಆಗಿದೆ. ದರ್ಶನ್ ಅಕ್ಕನ ಪಾತ್ರದಲ್ಲಿ ನಟಿಸಿರುವ ನಟಿ ಶೃತಿ ಕೂಡ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ನಾಮ ನಿರ್ದೇಶನ ಆಗಿದ್ಧಾರೆ.

ಕಾಟೇರ ಸಿನಿಮಾ ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಕನ್ನಡ ಚಿತ್ರ. ಚಿತ್ರ ಕಥೆ ಆಯ್ದುಕೊಂಡಿದ್ದ ವಸ್ತು ಸಾಕಷ್ಟು ಮಂದಿ ಸಿನಿಪ್ರೇಮಿಗಳನ್ನು ಸೆಳೆದಿತ್ತು. ಬೆಸ್ಟ್ ಸಿನಿಮಾ ವಿಭಾಗದಲ್ಲೂ ಕಾಟೇರ ಚಿತ್ರ ನಾಮಿನೇಟ್ ಆಗಿದ್ದು, ನಿರ್ದೇಶಕ ತರುಣ್ ಸುಧೀರ್ ಕೂಡ ಬೆಸ್ಟ್ ಡೈರೆಕ್ಟರ್ ಲಿಸ್ಟ್ನಲ್ಲಿ ನಾಮಿನೇಟ್ ಆಗಿದ್ದಾರೆ. ಇದು ಇಡೀ ಚಿತ್ರತಂಡ ಸಂತಸದಲ್ಲಿ ತೇಲುವಂತೆ ಮಾಡಿದೆ. ಆದರೆ ದರ್ಶನ್ ಜೈಲಿನಲ್ಲಿರುವ ನಡುವೆಯೂ ಕಾಟೇರನಿಗೆ ಶುಭ ಗಳಿಗೆ ಎನ್ನುವಂತಾಗಿದೆ.

ಸಂಗೀತ ನಿರ್ದೇಶಕ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಕಾಟೇರ ಚಿತ್ರದ ಹಾಡುಗಳೆಲ್ಲವು ಕೇಳುಗರ ಮನಸ್ಸನ್ನು ಗೆದ್ದಿದ್ದವು. ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ವಿಭಾಗ ಸೇರಿದಂತೆ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ವಿಭಾಗದಲ್ಲಿ ‘ಅದುವೇ ಪುಣ್ಯಾತ್ಮ’ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ನಾಮ ನಿರ್ದೇಶನ ಆಗಿದ್ದಾರೆ. ಸೈಮಾ ಆದ ಬಳಿಕ ಫಿಲಂ ಫೇರ್ನಲ್ಲಿ ಕನ್ನಡದ ಕಾಟೇರ ಹವಾ ಸೃಷ್ಟಿಸಿದ್ದಾನೆ ಅನ್ನಬಹುದು.
ಕೃಷ್ಣಮಣಿ