ಗಾಯಗೊಂಡ ಜಸ್ ಪ್ರೀತ್ ಬುಮ್ರಾ ಬದಲಿ ಆಟಗಾರನ ಆಯ್ಕೆ ಇನ್ನೂ ಅಂತಿಮಗೊಳ್ಳುವ ಮುನ್ನವೇ ಭಾರತದ ಮತ್ತೊಬ್ಬ ವೇಗಿ ದೀಪಕ್ ಚಾಹರ್ ಟಿ-೨೦ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಸ್ ಪ್ರೀತ್ ಬುಮ್ರಾ ಗಾಯಗೊಂಡಿದ್ದರು. ಅಲ್ಲದೇ ಆಲ್ ರೌಂಡರ್ ದೀಪಕ್ ಚಾಹರ್ ಕೂಡ ಗಾಯಗೊಂಡಿರುವ ಕಾರಣ ಬದಲಿ ಆಟಗಾರನ ಆಯ್ಕೆ ಕಗ್ಗಂಟಾಗಿದೆ.
ಬಿಸಿಸಿಐ ಇನ್ನೂ ಯಾವುದೇ ಬದಲಿ ಆಟಗಾರನ ಆಯ್ಕೆ ಮಾಡಿಲ್ಲ. ಅಲ್ಲದೇ ನಿಯಮದ ಪ್ರಕಾರ ಬದಲಿ ಆಟಗಾರನ ಆಯ್ಕೆ ಮಾಡಬೇಕಾದರೆ ಐಸಿಸಿ ಅನುಮತಿ ಪಡೆದ ನಂತರವೇ ಆಟಗಾರ ತಂಡವನ್ನು ಸೇರಿಕೊಳ್ಳಬೇಕಿದೆ.

ಮಧ್ಯಮ ವೇಗಿಗಳಾದ ಜಸ್ ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಟಿ-೨೦ ವಿಶ್ವಕಪ್ ನಡೆಯಲಿರುವ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಲು ಸೂಚಿಸಲಾಗಿದೆ. ಈ ಮೂವರಲ್ಲಿ ಒಬ್ಬರು ಭಾರತ ಟಿ-೨೦ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.






