ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ನ ತನ್ನ 2ನೇ ಸೂಪರ್-8 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 72 ರನ್ಗಳಿಂದ ಸೋಲಿಸಿದೆ.ಈ ಸೋಲಿನೊಂದಿಗೆ ಜಿಂಬಾಬ್ವೆ ತಂಡ ಸೂಪರ್-8 ಹಂತದಿಂದ ನಿರ್ಗಮಿಸಿದ್ದರೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ.

ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಆದರೆ, ಇವರ ನಿರ್ಧಾರ ತಪ್ಪು ಎನ್ನುವಂತೆ ಭಾರತದ ಬ್ಯಾಟ್ಸ್ಮನ್ಗಳು ಆಟವಾಡಿದ್ದರಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 256 ರನ್ಗಳನ್ನು ನೀಡಿದರು.ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ಗರಿಷ್ಠ ಮೊತ್ತವಾಗಿದೆ. 2007ರಲ್ಲಿ ಶ್ರೀಲಂಕಾ ತಂಡ260 ರನ್ಗಳು ಗರಿಷ್ಠ ಮೊತ್ತವಾಗಿದೆ.

20 ಓವರ್ಗಳ ಆಟದಲ್ಲಿ ಜಿಂಬಾಬ್ವೆ 6 ವಿಕೆಟ್ಗೆ 184 ರನ್ ಮಾಡಿ ಸೋಲು ಕಂಡಿತು.ಮಾರ್ಚ್ 1 ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಪ್ರಮುಖ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡ ಸೆಮಿಫೈನಲ್ಗೇರಲಿದೆ. ಹಾಗೇನಾದರೂ ಮ್ಯಾಚ್ ಮಳೆಯಿಂದಾಗಿ ರದ್ದಾದರೆ, ನೆಟ್ ರನ್ರೇಟ್ ಆಧಾರದಲ್ಲಿ ವೆಸ್ಟ್ ಇಂಡೀಸ್ ಸೆಮಿಫೈನಲ್ಗೆ ಬರಲಿದೆ.

T20 ವಿಶ್ವಕಪ್ ನಲ್ಲಿ ಭಾರತದ ಗರಿಷ್ಠ ಮೊತ್ತಗಳು
1. 256/4: ಝಿಂಬಾಬ್ವೆ ವಿರುದ್ಧ, 2026
2. 218/4: ಇಂಗ್ಲೆಂಡ್ ವಿರುದ್ಧ, 2007
3. 210/2: ಅಫ್ಘಾನಿಸ್ತಾನ ವಿರುದ್ಧ, 2021
4. 209/9: ನಮೀಬಿಯಾ ವಿರುದ್ಧ, 2026
5. 205/5: ಆಸ್ಟ್ರೇಲಿಯಾ ವಿರುದ್ಧ, 2024






