ಮನೆಯಿಂದ ಹೊರಡುವಾಗ ಹಿಜಾಬ್ ಅಥವಾ ಬುರ್ಖಾ ಧರಿಸಿ ಶಾಲಾ ಕಾಂಪೌಂಡಿನವರೆಗೆ ಬರಲಿ. ಆದರೆ ತರಗತಿಯಲ್ಲಿ ಪಾಠ ಕೇಳುವಾಗ ಇತರರಂತೆ, ಸಮವಸ್ತ್ರದಲ್ಲಿಯೇ ಪಾಠ ಕೇಳಬೇಕು. ಇದೇ ಸಂಪ್ರದಾಯ. ಹಾಗೂ ಸಿದ್ದರಾಮಯ್ಯ ಹಾಗೂ ಇತರ ಸಂಘಟನೆಗಳಿಗೆ ನಾನು ಕೇಳುವುದು ಒಂದೇ ಪ್ರಶ್ನೆ. ಈ ಪ್ರಕರಣವನ್ನು ವ್ಯಕ್ತಿ ಸ್ವಾತಂತ್ರ್ಯ ಧಕ್ಕೆ ಎಂದು ಕೇಳುತ್ತಿರುವ ನೀವು, ಮಸೀದಿಗಳಲ್ಲಿ ಮಹಿಳೆಯರನ್ನು ಏಕೆ ಸೇರಿಸುತ್ತಿಲ್ಲ ಎಂದು ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಇದು ವ್ಯಕ್ತಿ ಸ್ವಾತಂತ್ರ ಆಗುವುದಿಲ್ಲವೇ? ನಾನು ರಾಜ್ಯದ ಮುಸ್ಲಿಂ ಮಹಿಳೆಯರಿಗೆ ವಿನಂತಿ ಮಾಡುತ್ತೇನೆ. ತ್ರಿವಳಿ ತಲಾಕ್ ರದ್ದು ಮಾಡಿ ಭದ್ರತೆ ನೀಡಿದ್ದು ನಮ್ಮ ಮೋದಿ ಸರ್ಕಾರ. ಇದನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ, ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಿ ಎಂದು ಸುನಿಲ್ ಕುಮಾರ್ ಮಾತನಾಡಿದ್ದಾರೆ.
ಗೋಲ್ಡ್ ಸುರೇಶ್ ತಂದೆಯ ಬಗ್ಗೆ ಫೇಕ್ ನ್ಯೂಸ್ – ಈ ಸುಳ್ಳು ಸುದ್ದಿ ವೈರಲ್ ಆಗಿದ್ದು ಹೇಗೆ?
ಬಿಗ್ ಬಾಸ್ ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್...
Read moreDetails